ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್ ಇಂಜಿನ್ ಹೊಂದಿರುವ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಗತ್ತಿನ ಹಲವು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಭಾರತದಲ್ಲಿ ಸಬ್ಸಿಡಿ ಹಾಗೂ ತೆರಿಗೆ ರಿಯಾಯಿತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಆದರೂ ಜನರು ಎಲೆಕ್ಟ್ರಿಕ್ ವಾಹನ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುವುದಿಲ್ಲ ಎಂಬುದು ಇದರ ಪ್ರಮುಖ ಕಾರಣ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದರಿಂದಲೂ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಚಾರ್ಜ್ ಮುಗಿದ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಎಲ್ಲಿ ಚಾರ್ಜ್ ಮಾಡುವುದು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹಲವು ಗಂಟೆಗಳು ಬೇಕಾಗುತ್ತವೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 3 ರಿಂದ 9 ಗಂಟೆಗಳು ಬೇಕಾಗುತ್ತವೆ. ಆದರೆ ಹಲವಾರು ಜನರು ಇಷ್ಟು ಅವಧಿ ಕಾಯಲು ಬಯಸುವುದಿಲ್ಲ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಇನ್ನೂ ಶೈಶವಾವಸ್ಥೆಯಲ್ಲಿದೆ. ಈ ಸಂಗತಿಗಳನ್ನು ಗಮನದಲ್ಲಿಟ್ಟು ಕೊಂಡು ಜನಪ್ರಿಯ ಕಂಪನಿಯೊಂದು ಎಲೆಕ್ಟ್ರಿಕ್ ವಾಹನಗಳನ್ನು ತ್ವರಿತವಾಗಿ ಚಾರ್ಜ್ ಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಈ ಸಾಧನವನ್ನು ಸ್ವಿಸ್ ಇಂಜಿನಿಯರಿಂಗ್ ಕಂಪನಿಯಾದ ಎಬಿಬಿ ಅಭಿವೃದ್ಧಿಪಡಿಸಿದೆ. ಈ ಉಪಕರಣವನ್ನು ಜಾಗತಿಕವಾಗಿ ತರಲು ಕಂಪನಿಯು 3 ಮಿಲಿಯನ್ ಅಮೆರಿಕನ್ ಡಾಲರ್ ಗಳನ್ನು ಹೂಡಿಕೆ ಮಾಡಲು ಸಜ್ಜಾಗಿದೆ. ಎಬಿಬಿ ಕಂಪನಿಯು ಹೊಸ ಟೆರ್ರಾ 360 ಮಾಡ್ಯುಲರ್ ಚಾರ್ಜರ್ ಅನ್ನು ವಿನ್ಯಾಸಗೊಳಿಸುತ್ತಿದೆ. ಈ ಚಾರ್ಜರ್ ಅನ್ನು ಯಾವುದೇ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಬಹುದು.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಈ ಚಾರ್ಜರ್ ಮೂಲಕ ಯಾವುದೇ ಎಲೆಕ್ಟ್ರಿಕ್ ಕಾರನ್ನು ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಈ ಚಾರ್ಜರ್ ಎಲೆಕ್ಟ್ರಿಕ್ ಕಾರುಗಳನ್ನು ಸಾಮಾನ್ಯ ಚಾರ್ಜರ್ ಗಳಿಗಿಂತ ಹೆಚ್ಚು ವೇಗವಾಗಿ ಚಾರ್ಜ್ ಮಾಡುತ್ತದೆ. ಈ ಚಾರ್ಜರ್ ವಿಶ್ವದ ಅತ್ಯಂತ ವೇಗದ ಚಾರ್ಜರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಾರ್ಜರ್ ಮೂಲಕ ಕೇವಲ 3 ನಿಮಿಷಗಳಲ್ಲಿ 100 ಕಿ.ಮೀಗಳವರೆಗೆ ಚಲಿಸುವಷ್ಟು ಚಾರ್ಜ್ ಮಾಡಬಹುದು ಎಂದು ಎಬಿಬಿ ಕಂಪನಿ ಹೇಳಿದೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಎಬಿಬಿ, ಯುರೋಪ್ ಹಾಗೂ ಅಮೆರಿಕಾದಲ್ಲಿ ಇಂತಹ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸಾಧನವನ್ನು ಬಿಡುಗಡೆಗೊಳಿಸಿದ ಮೊದಲ ಕಂಪನಿಯಾಗಿದೆ.ಕಂಪನಿಯ ಚಾರ್ಜಿಂಗ್ ಕೇಂದ್ರಗಳು ಈ ವರ್ಷದ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಗಳಿವೆ. ಇದನ್ನು ಅನುಸರಿಸಿ ಎಬಿಬಿ ಕಂಪನಿಯು 2022 ರಲ್ಲಿ ಲ್ಯಾಟಿನ್ ಅಮೆರಿಕಾ ಹಾಗೂ ಏಷ್ಯಾ ಪೆಸಿಫಿಕ್ ಗಳಲ್ಲಿ ಈ ಚಾರ್ಜರ್ ಅನ್ನು ಹೊರ ತರಲು ನಿರ್ಧರಿಸಿದೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಎಬಿಬಿ ಕಂಪನಿಯು 2010 ರಲ್ಲಿ ಆರಂಭವಾಯಿತು. ಎಬಿಬಿ ಕಂಪನಿಯು 88 ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇದರ ಜೊತೆಗೆ, ಕಂಪನಿಯು ಇದುವರೆಗೂ ಸುಮಾರು 4,60,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸಾಧನಗಳನ್ನು ಮಾರಾಟ ಮಾಡಿದೆ. ಈಗ ಅಭಿವೃದ್ಧಿಗೊಂಡಿರುವ ಹೈಸ್ಪೀಡ್ ಚಾರ್ಜಿಂಗ್ ಸಾಧನದೊಂದಿಗೆ ಏಕಕಾಲದಲ್ಲಿ ನಾಲ್ಕು ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದು ಎಂಬುದು ಗಮನಾರ್ಹ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಕೆಲವು ಡಚ್ ವಿದ್ಯಾರ್ಥಿಗಳು ರೂಫ್ ಮೇಲೆ ಅಳವಡಿಸಿರುವ ಸೋಲಾರ್ ಪ್ಯಾನೆಲ್‌ಗಳ ಸಹಾಯದಿಂದ ಪವರ್ ಪಡೆಯುವ ಮೊದಲ ಎಲೆಕ್ಟ್ರಿಕ್ ಕ್ಯಾಂಪರ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ವಾಹನವನ್ನು ಸ್ಟೆಲ್ಲಾ ವೀಟಾ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಿದ್ಯಾರ್ಥಿಗಳು ಈಗ ಈ ಎಲೆಕ್ಟ್ರಿಕ್ ವಾಹನದ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಈ ಮೂಲ ಮಾದರಿಯ ರೂಫ್ ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಚಾಲನೆಗೆ ಮಾತ್ರವಲ್ಲದೆ ವಾಹನದ ವಿವಿಧ ಆನ್‌ಬೋರ್ಡ್ ಸೌಲಭ್ಯಗಳಿಗೆ ಬಳಸಲಾಗುತ್ತದೆ. ಮಾಹಿತಿಯ ಪ್ರಕಾರ, ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ವಾಹನವನ್ನು ಐಂಡ್‌ಹೋವನ್ ಸೋಲಾರ್ ಟೀಂ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಪೂರ್ಣ ಸ್ವಾವಲಂಬಿ ವಾಹನವನ್ನು ವಿನ್ಯಾಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಈ ಎಲೆಕ್ಟ್ರಿಕ್ ವಾಹನವು ಉತ್ತಮವಾಗಿರುವ ವಾತಾವರಣದಲ್ಲಿ ದಿನಕ್ಕೆ 730 ಕಿ.ಮೀಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್ ಗೆ ಹೋಗುವ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ವಾಹನದ ಮೇಲಿರುವ ಸೋಲಾರ್ ಪ್ಯಾನೆಲ್ ಸ್ನಾನ ಮಾಡಲು, ಟಿವಿ ನೋಡಲು, ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಅಥವಾ ಕಾಫಿ ಮಾಡಲು ಅಗತ್ಯವಿರುವಷ್ಟು ಶಕ್ತಿಯನ್ನು ಒದಗಿಸುತ್ತದೆ.

ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನವು ಚಾಲನೆಯಾಗದೇ ನಿಂತಿರುವಾಗ ರೂಫ್ ಮೇಲಕ್ಕೆತ್ತಿ ವಾಹನದೊಳಗೆ ವಿಶ್ರಾಂತಿ ಪಡೆಯಬಹುದು. ಜೊತೆಗೆ ಈ ವಾಹನದೊಳಗೆ ಕೆಲಸ ಮಾಡಲು, ಅಡುಗೆ ಮಾಡಲು ಅಥವಾ ಮಲಗಲು ಆರಾಮದಾಯಕವಾದ ವಾಸ ಸ್ಥಳವನ್ನು ಸೃಷ್ಟಿಸುತ್ತದೆ. ಈ ಎಲೆಕ್ಟ್ರಿಕ್ ವಾಹನವನ್ನು ವಿಶ್ವದ ಮೊದಲ ಸಂಪೂರ್ಣ ಸೋಲಾರ್ ಚಾರ್ಜ್ಡ್ ಕ್ಯಾಂಪರ್ ವ್ಯಾನ್ ಎಂದು ಅಭಿವೃದ್ಧಿಪಡಿಸಲಾಗಿದೆ.

ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ ಈ ಫಾಸ್ಟ್ ಚಾರ್ಜರ್

ಈ ಮೂಲ ಮಾದರಿಯನ್ನು ತಯಾರಿಸಿರುವುದರ ಉದ್ದೇಶವು ವಾಹನ ತಯಾರಕ ಕಂಪನಿಗಳನ್ನು ತಮ್ಮ ಶಕ್ತಿಯ ಪರಿವರ್ತನೆಯನ್ನು ವೇಗಗೊಳಿಸಲು ಪ್ರೇರೇಪಿಸುವುದು. ಈ ಉದ್ದೇಶಕ್ಕಾಗಿ ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ವಾಹನದಲ್ಲಿ ಯುರೋಪ್ ಪ್ರವಾಸವನ್ನು ಕೈಕೊಳ್ಳಲಾಗಿದೆ. ಐಂಡ್‌ಹೋವನ್ ಸೋಲಾರ್ ಟೀಂ, ನೆದರ್‌ಲ್ಯಾಂಡ್ಸ್‌ನ ಐಂಡ್‌ಹೋವನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ 22 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಎಲ್ಲಾ ವಿದ್ಯಾರ್ಥಿಗಳು ಈ ವಾಹನದ ಶ್ರೇಣಿಯನ್ನು ಉತ್ತಮಗೊಳಿಸುವ ಸಲುವಾಗಿ ವರ್ಷ ಪೂರ್ತಿ ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ವಾಹನಗಳ ವಿನ್ಯಾಸದಲ್ಲಿ ತೊಡಗಿದ್ದಾರೆ.

Most Read Articles

Kannada
English summary
Abb company launches world s fastest e car charger video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X