ಕ್ಯಾಬ್ ಸೇವೆ ನೀಡಲು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಿದೆ ಈ ಕಂಪನಿ
ಉಬರ್ ವಿಶ್ವದ ಪ್ರಮುಖ ಕ್ಯಾಬ್ ಕಂಪನಿಗಳಲ್ಲಿ ಒಂದಾಗಿದೆ. ಉಬರ್ ಭಾರತದಲ್ಲಿಯೂ ಕ್ಯಾಬ್ ಸೇವೆಯನ್ನು ನೀಡುತ್ತಿದೆ. ಉಬರ್ ಭಾರತದ ಅತಿದೊಡ್ಡ ಬಾಡಿಗೆ ಕಾರು ಸೇವಾ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆಯನ್ನು ನೀಡುವ ಕಾರಣಕ್ಕೆ ಉಬರ್ ಈ ಹೆಗ್ಗಳಿಕೆಯನ್ನು ಹೊಂದಿದೆ. ಈಗ ಉಬರ್ ಕಂಪನಿಯು ತನ್ನ ಖ್ಯಾತಿಯನ್ನು ಉಳಿಸಿಕೊಳ್ಳಲು ಇನ್ನಷ್ಟು ವಿಭಿನ್ನ ಪ್ರಯತ್ನಗಳಿಗೆ ಮುಂದಾಗಿದೆ. ಅದರಂತೆ ಶೀಘ್ರದಲ್ಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಾಗಿ ಘೋಷಿಸಿದೆ.

ಅಕ್ಟೋಬರ್ 08ರಂದು ಈ ಸಂಬಂಧ ಮಾಹಿತಿ ನೀಡಿರುವ ಉಬರ್ ಬೆಂಗಳೂರು, ದೆಹಲಿ-ಎನ್‌ಸಿಆರ್, ಮುಂಬೈ, ಹೈದರಾಬಾದ್ ಹಾಗೂ ಪುಣೆ ನಗರಗಳಲ್ಲಿ ಕ್ಯಾಬ್ ಸೇವೆಯನ್ನು ನೀಡಲು ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಾಗಿ ತಿಳಿಸಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈ ಸಂಬಂಧ ಉಬರ್ ಕಂಪನಿಯು ಎಲೆಕ್ಟ್ರಿಕ್ ವಾಹನ ಆಧಾರಿತ ಕಂಪನಿಯಾದ ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಎರಡೂ ಕಂಪನಿಗಳು ಶೀಘ್ರದಲ್ಲೇ ಈ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಕ್ಯಾಬ್ ಸೇವೆಯಲ್ಲಿ ಬಳಸಲಿವೆ.

ಉಬರ್ ಕಂಪನಿಯು ಈಗಾಗಲೇ ಮಹೀಂದ್ರಾ ಇ-ವೆರಿಟೊ ಸೇರಿದಂತೆ ಕೆಲವು ಸೆಡಾನ್ ಕಾರುಗಳನ್ನು ತನ್ನ ಸೇವೆಯಲ್ಲಿ ಬಳಸುತ್ತಿದೆ. ಈಗ ಹೆಚ್ಚುವರಿಯಾಗಿ ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲು ಮುಂದಾಗಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಶೂನ್ಯ ಮಾಲಿನ್ಯವನ್ನು ಹೊರಸೂಸುತ್ತವೆ.

ಭಾರತದಲ್ಲಿ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಉಬರ್ ಕಂಪನಿಯು ಈ ಹಿಂದೆ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಪಟ್ಟಂತೆ ಯುಲು, ಮಹೀಂದ್ರಾ ಹಾಗೂ ಸನ್ ಮೊಬಿಲಿಟಿ ಕಂಪನಿಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತ್ತು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈಗ ನಾಲ್ಕನೇ ಕಂಪನಿಯಾದ ಲಿಥಿಯಂ ಅರ್ಬನ್ ಟೆಕ್ನಾಲಜೀಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಉಬರ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಮಾತ್ರವಲ್ಲದೆ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ಸಹ ಮುಂದಾಗಿದೆ.

ಇದರ ಅಂಗವಾಗಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿದೆ. ಈ ಚಾರ್ಜಿಂಗ್ ಕೇಂದ್ರಗಳು 90 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪ್ರಸ್ತುತ ಕೆಲವು ಚಾರ್ಜಿಂಗ್ ಕೇಂದ್ರಗಳಿಗೆ ಚಾರ್ಜ್ ಮಾಡಲು ಗರಿಷ್ಠ 8 ರಿಂದ 9 ಗಂಟೆಗಳ ಅಗತ್ಯವಿದೆ. ಇದನ್ನು ಬದಲಾಯಿಸಲು ಈ ಲಿಥಿಯಂ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿಸಲಾಗಿದೆ.

ವಿಶ್ವದ ಹಲವು ರಾಷ್ಟ್ರಗಳು ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಬ್ಸಿಡಿಯಂತಹ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

2040ರ ವೇಳೆಗೆ ತನ್ನ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುವುದಾಗಿ ಉಬರ್ ತಿಳಿಸಿದೆ. ಈ ಗುರಿಯತ್ತ ಸಾಗಲು ಭಾರತದಲ್ಲಿ 1,000 ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಮುಂದಾಗಿದೆ.


Click it and Unblock the Notifications