ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಸಾಂಪ್ರಾದಾಯಿಕ ವಾಹನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳೇ ಹೆಚ್ಚಿನ ಮಟ್ಟದ ಗ್ರಾಹಕರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ನಮ್ಮ ಬೆಂಗಳೂರು ಮೂಲದ ಬಾಲನ್ ಎಂಜಿನಿಯರಿಂಗ್ ಕಂಪನಿಯು ಕೂಡಾ ಹೊಸ ಪ್ರಯತ್ನದೊಂದಿಗೆ ಗ್ರಾಮೀಣ ಆರ್ಥಿಕತೆಗೆ ಪೂರಕವಾಗಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೂ ಹೊಸ ಉತ್ಪನ್ನಗಳ ಕುರಿತು ಮಾಧ್ಯಮ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಂಡ ಬಾಲನ್ ಎಂಜಿನಿಯರಿಂಗ್ ಕಂಪನಿಯು ಕೃಷಿ, ಕೈಗಾರಿಕೆ, ಗ್ರಾಮೀಣ ಅಭಿವೃದ್ದಿ ವಿಭಾಗದಲ್ಲಿನ ಬೇಡಿಕೆಗಳಿಗೆ ಅನುಸಾರವಾಗಿ ಹೊಸ ಇವಿ ವಾಹನಗಳನ್ನು ಸಿದ್ದಪಡಿಸಿ ಅನಾವರಣಗೊಳಿಸಿದೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಸರಕು ಸಾಗಾಣಿಕೆ, ಕೃಷಿ, ಮೂಲಭೂತ ಸೌಕರ್ಯಗಳ ಸೇವೆಗಳ ಮೇಲೆ ಕೇಂದ್ರೀಕರಿಸಿದ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಾಣ ಮಾಡಲಾಗಿದ್ದು, ಸರಕು ಸಾಗಾಣಿಕೆಗೆ ವಿಶ್ವಾಸ್, ಕಸ ನಿರ್ವಹಣೆಗಾಗಿ ಸ್ವಚ್ಚ ರಥ, ಪ್ಯಾಸೆಂಜರ್ ವಿಭಾಗಕ್ಕಾಗಿ ಬಿ5 ರಿಕ್ಷಾ, ಶುಚಿತ್ವ ನಿರ್ವಹಣೆಯ ವಾಹನ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ಪುಶ್ ಕಾರ್ಟ್ ಕಮಲಾ ಎನ್ನುವ ಇವಿ ವಾಹನಗಳನ್ನು ಸಿದ್ದಪಡಿಸಿದೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಬಿ5 ರಿಕ್ಷಾ ಹೊರತುಪಡಿಸಿ ಇನ್ನುಳಿದ ಎಲೆಕ್ಟ್ರಿಕ್ ವಾಹನ ಮಾದರಿಗಳು ಸಂಪೂರ್ಣವಾಗಿ ಗ್ರಾಹಕರ ಬೇಡಿಕೆ ಆಧಾರದ ಮೇಲೆ ನಿರ್ಮಾಣ ಮಾಡಲಾಗಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳಾಗಿದ್ದು, ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಕೈಗಾರಿಕಾ ವಲಯದಲ್ಲಿನ ಬೇಡಿಕೆಗಳನ್ನು ಪೂರೈಸಲು ಬಾಲನ್ ಎಂಜಿನಿಯರಿಂಗ್ ಹೊಸ ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಸಹಕಾರಿಯಾಗಲಿವೆ.

