ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಕರೋನಾ ವೈರಸ್‌ನಿಂದಾಗಿ ಭಾರತದಲ್ಲಿ ಮಾತ್ರವಲ್ಲದೇ ಇಡೀ ಪ್ರಪಂಚದಲ್ಲಿ ಭಯದ ವಾತಾವರಣ ಉಂಟಾಗಿದೆ. ಕರೋನಾ ವೈರಸ್ ಸೋಂಕು ಜನರಿಂದ ಮಾತ್ರವಲ್ಲದೇ ಕಾರು ಹಾಗೂ ಬೈಕ್‌ಗಳಿಂದಲೂ ಹರಡುವ ಸಾಧ್ಯತೆಗಳಿವೆ.

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಇದರಿಂದಾಗಿ ವಾಹನಗಳನ್ನು ಸಹ ನಿರಂತರವಾಗಿ ಸ್ವಚ್ವಗೊಳಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚಿಕಾಗೊ ಮೂಲದ ಕಾರ್ ಕೇರ್ ಉತ್ಪನ್ನ ತಯಾರಕ ಕಂಪನಿಯಾದ ಟರ್ಟಲ್ ವ್ಯಾಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಆರಂಭಿಸಿದ್ದು, ಹಲವಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ.

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಟರ್ಟಲ್ ವ್ಯಾಕ್ಸ್ ಪೇಂಟ್ ವರ್ಕ್, ವ್ಹೀಲ್, ಟಯರ್‌, ಅಪ್‌ಹೊಲೆಸ್ಟರಿ, ಪ್ಲಾಸ್ಟಿಕ್‌ಗಳನ್ನು ರಕ್ಷಿಸಲು ತನ್ನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸರ್ಫೇಸ್‌ಗಳನ್ನು ರಕ್ಷಿಸಲು ಕಂಪನಿಯು ಉತ್ಪನ್ನಗಳನ್ನು ಪರಿಚಯಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಚಿಕಾಗೋ ಮೂಲದ ಈ ಕಂಪನಿಯನ್ನು ಒಂದೇ ಕುಟುಂಬ ನಡೆಸುತ್ತಿದೆ. ಟರ್ಟಲ್ ವ್ಯಾಕ್ಸ್ ಕಾರ್ ಕೇರ್ ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಿದ್ದು, ಸುಮಾರು 75 ವರ್ಷಗಳಿಂದ ಮಾರುಕಟ್ಟೆಯಲ್ಲಿ ಇದೇ ರೀತಿಯ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿದೆ. ಇದರಿಂದ ಜನರು ತಮ್ಮ ವಾಹನಗಳನ್ನು ನೋಡಿಕೊಳ್ಳಲು ಅನುಕೂಲವಾಗಲಿದೆ.

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಟರ್ಟಲ್ ವ್ಯಾಕ್ಸ್ ಅನ್ನು ಬೆನ್ ಹಿರ್ಷ್‌ರವರು 1944ರಲ್ಲಿ ಸ್ಥಾಪಿಸಿದರು. ಅವರು ವಿಶ್ವದ ಮೊದಲ ಲಿಕ್ವಿಡ್ ಆಟೋ ಪಾಲಿಶ್ ಆದ ಪ್ಲ್ಯಾಸ್ಟನ್ ಅನ್ನು ಕಂಡುಹಿಡಿದರು. 1946 ರಲ್ಲಿ ಪ್ಲ್ಯಾಸ್ಟನ್ ಹೆಸರನ್ನು ಟರ್ಟಲ್ ವ್ಯಾಕ್ಸ್ ಎಂದು ಬದಲಿಸಲಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಅಂದು ಸ್ಥಾಪಿಸಲಾದ ಈ ಪ್ರತಿಷ್ಠಿತ ಬ್ರಾಂಡ್ ಉತ್ಪನ್ನಗಳನ್ನು ಈಗ ವಿಶ್ವದಾದ್ಯಂತ 120ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ಬೆನ್ ಹಿರ್ಷ್‌ರವರ ಮೊಮ್ಮಗ ಹಾಗೂ ಟರ್ಟಲ್ ವ್ಯಾಕ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡೆನ್ನಿಸ್ ಜಾನ್ ಹೀಲಿ ನೀಡಿದ್ದಾರೆ.

ಕಾರ್ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಟರ್ಟಲ್ ವ್ಯಾಕ್ಸ್

ಈ ಬಗ್ಗೆ ಮಾತನಾಡಿರುವ ಅವರು ನಮ್ಮ ವ್ಯವಹಾರವನ್ನು ಭಾರತದಲ್ಲಿ ಆರಂಭಿಸುವುದು ನಮ್ಮ ಇತಿಹಾಸಕ್ಕೆ ಒಂದು ಹೊಸ ಅಧ್ಯಾಯವನ್ನು ನೀಡಲಿದೆ. ಭಾರತದಲ್ಲಿನ ನಮ್ಮ ವ್ಯವಹಾರದ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ. ಭಾರತವು ವಿಶ್ವದ ಅತ್ಯಂತ ರೋಮಾಂಚಕ ಹಾಗೂ ವೈವಿಧ್ಯಮಯ ವಾಹನ ಮಾರುಕಟ್ಟೆಯಾಗಿದೆ ಎಂದು ಹೇಳಿದ್ದಾರೆ.

Article Published On: Friday, June 19, 2020, 20:28 [IST]
English summary
Turtle Wax launches car care product range in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+