ಗ್ರಾಹಕರಿಗೆ 100% ರಿಯಾಯಿತಿ ನೀಡುತ್ತಿದೆ ಈ ಖ್ಯಾತ ಕಾರು ಬಾಡಿಗೆ ಕಂಪನಿ
ಲಾಕ್‌ಡೌನ್ ಸಡಿಲಗೊಳಿಸಿದ ನಂತರ ಜೂಮ್‌ಕಾರ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಂಪನಿಯು ದೇಶದ 35 ನಗರಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಜೂಮ್ ಕಾರು ಜೂಮ್ ಟು ಸೆಲ್ಫ್ ರಿಲಾಯನ್ಸ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಹೊಸ ಯೋಜನೆಯಡಿಯಲ್ಲಿ ಜೂಮ್‌ಕಾರ್ ತನ್ನ ಗ್ರಾಹಕರಿಗೆ 100% ರಿಯಾಯಿತಿ ಹಾಗೂ ಅನಿಯಮಿತ ಮರುಹೊಂದಿಸುವಿಕೆ ಆಯ್ಕೆಗಳನ್ನು ನೀಡಲಿದೆ. ಕಂಪನಿಯು ಸ್ವಯಂ ಡ್ರೈವ್ ಬಾಡಿಗೆ ಕ್ಷೇತ್ರದಲ್ಲಿ ಗೋ-ಟು ಎಂದು ಪರಿಗಣಿಸಲ್ಪಟ್ಟಿದ್ದರೂ ಹೊಸ ಗ್ರಾಹಕರನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ಬಿಡುಗಡೆಗೊಳಿಸುತ್ತಿದೆ.

ದಕ್ಷಿಣ ಭಾರತ ಹಾಗೂ ಪೂರ್ವ ಭಾರತದಲ್ಲಿ ಜೂಮ್‌ಕಾರ್ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ, ಇದರಲ್ಲಿ ಬೆಂಗಳೂರು, ಮಂಗಳೂರು, ಹೈದರಾಬಾದ್, ವೈಜಾಗ್, ಚೆನ್ನೈ, ಕೊಚ್ಚಿ, ಕ್ಯಾಲಿಕಟ್, ಗುವಾಹಟಿ, ಸಿಲಿಗುರಿ ಹಾಗೂ ಭುವನೇಶ್ವರ ನಗರಗಳು ಸೇರಿವೆ. ಮೈಸೂರು, ಉತ್ತರ ಹಾಗೂ ಪಶ್ಚಿಮ ವಲಯದಲ್ಲಿ ಕಂಪನಿಯು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವಾಹನಗಳನ್ನು ಓಡಿಸುತ್ತಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಜೂಮ್‌ಕಾರ್ ನೀಡುತ್ತಿರುವ 100% ರಿಯಾಯಿತಿಯಲ್ಲಿ ಆರಂಭಿಕ ಬುಕ್ಕಿಂಗ್ ಮೇಲೆ 50% ರಿಯಾಯಿತಿ ಹಾಗೂ 50% ಕ್ಯಾಶ್‌ಬ್ಯಾಕ್‌ಗಳು ಸೇರಿವೆ. ಈ ರಿಯಾಯಿತಿಯು ಮೇ 26ರಿಂದ 29ರವರೆಗೆ ಮಾಡಲಾಗುವ ಎಲ್ಲಾ ಅಲ್ಪಾವಧಿ ಬುಕ್ಕಿಂಗ್‌ಗಳಿಗೆ ಅನ್ವಯವಾಗಲಿದೆ.

ಜೂನ್ 1ರಿಂದ ಬುಕ್ಕಿಂಗ್ ಮಾಡುವ ಗ್ರಾಹಕರು ZAN100 ಕೋಡ್ ಬಳಸಿ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು. ಇದರ ಜೊತೆಗೆ ಕಂಪನಿಯು ಅನಿರ್ದಿಷ್ಟ ಅವಧಿಗಾಗಿ ಬುಕ್ಕಿಂಗ್‌ನಲ್ಲಿ ಮರುಹೊಂದಿಸುವ ಆಯ್ಕೆಗಳನ್ನು ನೀಡಲಿದೆ. ಇದರೊಂದಿಗೆ ಕಂಪನಿಯು ಗ್ರಾಹಕರಿಗೆ 1, 3 ಹಾಗೂ 6 ತಿಂಗಳ ಅವಧಿಗೆ ಕಾರುಗಳನ್ನು ಬಾಡಿಗೆಗೆ ನೀಡುವ ಆಯ್ಕೆಯನ್ನು ಹೊರ ತಂದಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ಸೋಂಕು ಹರಡುವ ಭಯದಿಂದ ಜನರು ತಮ್ಮದೇ ಆದ ವಾಹನಗಳನ್ನು ಹೊಂದಲು ಬಯಸಿದ್ದಾರೆ. ಬಾಡಿಗೆ ವಾಹನಗಳಿಗೂ ಸಹ ಆದ್ಯತೆಯನ್ನು ನೀಡುತ್ತಿದ್ದಾರೆ. ಗ್ರಾಹಕರು ಮತ್ತೆ ಮತ್ತೆ ವಾಹನಗಳನ್ನು ಬಾಡಿಗೆಗೆ ಪಡೆಯುವುದನ್ನು ತಪ್ಪಿಸಲು ಜೂಮ್‌ಕಾರ್ ದೀರ್ಘಕಾಲದವರೆಗೆ ವಾಹನಗಳನ್ನು ಬಾಡಿಗೆಗೆ ನೀಡುವ ಆಯ್ಕೆಯನ್ನು ಹೊರತಂದಿದೆ.

ಜೂಮ್‌ಕಾರ್ ಲಾಕ್‌ಡೌನ್ ಮುಗಿದ ನಂತರ ಇತರ ನಗರಗಳಲ್ಲಿ ಸೇವೆಯನ್ನು ಪುನರಾರಂಭಿಸಲಿದೆ. ದೆಹಲಿ, ಮುಂಬೈ ನಗರಗಳಲ್ಲಿ ಲಾಕ್‌ಡೌನ್‌ನಿಂದ ಪೂರ್ಣ ಪ್ರಮಾಣದ ವಿನಾಯಿತಿಯನ್ನು ನೀಡಲಾಗಿಲ್ಲ. ಜನರು ವಿನಾಕಾರಣ ಮನೆಯಿಂದ ಹೊರಬರುವುದನ್ನು ನಿಷೇಧಿಸಲಾಗಿದೆ.


Click it and Unblock the Notifications