ಕೇವಲ 10 ನಿಮಿಷದಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಸಾಂಪ್ರಾದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆಯಿಂದ ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸಿದ್ದು, ಜಪಾನ್ ಕಾರು ಉತ್ಪಾದನಾ ಕಂಪನಿ ಟೊಯೊಟಾ ಕೂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಸೆಲ್ಪ್ ರೀಚಾಜ್ಡ್ ಹೈಬ್ರಿಡ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ಟೊಯೊಟಾ ಕಂಪನಿಯು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕುರಿತಾಗಿ ಮೊದಲ ಟೀಸರ್ ಚಿತ್ರವನ್ನು ಸಹ ಈಗಾಗಲೇ ಬಹಿರಂಗ ಪಡಿಸಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು ಕಂಪನಿಯ ಹೊಸ ಇ-ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದ್ದು, ಹೊಸ ಕಾರಿನ ವಿನ್ಯಾಸವು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿರುವ ರಾವ್4 ಎಸ್‌ಯುವಿ ಮಾದರಿಯಲ್ಲಿ ಸಿದ್ದಗೊಳ್ಳುತ್ತಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಟೊಯೊಟಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡುವ ಸಂಬಂಧ ಸಹಭಾಗಿತ್ವದ ಯೋಜನೆ ಅಡಿ ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಆಗಬಹುದಾದ ಬ್ಯಾಟರಿ ಉತ್ಪನ್ನ ಸಿದ್ದಪಡಿಸಲು ವಿವಿಧ ಹಂತದ ಅಧ್ಯಯನಗಳನ್ನು ನಡೆಸಲಾಗುತ್ತಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಅತಿ ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಸೌಲಭ್ಯ ಒದಗಿಸುವುದೊಂದೆ ಗ್ರಾಹಕರನ್ನು ಸೆಳೆಯುವ ಪ್ರಮುಖ ಅಂಶ ಎಂಬುವುದನ್ನು ಪರಿಗಣಿಸಿರುವ ಟೊಯೊಟಾ ಕಂಪನಿಯು ಕೇವಲ 10 ನಿಮಿಷಗಳಲ್ಲಿ ಶೇ.100 ರಷ್ಟು ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಮಾದರಿಯನ್ನು ಸಿದ್ದಪಡಿಸುತ್ತಿದ್ದು, ಹೊಸ ಬ್ಯಾಟರಿ ಉತ್ಪನ್ನವು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 500 ಕಿ.ಮೀ ಹೆಚ್ಚು ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿರಲಿವೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಇವಿ ಬ್ಯಾಟರಿ ಉತ್ಪನ್ನಗಳು ಚಾರ್ಜಿಂಗ್ ಸೌಲಭ್ಯಕ್ಕೆ ಅನುಗುಣವಾಗಿ ಪೂರ್ಣ ಪ್ರಮಾಣದ ಚಾರ್ಜ್ ಆಗಲು ಕನಿಷ್ಠ 90 ನಿಮಿಷದಿಂದ ಗರಿಷ್ಠ 8 ಗಂಟೆ ಸಮಯ ತೆಗೆದುಕೊಳ್ಳುತ್ತವೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಸೂಪರ್ ಫಾಸ್ಟ್ ಚಾರ್ಜಿಂಗ್, ಫಾಸ್ಟ್ ಚಾರ್ಜಿಂಗ್ ಮತ್ತು ಹೋಂ ಚಾರ್ಜಿಂಗ್ ಆಧಾರದ ಮೇಲೆ ಚಾರ್ಜಿಂಗ್ ಸಮಮ ನಿಗದಿಯಾಗಲಿದ್ದು, ಟೊಯೊಟಾ ಕಂಪನಿಯು ಅಭಿವೃದ್ದಿಪಡಿಸುತ್ತಿರುವ ಬ್ಯಾಟರಿಯು ಸೂಪರ್ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 10 ನಿಮಿಷಗಳ ಕಾಲಾವಧಿಯಲ್ಲಿ ಶೇ.100 ರಷ್ಟು ಚಾರ್ಜ್ ಆಗಲಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಟೊಯೊಟಾ ಕಂಪನಿಯು ಹೊಸ ಬ್ಯಾಟರಿ ಉತ್ಪನ್ನವನ್ನು ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿದ್ದು, 2025ರ ವೇಳೆ ಸುಮಾರು 10ಕ್ಕೂ ಹೆಚ್ಚು ಇವಿ ವಾಹನ ಮಾದರಿಗಳನ್ನು ಮಾರಾಟ ಮಾಡುವ ಗುರಿಹೊಂದಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಪ್ರತ್ಯೇಕವಾಗಿ ಸಿದ್ದಗೊಂಡಿರುವ ಇ-ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್‌ನಲ್ಲಿ ಟೊಯೊಟಾ ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಿದ್ದಪಡಿಸಲಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂ, ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಅಭಿವೃದ್ದಿಗೊಳ್ಳಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಪ್ರಮುಖ ಕಾರು ಮಾದರಿಗಳಿಗೆ ಗ್ರಾಹಕರ ಬೇಡಿಕೆ ವಿವಿಧ ರೇಂಜ್‌ವುಳ್ಳ ಪ್ರಮುಖ ಬ್ಯಾಟರಿ ಮಾದರಿಗಳನ್ನು ಸಿದ್ದಪಡಿಸಲಿರುವ ಟೊಯೊಟಾ ಕಂಪನಿಯು ತನ್ನದೆ ಸ್ವಂತ ಬ್ಯಾಟರಿ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಪರಿಸರ ಪೂರಕವಾಗಿದ್ದರೂ ದುಬಾರಿ ಬೆಲೆಯ ಪರಿಣಾಮ ತೀವ್ರ ಬೆಳವಣಿಗೆ ಸಾಧಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಬ್ಯಾಟರಿ ಸಂಪನ್ಮೂಲಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಯನ್ನು ಅವಲಂಭಿಸಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕೆಲವೇ ನಿಮಿಷದಲ್ಲಿ ಚಾರ್ಜ್ ಆಗಲಿದೆ ಟೊಯೊಟಾ ಹೊಸ ಇವಿ ಬ್ಯಾಟರಿ

ಈ ಹಿನ್ನಲೆಯಲ್ಲಿ ಭವಿಷ್ಯದ ದೃಷ್ಠಿಯಿಂದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಸ್ವಂತ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯುವತ್ತ ಯೋಜನೆ ರೂಪಿಸಿದ್ದು, 2022ರ ವೇಳೆಗೆ ಹಲವಾರು ಆಟೋ ಉತ್ಪಾದನಾ ಕಂಪನಿಗಳು ಸ್ವಂತ ಬ್ಯಾಟರಿ ಉತ್ಪಾದನಾ ಘಟಕಗಳ ಕಾರ್ಯಾಚರಣೆ ಹೊಂದಿರಲಿವೆ.

Most Read Articles

Kannada
Read more on ಟೊಯೊಟಾ toyota
English summary
Toyota working to develop solid state batteries. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X