ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಬಾಹುಬಲಿ ನಟ ಪ್ರಭಾಸ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪ್ರಭಾಸ್ ಅವರು ತಮ್ಮ ಕನಸಿನ ಕಾರು ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್‌ಸ್ಟರ್ ಅನ್ನು ಖರೀದಿಸಿದ್ದಾರೆ. ಈ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹುಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ತೆಲುಗಿನ 'ಈಶ್ವರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಪ್ರಭಾಸ್, ನಂತರ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಬಾಹುಬಲಿ ಚಿತ್ರದ ಮೂಲಕ ಬಾರಿ ಜನಪ್ರಿಯತೆಯನ್ನು ಗಳಿಸಿಕೊಂಡರು. ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರಾಗಿದ್ದಾರೆ. ಇವರು ಖರೀದಿಸಿದ ದುಬಾರಿ ಕಾರಿನ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ನಟ ಪ್ರಭಾಸ್ ಅವರು ಖರೀದಿಸಿದ ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್‌ಸ್ಟರ್ ಕಾರಿನ ಆನ್ ರೋಡ್ ಬೆಲೆಯು ರೂ.6 ಕೋಟಿಯಾಗುತ್ತದೆ. ಲ್ಯಾಂಬೊರ್ಗಿನಿ ಅವೆಂಟಡಾರ್ ಓಪನ್ ಟಾಪ್ ಸ್ಪೋರ್ಟ್ಸ್ ಕಾರ್ ಆಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಪ್ರಭಾಸ್ ಅವರು ಆರೆಂಜ್ ಅವೆಂಟಡಾರ್ ರೋಡ್‌ಸ್ಟರ್ ಖರೀದಿಸಿರುವುದು ಎಂದು ತೋರುತ್ತದೆ .ಈಗಾಗಲೇ ಪ್ರಭಾಸ್‌ ಬಳಿ ಬಿಎಂಡಬ್ಲ್ಯು. ಜಾಗ್ವಾರ್ ಹಾಗೂ ಆಡಿ ಕ್ಯೂ 5 ಕಾರುಗಳಿವೆ. ಸದ್ಯ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಬಿಡುಗಡೆಗೆ ಸಿದ್ಧವಾಗಿದೆ.

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಇನ್ನು ತೆಲುಗಿನ ಮತ್ತೊಬ್ಬ ಜನಪ್ರಿಯ ನಟ ಜೂನಿಯರ್ ಎನ್​ಟಿಆರ್ ಅವರು ಇತ್ತೀಚೆಗೆ ಹೊಸ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ಇಟಲಿಯಿಂದ ಪ್ರೀಮಿಯಂ ಸ್ಪೋರ್ಟ್ಸ್ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಜನತಾ ಗ್ಯಾರೇಜ್ ಖ್ಯಾತಿಯ ನಟ ಜೂನಿಯರ್ ಎನ್​ಟಿಆರ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ನಟ ಪ್ರಭಾಸ್ ಅವರು ಖರೀದಿಸಿದ ಹೊಸ ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್‌ಸ್ಟರ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಕೇವಲ 3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಅವೆಂಟಡಾರ್ ಕಾರನ್ನು 2011ರಲ್ಲಿ ಪರಿಚಯಿಸಿದ್ದರು. ಇತರ ಲ್ಯಾಂಬೊರ್ಗಿನಿ ಮಾದರಿಗಳಂತೆ ಇದು ಕೂಡ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯುವಂತ ಮಾಡಿದ ಸೂಪರ್ ಕಾರು ಆಗಿದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರುಗಳಿಗೆ ವಿಶ್ವದೆಲ್ಲೆಡೆ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದೆ. 9 ವರ್ಷಗಳ ಅವಧಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿತು. 2012ರಲ್ಲಿ ಅವೆಂಟಡಾರ್ ರೋಡ್‌ಸ್ಟರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.

ರೂ.6 ಕೋಟಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಖರೀದಿಸಿದ ಬಾಹುಬಲಿ ನಟ ಪ್ರಭಾಸ್

ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಇತ್ತೀಚೆಗೆ ಹೊಸ ಮೈಲುಗಲ್ಲು ಸೃಷ್ಟಿಸತು. ಲ್ಯಾಂಬೊರ್ಗಿನಿ ಕಂಪನಿಯು ಒಂಬತ್ತು ವರ್ಷಗಳಲ್ಲಿ ಜನಪ್ರಿಯ ಅವೆಂಟಡಾರ್ ಮಾದರಿಯ 10,000 ಯುನಿಟ್‍‍ಗಳನ್ನು ಉತ್ಪಾದಿಸಿದೆ.

Source: Prabhas Trends/Twitter

Most Read Articles

Kannada
English summary
Prabhas Buys New Luxury Lamborghini Car. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X