ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಮೋಟಾರು ವಾಹನಗಳ ರಿಜಿಷ್ಟ್ರೇಷನ್ ದಾಖಲೆಗಳಲ್ಲಿ ಮಾಲೀಕತ್ವದ ಪ್ರಕಾರವನ್ನು ಸ್ಪಷ್ಟವಾಗಿ ನಮೂದಿಸುವ ಕರಡು ಅಧಿಸೂಚನೆಯ ಕುರಿತು ಕೇಂದ್ರ ಸರ್ಕಾರವು ಸಲಹೆಗಳನ್ನು ಆಹ್ವಾನಿಸಿದೆ. ಮೋಟಾರು ವಾಹನಗಳ ರಿಜಿಷ್ಟ್ರೇಷನ್ ಗೆ ಸಂಬಂಧಿಸಿದ ಫಾರಂ 20ಯನ್ನು ತಿದ್ದುಪಡಿ ಮಾಡಲು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಮೋಟಾರು ವಾಹನ ಕಾಯ್ದೆಯಡಿ, ವಾಹನಗಳ ರಿಜಿಷ್ಟ್ರೇಷನ್ ದಾಖಲೆಗಳು ವಾಹನದ ಮಾಲೀಕತ್ವವನ್ನು ಸರಿಯಾಗಿ ಪ್ರತಿಬಿಂಬಿಸುವುದಿಲ್ಲವೆಂಬುದನ್ನು ಸಾರಿಗೆ ಇಲಾಖೆಯು ಪತ್ತೆ ಹಚ್ಚಿದೆ ಎಂದು ಹೇಳಿರುವ ಕೇಂದ್ರ ಸರ್ಕಾರವು ಹೇಳಿದೆ ಅದನ್ನು ಬದಲಿಸಬೇಕಾಗಿದೆ ಎಂದು ತಿಳಿಸಿದೆ. ಮೋಟಾರು ವಾಹನಗಳ ಮಾಲೀಕತ್ವದಲ್ಲಿ ಸ್ಪಷ್ಟತೆ ತರುವ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆ 1989ರ ಫಾರಂ 20ರಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆಯು ಅಂಗೀಕರಿಸಿದೆ.

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ವಾಹನಗಳ ದಾಖಲೆಗಳಲ್ಲಿ ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸರ್ಕಾರ, ಚಾರಿಟಬಲ್ ಟ್ರಸ್ಟ್‌, ಡ್ರೈವಿಂಗ್ ಸ್ಕೂಲ್, ಅಂಗವಿಕಲತೆ, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಅಧಿಕಾರಿಗಳು, ಬಹು ಮಾಲೀಕರು, ಪೊಲೀಸ್ ಇಲಾಖೆ ಮುಂತಾದ ಮಾಲೀಕತ್ವಗಳ ಪ್ರಕಾರವನ್ನು ಖಚಿತಪಡಿಸಿಕೊಳ್ಳಲಾಗುವುದೆಂದು ಸಾರಿಗೆ ಇಲಾಖೆಯು ತಿಳಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಈ ಬದಲಾವಣೆಯಿಂದಾಗಿ ಮೋಟಾರು ವಾಹನಗಳ ಖರೀದಿ, ಮಾಲೀಕತ್ವ, ಕಾರ್ಯಾಚರಣೆಗಾಗಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ದೈಹಿಕವಾಗಿ ಅಂಗವಿಕಲತೆಯನ್ನು ಹೊಂದಿರುವವರಿಗೆ ಜಿಎಸ್ ಟಿ ಹಾಗೂ ಇತರ ರಿಯಾಯಿತಿಗಳ ಪ್ರಯೋಜನವನ್ನು ನೀಡಲು ಅನುಕೂಲವಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಸದ್ಯಕ್ಕೆ ಅಸ್ತಿತ್ವದಲ್ಲಿರುವ ವಾಹನಗಳ ದಾಖಲೆಗಳಲ್ಲಿ ಅಂಗವಿಕಲತೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ. ಈ ಕಾರಣದಿಂದಾಗಿ ವಿಶೇಷ ಚೇತನರು ಅನೇಕ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಪ್ರಸ್ತಾವಿತ ತಿದ್ದುಪಡಿಯಲ್ಲಿ ವಿಶೇಷ ಚೇತನರು ಹಾಗೂ ಇತರರ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ದೊರೆಯಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಇದರಿಂದಾಗಿ ವಿಶೇಷ ಚೇತನರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ. ಕರಡನ್ನು ತಿದ್ದುಪಡಿಯ ಸಲಹೆ ಹಾಗೂ ಅಭಿಪ್ರಾಯಗಳಿಗಾಗಿ ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ.

ಫಾರಂ 20 ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತಿದ್ದುಪಡಿ ಮಾಡಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಹೊಸ ಕಾಯ್ದೆಯ ಪ್ರಕಾರ ಸಂಚಾರ ನಿಯಮಗಳ ಉಲ್ಲಂಘನೆ, ವಾಹನಗಳ ಸುರಕ್ಷತೆ ಹಾಗೂ ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು.

Most Read Articles

Kannada
English summary
Transport ministry seeks suggestions to amend ownership details in MV act. Read in Kannada.
Story first published: Friday, August 21, 2020, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X