ಬಾಲನ್ ಎಂಜಿನಿಯರಿಂಗ್ ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಉತ್ಕೃಷ್ಟ ಗುಣಮಟ್ಟದ ಬಿಡಿಭಾಗಗಳೊಂದಿಗೆ ನಿರ್ಮಾಣ ಮಾಡಿದ್ದು, ಬ್ಯಾಟರಿ ಮತ್ತು ಮೋಟಾರ್ ತಂತ್ರಜ್ಞಾನದ ಗರಿಷ್ಠ 4 ವರ್ಷಗಳ ಖಾತರಿ ನೀಡುತ್ತದೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೊಸ ಎಲೆಕ್ಟ್ರಿಕ್ ವಾಹನಗಳ ಅಧಿಕೃತ ಬಿಡುಗಡೆಗೂ ಮುನ್ನು ಹೊಸ ವಾಹನಗಳನ್ನು ಅನಾವರಣಗೊಳಿಸಿದ ಬಾಲನ್ ಎಂಜಿನಿಯರಿಂಗ್ ಕಂಪನಿಯು ಭವಿಷ್ಯದ ಯೋಜನೆಗಳ ಬಗೆಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದು, ಹೊಸ ವಾಹನಗಳ ಅನಾವರಣ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೊಸ ವಾಹನಗಳ ಅನಾವರಣ ಕಾರ್ಯಕ್ರಮದಲ್ಲಿ ಸಚಿವ ಶ್ರೀ ಜಗದೀಶ್ ಶೆಟ್ಟರ್ ನೇರವಾಗಿ ಭಾಗಿಯಾದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ ಅವರು ಕೂಡಾ ಬಾಲನ್ ಎಂಜಿನಿಯರಿಂಗ್ ಇವಿ ವಾಹನಗಳ ಅನಾವರಣದಲ್ಲಿ ಭಾಗಿಯಾಗಿ ಹೊಸ ಯೋಜನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಬಾಗಲಕೋಟೆಯಲ್ಲಿ ಹೊಸ ವಾಹನ ಉತ್ಪಾದನಾ ಘಟಕ

ಹೌದು, ಬಾಲನ್ ಎಂಜಿನಿಯರಿಂಗ್ ಕಂಪನಿಯು ಸದ್ಯ ಬೆಂಗಳೂರಿನಲ್ಲಿ ಲಭ್ಯವಿರುವ ಸ್ಥಳಾವಕಾಶದೊಂದಿಗೆ ಹೊಸ ವಾಹನಗಳ ಪೋಟೋಟೈಪ್ ಮಾದರಿಗಳನ್ನು ಸಿದ್ದಪಡಿಸಿ ತಿಂಗಳಿಗೆ 300 ರಿಂದ 400 ಯುನಿಟ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಬಾಗಲಕೋಟೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಳಿಸುವ ಯೋಜನೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಹೊಸ ವಾಹನ ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಂಡ ನಂತರ ಬೆಂಗಳೂರಿನಲ್ಲಿರುವ ಘಟಕವನ್ನು ಗ್ರಾಹಕ ಸೇವಾ ಕೇಂದ್ರವನ್ನಾಗಿ ಬಳಕೆ ಮಾಡಿಕೊಳ್ಳಲಿರುವ ಬಾಲನ್ ಎಂಜಿನಿಯರಿಂಗ್ ಕಂಪನಿಯು ಹೊಸ ಘಟಕವನ್ನು ಸುಮಾರು 25 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡುತ್ತಿದೆ.

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಎರಡು ಹಂತಗಳಲ್ಲಿ ವಿಸ್ತರಣೆ ಮಾಡುವ ಗುರಿಹೊಂದಿರುವ ಬಾಲನ್ ಎಂಜಿನಿಯರಿಂಗ್ ಕಂಪನಿಯು ರೂ. 50 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಹೊಸ ವಾಹನ ಉತ್ಪದನಾ ಘಟಕದ ಮೂಲಕ ವಾರ್ಷಿಕವಾಗಿ 50 ಸಾವಿರ ವಾಹನಗಳನ್ನು ನಿರ್ಮಾಣ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ ಬಾಲನ್ ಎಂಜಿನಿಯರಿಂಗ್

ಬಾಲನ್ ಎಂಜಿನಿಯರಿಂಗ್ ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಲೀಥಿಯಂ ಅಯಾನ್ ಪ್ರೇರಿತ ಬ್ಯಾಟರಿ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸಲಿದ್ದು, ಹೊಸ ವಾಹನಗಳು ಇಂಧನ ಆಧಾರಿತ ವಾಹನಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗರಿಷ್ಠ ಲಾಭಾಂಶಕ್ಕೆ ಪೂರಕವಾಗಿವೆ.

Most Read Articles

Kannada
English summary
Balan Engineering Launches New Electric Vehicles Focussed to Benefit Rural Economy. Read in Kannada.
Story first published: Thursday, January 28, 2021, 22:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X