ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಕಳೆದ ಮಾರ್ಚ್ ಆರಂಭದಲ್ಲಿ ಟಿ-ರಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ಇದೀಗ ಹೊಸ ಕಾರಿನಲ್ಲಿ ಮತ್ತೊಂದು ಹೈ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಯುರೋಪ್ ಮಾರುಕಟ್ಟೆಯಲ್ಲಿರುವ ಟಿ-ರಾಕ್ ಆರ್ ವರ್ಷನ್ ಭಾರತದಲ್ಲೂ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಟಿ-ರಾಕ್ ಆರ್ ವರ್ಷನ್ ಮಾದರಿಯು 2.0-ಲೀಟರ್ ಡಿಎಸ್ಐ ಪೆಟ್ರೋಲ್ ಎಂಜಿನ್‌ನೊಂದಿಗೆ 300-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದು ಸಾಮಾನ್ಯ ಟಿ-ರಾಕ್ ಕಾರಿಗಿಂತಲೂ ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ. ಫೋಕ್ಸ್‌ವ್ಯಾಗನ್ ನಿರ್ಮಾಣದ ಸಣ್ಣ ಕಾರುಗಳಲ್ಲೇ ಟಿ-ಕಾರ್ ಆರ್ ವರ್ಷನ್ ಹೆಚ್ಚು ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಇದು ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಕಾರುಗಳಿಗೆ ಸಮನಾಗಿದೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಮಾಹಿತಿಗಳ ಪ್ರಕಾರ, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟಗೊಳ್ಳಲಿದ್ದು, ಸಾಮಾನ್ಯ ಕಾರಿಗಿಂತಲೂ ಇದು ರೂ.5 ಲಕ್ಷದಿಂದ ರೂ.7 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾದ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಇನ್ನು ಸಾಮಾನ್ಯ ಟಿ-ರಾಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.19.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರು ಒಂದೇ ಒಂದು ವೆರಿಯೆಂಟ್ ಖರೀದಿಗೆ ಲಭ್ಯವಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಫೋಕ್ಸ್‌ವ್ಯಾಗನ್ ಕಂಪನಿಯ ಮಾರ್ಡನ್ ಡಿಸೈನ್ ಪ್ರೇರಣೆ ಹೊಂದಿರುವ ಟಿ-ರಾಕ್ ಕಾರು ಯುರೋಪಿನ್ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಎಸ್‌ಯುವಿ ಕಾರು ಮಾದರಿಗಳಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟಿರುವ ಐಷಾರಾಮಿ ಫೀಚರ್ಸ್ ಇಷ್ಟಪಡುವ ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದೆ. ಈಗಾಗಲೇ ಹೊಸ ಕಾರು ಖರೀದಿಗಾಗಿ 2 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಲಾಕ್‌ಡೌನ್ ನಂತರವಷ್ಟೇ ಹೊಸ ಕಾರು ವಿತರಣೆಯು ಆರಂಭವಾಗಲಿದೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಟಿ-ರಾಕ್ ಕಾರು ದುಬಾರಿ ಬೆಲೆಗೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಆಕರ್ಷಕ ಮುಂಭಾಗದ ಗ್ರಿಲ್ ಜೊತೆಗೆ ಫೋಕ್ಸ್‌ವ್ಯಾಗನ್ ಲೊಗೊ, ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಕಾರ್ನರಿಂಗ್ ಲೈಟ್ಸ್, ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಹಾಗೆಯೇ ಹಲವಾರು ಸ್ಪೋರ್ಟಿ ಫೀಚರ್ಸ್‌ಗಳನ್ನು ಹೊಂದಿರುವ ಟಿ-ರಾಕ್ ಕಾರಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್, ಆಕರ್ಷಕವಾದ ವೀಲ್ಹ್ ಆರ್ಚ್, ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಟೈಲಿಷ್ ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್‌ಗಳು ಗಮನಸೆಳೆಯಲಿದ್ದು, ಕಾರಿನ ಒಳಭಾಗದ ಫೀಚರ್ಸ್‌ಗಳ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಹೊಸ ಕಾರಿನಲ್ಲಿ ವರ್ಚುವಲ್ ಕುಕ್‌ಪಿಟ್ ಜೋಡಿಸಲಾಗಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್‍ಟೈನ್‌ಮೆಂಟ್ ಸಿಸ್ಟಂ, ಅತ್ಯುತ್ತಮ ಲೆದರ್ ಆಸನಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಅಳವಡಿಸಲಾಗಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೊತೆಗೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಟಿಎಸ್ಐ(ಇವೊ) ಪೆಟ್ರೋಲ್ ಎಂಜಿನ್ ಹೊಂದಿರುವ ಟಿ-ರಾಕ್ ಕಾರು 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಗಂಟೆಗೆ ಗರಿಷ್ಠ 204 ಕಿ.ಮೀ ಟಾಪ್ ಸ್ಪೀಡ್‌ ಪಡೆದುಕೊಂಡಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಬಿಡುಗಡೆಯಾಗಲಿದೆ ಹೈ ಪರ್ಫಾಮೆನ್ಸ್ ಪ್ರೇರಿತ ಟಿ-ರಾಕ್ ಆರ್ ವರ್ಷನ್

ಈ ಮೂಲಕ ಜೀಪ್ ಕಂಪಾಸ್ ಕಾರಿಗೆ ನೇರ ಪೈಪೋಟಿ ನೀಡಲಿರುವ ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಮಧ್ಯಮ ಗಾತ್ರದ ಕಾರುಗಳಲ್ಲಿ ಐಷಾರಾಮಿ ಫೀಚರ್ಸ್ ಇಷ್ಟಪಡುವ ಎಸ್‌ಯುವಿ ಪ್ರಿಯರಿಗೆ ಹೊಸ ಕಾರು ಪ್ರಮುಖ ಆಕರ್ಷಣೆಯಾಗಲಿದೆ.

More from DriveSpark

Article Published On: Wednesday, April 29, 2020, 11:37 [IST]
English summary
High-Performance Volkswagen T-Roc GT Planned For India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+