ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ವಿಶ್ವಾದ್ಯಂತ ಮಾಲಿನ್ಯ ತಡೆಗಾಗಿ ಹಲವಾರು ಮಹತ್ವದ ಯೋಜನೆಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕ್ಯಾಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಉಬರ್ ಕೂಡಾ ಹೊಸ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಗುರಿಹೊಂದಿರುವ ಸರ್ಕಾರದ ಯೋಜನೆಗೆ ಪೂರಕವಾಗಿ ಉಬರ್ ಕೂಡಾ ಮಹತ್ವದ ನಿರ್ಣಯ ಕೈಗೊಂಡಿದ್ದು, ಹಂತ-ಹಂತವಾಗಿ ಕ್ಯಾಬ್ ಸೇವೆಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವುದಾಗಿ ಹೇಳಿಕೊಂಡಿದೆ. ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಸಂಬಂಧ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಡೀಸೆಲ್ ವಾಹನಗಳನ್ನು ತಗ್ಗಿಸಲು ಹಲವಾರು ನಿರ್ಬಂಧ ಹೇರಲಾಗುತ್ತಿದೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಅಮೆರಿಕ ಮತ್ತು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಈಗಾಗಲೇ ಡೀಸೆಲ್ ವಾಹನಗಳನ್ನು ಪರಿಣಾಮಕಾರಿ ತಗ್ಗಿಸಲು ಹಲವಾರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವ್ಯಯಕ್ತಿಕ ವಾಹನ ಬಳಕೆದಾರರು ಈಗಾಗಲೇ ಇವಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಇದರ ಜೊತೆಗೆ ವಾಣಿಜ್ಯ ಬಳಕೆಯ ವಾಹನ ಮಾದರಿಗಳನ್ನು ಎಲೆಕ್ಟ್ರಿಕ್‌ನತ್ತ ಬದಲಾಯಿಸವುದೇ ಪ್ರಮುಖ ಸವಾಲಾಗಿದ್ದು, ಉಬರ್ ಸೇರಿದಂತೆ ಹಲವಾರು ಕಂಪನಿಗಳು ಪ್ರಮುಖ ನಿರ್ಣಯಗಳೊಂದಿಗೆ ಇವಿ ವಾಹನಗಳ ಬಕಳೆಯಕ್ತ ಮಹತ್ವದ ಹೆಜ್ಜೆಯಿಡುತ್ತಿವೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್ ಕಂಪನಿಯು ಸಹ ತನ್ನ ಸರಕು ಸಾಗಾಣಿಕೆ ಮತ್ತು ಗ್ರಾಹಕರ ಬೇಡಿಕೆ ಪೂರೈಕೆಯ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಬದಲಾಯಿಸುತ್ತಿದ್ದು, ಇದೀಗ ಉಬರ್ ಕೂಡಾ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರವೇ ಪ್ರಯಾಣಿಕ ಸೇವೆಗಳಿಗೆ ಬಳಕೆ ಮಾಡುವ ನಿರ್ಣಯ ಪ್ರಕಟಿಸಿದೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಕೇವಲ ನಿರ್ಣಯ ಮಾಡಿರುವುದಲ್ಲದೆ ಹೊಸ ಯೋಜನೆಗಾಗಿ ಹಲವಾರು ಆಫರ್‌ಗಳನ್ನು ನೀಡುತ್ತಿರುವ ಉಬರ್ ಕಂಪನಿಯು ಎಲೆಕ್ಟ್ರಿಕ್ ಕ್ಯಾಬ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಎಲೆಕ್ಟ್ರಿಕ್ ವಾಹನಗಳ ಮೂಲಕ ಪ್ರಯಾಣ ಕೈಗೊಳ್ಳುವ ಗ್ರಾಹಕರಿಗೆ ವಿವಿಧ ಆಫರ್ ನೀಡಲು ಸಿದ್ದವಾಗಿದೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ತಗ್ಗಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಸಹ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿರುವುದಲ್ಲದೆ ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವ ಆಟೋ ಕಂಪನಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಆಫರ್‌ಗಳನ್ನು ನೀಡಲಾಗುತ್ತಿದ್ದು, ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ, ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದೆ. ಆದರೂ ಕೂಡಾ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಹೆಚ್ಚಿನ ಮಟ್ಟದ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಕೊರೆತೆ ಎದುರಾಗಿದ್ದು, ಕೇಂದ್ರ ಸರ್ಕಾರವು ಈ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ಕಾರು ಮತ್ತು ದ್ವಿಚಕ್ರ ವಾಹನ ಮಾದರಿಗಳು ಮಾರಾಟವಾಗುತ್ತಿದ್ದು, ಬೆಲೆಗಳಿಗೆ ಅನುಗುಣವಾಗಿ ಮೈಲೇಜ್ ಪಡೆದುಕೊಂಡಿವೆ. ದುಬಾರಿ ಬೆಲೆಯ ಇವಿ ವಾಹನಗಳು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿದ್ದರೆ ಬಜೆಟ್ ಬೆಲೆಯ ಇವಿ ವಾಹನಗಳು ಕಡಿಮೆ ಮೈಲೇಜ್‌ನೊಂದಿಗೆ ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಮಾತ್ರವೇ ಸೀಮಿತವಾಗಿವೆ.

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಇದಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಖಾಸಗಿ ಕಂಪನಿಗಳ ಪೆಟ್ರೋಲ್ ಬಂಕ್‌ಗಳನ್ನು ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ನಿರ್ಧರಿಸಿದೆ.

MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ಮಾಲಿನ್ಯ ತಡೆಗಾಗಿ ಕ್ಯಾಬ್ ಸೇವೆಗಳಲ್ಲಿ ಮಹತ್ವದ ಬದಲಾಣೆಯತ್ತ ಉಬರ್

ಖಾಸಗಿ ಕಂಪನಿಗಳ ಅಧೀನದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲೂ ಕಡ್ಡಾಯವಾಗಿ 1 ಚಾರ್ಜಿಂಗ್ ಪಾಯಿಂಟ್ ತೆರೆಯುವಂತೆ ವಿವಿಧ ಪೆಟ್ರೋಲ್ ಪೂರೈಕೆ ಕಂಪನಿಗಳ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಮುಂದಿನ ಒಂದು ವರ್ಷದಲ್ಲಿ 69 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದೆ.

Article Published On: Tuesday, September 15, 2020, 8:45 [IST]
English summary
Uber Aims to have All Rides Done by Electric Vehicles by 2030. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+