ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸ್ಕ್ರ್ಯಾಪಿಂಗ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಪರಿಣಾಮಕಾರಿ ಜಾರಿ ಮಾಡುವ ಬಗ್ಗೆ ಸುಳಿವು ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ನಿಯಮವನ್ನು ಜಾರಿ ಮಾಡುವ ಸುಳಿವು ನೀಡಿದೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಹೆಚ್ಚುತ್ತಿರುವ ವಾಹನಗಳ ಪರಿಣಾಮ ಮಾಲಿನ್ಯ ಪ್ರಮಾಣವು ಕೂಡಾ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರವು ಮಾಲಿನ್ಯ ಉತ್ಪಾದನೆಯನ್ನು ಪರಿಣಾಮಕಾರಿ ತಗ್ಗಿಸಲು ಹಲವಾರು ಹೊಸ ಆಟೋ ಉತ್ಪಾದನಾ ನೀತಿಗಳನ್ನು ಜಾರಿಗೆ ತಂದಿದೆ. ಆದರೆ ಅವಧಿ ಮೀರಿದ ವಾಹನ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿ ಮಾಡಲು ಮುಂದಾಗಿದ್ದು, ಕಾರಣಾಂತರಗಳಿಂದ ಹೊಸ ಆಟೋ ನೀತಿ ಜಾರಿಯಲ್ಲಿ ವಿಳಂಬವಾಗುತ್ತಿದೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಈ ವರ್ಷದ ಏಪ್ರಿಲ್‌ನಿಂದ ಸ್ಕ್ರ್ಯಾಪಿಂಗ್ ನೀತಿ ಜಾರಿ ಯೋಜನೆಯಲ್ಲಿದ್ದ ಕೇಂದ್ರ ಸರ್ಕಾರವು ಕರೋನಾ ವೈರಸ್ ಪರಿಣಾಮ ಮತ್ತೆ ಮುಂದೂಡಿಕೆ ಮಾಡಿದ್ದು, 2021ರ ಆರಂಭದಲ್ಲಿ ಸ್ಕ್ರ್ಯಾಪಿಂಗ್ ನೀತಿ ಜಾರಿಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಭಾರತೀಯ ಆಟೋಮೊಬೈಲ್ ತಯಾರಕರ ಸಂಘಟನೆಯ (ಸಿಯಾಮ್) 60ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಕೇಂದ್ರ ಪರಿಸರ, ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಲಾಕ್‌ಡೌನ್ ನಂತರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಕುರಿತಾದ ಚರ್ಚೆ ವೇಳೆ ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿಗೊಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಸ್ಕ್ರ್ಯಾಪಿಂಗ್ ನೀತಿಯನ್ನು ತುರ್ತಾಗಿ ಜಾರಿಗೊಳಿಸುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಕೂಡಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದು, ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದೆ. ಹೀಗಾಗಿ ಹೊಸ ನಿಯಮ ಜಾರಿಗೆ ಬಂದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳು ಗಣನೀಯ ತಗ್ಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೆ ತರಲು ಕಳೆದ ವರ್ಷವೇ ಹೊಸ ವಿಧೇಯಕ ಒಂದನ್ನು ಮಂಡಿಸಿದ್ದ ಕೇಂದ್ರ ಸರ್ಕಾರವು ಇದೀಗ ಕಾಯ್ದೆಯನ್ನು ಜಾರಿಗೆ ತರಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾಯ್ದೆಯಲ್ಲಿದ್ದ ಕೆಲವು ಗೊಂದಲಗಳನ್ನು ನಿವಾರಣೆ ಮಾಡಲಾಗಿದೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಸ್ಕ್ರ್ಯಾಪಿಂಗ್ ನೀತಿಯು ಜಾರಿಯಾಗುವುದರಿಂದ ಹಳೆಯ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಗ್ಗಿಸುವುದರ ಜೊತೆಗೆ ನಷ್ಟದಲ್ಲಿರುವ ಆಟೋ ಉದ್ಯಮಕ್ಕೆ ಇದು ಪೂರಕವಾಗಲಿದೆ ಎನ್ನುವುದು ಆಟೋ ತಜ್ಞರ ಅಭಿಪ್ರಾಯವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಜೊತೆಗೆ ಹೊಸ ಯೋಜನೆಯಿಂದ ಮಾಲಿನ್ಯವನ್ನು ಮಾತ್ರ ತಗ್ಗಿಸುವುದಲ್ಲದೇ ಹಳೆಯ ವಾಹನಗಳನ್ನು ಸ್ಕ್ರ್ಯಾಪ್‌ ಮರುಬಳಕೆಯ ಮೂಲಕ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಿಸಬಹುದು ಎನ್ನಲಾಗಿದ್ದು, ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬರುವ ಬಿಡಿಭಾಗಗಳನ್ನು ಅತಿ ದೊಡ್ಡ ಉದ್ಯಮವಾಗಿ ಬದಲಾಗಲಿದೆ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಈ ಮೂಲಕ ಸ್ಕ್ರ್ಯಾಪ್‌ ಮರುಬಳಕೆಯಿಂದ ಹೊಸ ವಾಹನಗಳ ಬೆಲೆಗಳನ್ನು ಕೂಡಾ ತಗ್ಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದ್ದು, ಇದಕ್ಕಾಗಿ ಜಿಎಸ್‌ಟಿ ನೀತಿಯಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಒಂದು ವೇಳೆ ಹೊಸ ಯೋಜನೆಯು ಯಶಸ್ವಿಯಾಗಿ ಜಾರಿಗೊಂಡಲ್ಲಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಸುಮಾರು ರೂ.25 ಸಾವಿರ ಕೋಟಿಯಿಂದ 30 ಸಾವಿರ ಕೋಟಿಯಷ್ಟು ಆದಾಯ ಹರಿದುಬರಲಿದ್ದು, ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಹೊಸ ವಾಹನಗಳ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಇದಲ್ಲದೇ ಹೊಸ ನೀತಿಯಿಂದ ಶೇ. 65ರಷ್ಟು ಮಾಲಿನ್ಯ ಪ್ರಮಾಣವು ತಗ್ಗಿಸಬಹುದು ಎನ್ನಲಾಗಿದ್ದು, ಇದಕ್ಕಾಗಿ ಬೇಕಾಗಿರುವ ಅಗತ್ಯ ನಿಯಮಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರವು ಸಿಎಂವಿಆರ್(ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್)ಗೆ ತಿದ್ದುಪಡಿ ತರಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೆಚ್ಚಿದ ವಾಹನ ಮಾರಾಟ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ

ಹೀಗಾಗಿ ಹೊಸ ಸ್ಕ್ರ್ಯಾರ್ಪಿಂಗ್ ನೀತಿಯು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಹಳೆಯ ವಾಹನಗಳನ್ನು ಸ್ಕ್ರ್ಯಾರ್ಪಿಂಗ್ ಮಾಡುವ ವಾಹನ ಮಾಲೀಕರಿಗೆ ಹೊಸ ವಾಹನ ಖರೀದಿಗೆ ಜಿಎಸ್‌ಟಿ ವಿನಾಯ್ತಿ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ.

Most Read Articles

Kannada
English summary
Union Minister Prakash Javedkar affirms the announcement of vehicle scrappage policy soon.
Story first published: Friday, September 4, 2020, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X