ಗ್ಲಾಂಝಾ ನಂತರ ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ರೀಬ್ಯಾಡ್ಜ್ ಕಾರುಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಯು ಶೀಘ್ರದಲ್ಲೇ ಹೊಸ ಮಾದರಿಯ ಅರ್ಬನ್ ಕ್ರೂಸರ್ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮುಂಬರುವ ನವೆಂಬರ್ ಹೊತ್ತಿಗೆ ಗ್ರಾಹಕರ ಕೈ ಸೇರಲಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಮಾರುತಿ ಸುಜುಕಿ ನಿರ್ಮಾಣದ ಬಲೆನೊ ಹ್ಯಾಚ್‌ಬ್ಯಾಕ್ ಕಾರನ್ನು ಗ್ಲಾಂಝಾ ಎನ್ನುವ ಹೆಸರಿನೊಂದಿಗೆ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಮುಂಬರುವ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿಯಾಗಿ ಅರ್ಬನ್ ಕ್ರೂಸರ್ ಹೆಸರಿನ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಗ್ರಾಹಕರ ಕೈಸೇರಲು ಸಜ್ಜಾಗುತ್ತಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ರೀಬ್ಯಾಡ್ಜ್ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಅರ್ಬನ್ ಕ್ರೂಸರ್ ಬಿಡುಗಡೆಗಾಗಿ ಮೂಲ ರೂಪದ ವಿಟಾರಾ ಬ್ರೆಝಾ ಕಾರನ್ನು ಟೊಯೊಟಾ ಕಂಪನಿಗೆ ಪೂರೈಕೆ ಮಾಡುವ ಸಂಬಂಧ ಮಾರುತಿ ಸುಜುಕಿ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಹೊಸ ಕಾರು ನವೆಂಬರ್ ಹೊತ್ತಿಗೆ ಖರೀದಿಗೆ ಲಭ್ಯವಾಗಲಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಆರಂಭಿಕವಾಗಿ ರೂ.9 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಅರ್ಬನ್ ಕ್ರೂಸರ್ ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಅರ್ಬನ್ ಕ್ರೂಸರ್ ನಿರ್ಮಾಣಕ್ಕಾಗಿ ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಳ್ಳಲಾಗಿದ್ದು, ಕೂಡಾ ಬಹುತೇಕ ವಿಟಾರಾ ಬ್ರೆಝಾ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸೆಲ್ಟೊಸ್, ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ನಿರ್ಮಾಣದ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಇನ್ನು ಜಾರಿಗೆ ಬಂದಿರುವ ಹೊಸ ಬಿಎಸ್-6 ನಿಯಮದಿಂದಾಗಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆ ತಂದಿರುವ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್‌ಗಿಂತಲೂ ಕೆಳಗಿನ ಬಹುತೇಕ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕಾರುಗಳನ್ನೇ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಾರು ಬಿಡುಗಡೆ ಸಿದ್ದವಾದ ಟೊಯೊಟಾ

ಸದ್ಯ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯ ರೀಬ್ಯಾಡ್ಜ್ ಕಾರುಗಳ ಉತ್ಪಾದನೆಗಾಗಿ ಬೆಂಗಳೂರಿನ ಬಿಡದಿ ಘಟಕದಲ್ಲೇ ಅವಕಾಶ ನೀಡಿದ್ದು, ದಕ್ಷಿಣ ಭಾರತದಲ್ಲಿ ಹೊಸ ಕಾರು ಘಟಕ ಸ್ಥಾಪನೆ ಮುಂದಾಗಿದ್ದ ಮಾರುತಿ ಸುಜುಕಿ ಕಂಪನಿಗೆ ತನ್ನದೆ ಘಟಕದಲ್ಲೇ ಅವಕಾಶ ನೀಡುವ ಮೂಲಕ ಜಪಾನ್ ಬ್ರಾಂಡ್‌ಗಳು ಭಾರತದಲ್ಲಿ ಮತ್ತಷ್ಟು ಜನಪ್ರಿಯಗೊಳ್ಳುತ್ತಿವೆ.

Article Published On: Saturday, May 30, 2020, 16:49 [IST]
English summary
Toyota Urban Cruiser SUV: Expected Launch Date, Prices, Specs, Features & Rivals Explained. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+