Just In
- 33 min ago
ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ
- 47 min ago
2021ರ ಫೆಬ್ರವರಿಯಲ್ಲಿ ಶೇ.103ರಷ್ಟು ಏರಿಕೆ ಕಂಡ ಟಾಟಾ ನೆಕ್ಸಾನ್ ಕಾರು ಮಾರಾಟ
- 47 min ago
ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
- 2 hrs ago
ಪ್ರತಿ ಚಾರ್ಜ್ಗೆ 240 ಕಿ.ಮೀ ಮೈಲೇಜ್ ನೀಡುವ ಓಲಾ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
Don't Miss!
- Sports
ಕೆವಿನ್ ಪೀಟರ್ಸನ್ ಸ್ಫೋಟಕ ಆಟಕ್ಕೆ ಶರಣಾದ ಬಾಂಗ್ಲಾದೇಶ್ ಲೆಜೆಂಡ್ಸ್
- News
ಬಜೆಟ್ 2021: ಪೊಲೀಸ್ ಇಲಾಖೆಗೆ ಸಿಕ್ಕಿರುವ ಕೊಡುಗೆಗಳೇನು?
- Lifestyle
ಮಹಿಳೆಯರ ದಿನ: ಡೂಡಲ್ನಲ್ಲಿ ನೀಡಿದ ಈ ಸಂದೇಶ ಗಮನಿಸಿದ್ದೀರಾ?
- Movies
'KGF 2' ಡಬ್ಬಿಂಗ್ ಶುರು ಮಾಡಿದ ನಟಿ ಶ್ರೀನಿಧಿ ಶೆಟ್ಟಿ
- Education
NIVEDI Recruitment 2021: 7 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಕರ್ನಾಟಕ ರಾಜ್ಯ ಬಜೆಟ್: ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ವಿಭಾಗದಲ್ಲಿ ಈ ಎರಡು ವಾಹನಗಳಿಗೆ ಅತಿ ಹೆಚ್ಚು ಬೇಡಿಕೆ..!
ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳ ಮರು ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಹೊಸ ಉದ್ಯಮ ವ್ಯವಹಾರದಲ್ಲಿ ವಿವಿಧ ವಾಹನಗಳಿಗೆ ಹೊಸ ವಾಹನಗಳ ಮಾದರಿಯಷ್ಟೇ ಅತಿ ಹೆಚ್ಚು ಬೇಡಿಕೆಯಿದೆ.

ಸೆಕೆಂಡ್ ಹ್ಯಾಂಡ್ ವಾಹನಗಳ ಮರು ಮಾರಾಟ ಮತ್ತು ಖರೀದಿ ವಿಭಾಗದಲ್ಲಿ ವಿವಿಧ ವಾಹನಗಳ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಮರು ಮಾರಾಟ ಮೌಲ್ಯ ಮತ್ತು ಸೆಕೆಂಡ್ ಹ್ಯಾಂಡ್ ವಾಹನಗಳ ಕುರಿತಾಗಿ ಇತ್ತೀಚೆಗೆ ಹೊಸ ಸಮೀಕ್ಷಾ ವರದಿಯೊಂದು ಪ್ರಕಟಗೊಂಡಿದೆ.
ಹೊಸ ಸಮೀಕ್ಷೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ವಾಹನಗಳ ಮರು ಮಾರಾಟ ಮತ್ತು ಖರೀದಿ ಪ್ರಮಾಣದ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಾಗಿದ್ದು, 2020ರ ಅವಧಿಯಲ್ಲಿನ ಸೆಕೆಂಡ್ ವಾಹನ ಮಾರಾಟದಲ್ಲಿ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಸರಣಿ ಮತ್ತು ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಗೆ ಅತಿ ಹೆಚ್ಚು ಬೇಡಿಕೆ ದಾಖಲಿಸಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿನ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಗಾರರಲ್ಲಿನ ಡೇಟಾ ಸಂಗ್ರಹಿಸಿ ನಡೆಸಲಾದ ಸಮೀಕ್ಷೆಯಲ್ಲಿ ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ಡಿಸೈರ್ ಮತ್ತು ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಸರಣಿಗಳು ಅತಿ ಮರು ಮಾರಾಟವಾಗುವುದರೊಂದಿಗೆ ಖರೀದಿಯಲ್ಲೂ ಮುಂಚೂಣಿಯಲ್ಲಿವೆ.

ದೇಶಾದ್ಯಂತ ಸೆಕೆಂಡ್ ವಾಹನ ಮಾರಾಟ ವಿಭಾಗವು ಹೊಸ ವಾಹನ ಮಾರಾಟ ವಿಭಾಗದಷ್ಟೇ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯಲ್ಲಿ ಮಾರುತಿ ಸುಜುಕಿ ಡಿಜೈರ್ ಕಾರು ಉತ್ತಮ ಬೇಡಿಕೆ ಪಡೆದುಕೊಂಡಲ್ಲಿ ಬೈಕ್ ಮಾದರಿಗಳಲ್ಲಿ ಪಲ್ಸರ್ ಸರಣಿ ಬೈಕ್‌ಗಳು ಅಗ್ರಸ್ಥಾನದಲ್ಲಿವೆ.

ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಪೈಕಿ ಮಾರುತಿ ಸುಜುಕಿ ಡಿಜೈರ್ ಮತ್ತು ಬಜಾಜ್ ಪಲ್ಸರ್ ಸರಣಿ ಬೈಕ್‌ಗಳಿಗೆ ಸಾಕಷ್ಟು ಮರುಮಾರಾಟ ಮೌಲ್ಯ ಕೂಡಾ ಉತ್ತಮವಾಗಿದ್ದು, ಬಜೆಟ್ ಕಾರು ಖರೀದಿದಾರರಿಗೆ ಮಾರುತಿ ಸುಜುಕಿ ಡಿಜೈರ್ ಕಾರು ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಗರಿಷ್ಠ ಮೈಲೇಜ್ ಹೊಂದಿರುವುದೇ ಖರೀದಿಗೆ ಉತ್ತಮವಾಗಿದೆ ಎನ್ನುವ ಮಾಹಿತಿಯು ಗ್ರಾಹಕರಲ್ಲಿದೆ.

ಇನ್ನು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ಕಾರು ಉತ್ಪಾದನಾ ಕಂಪನಿಗಳೇ ನಿರ್ವಹಣೆ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಬಳಕೆಯ ಮಾಡಿದ ವಾಹನಗಳಿಗೆ ಹೊಸ ವಾಹನಗಳ ಮಾದರಿಯಲ್ಲೇ ಹಲವಾರು ಆಫರ್ ನೀಡುತ್ತಿರುವುದಲ್ಲದೆ ಗರಿಷ್ಠ ವಾರಂಟಿಯೊಂದಿಗೆ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಭಾರೀ ಹೆಚ್ಚಳವಾಗಿರುವ ಪರಿಣಾಮ ಎಕ್ಸ್‌ಚೆಂಜ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಬಳಕೆ ಮಾಡಿದ ವಾಹನಗಳ ಖರೀದಿ ಮತ್ತು ಮರು ಮಾರಾಟ ಉದ್ಯಮದಲ್ಲಿ ಮಾರುತಿ ಸುಜುಕಿ ಸೇರಿದಂತೆ ವಿವಿಧ ಆಟೋ ಕಂಪನಿಗಳು ಭಾರೀ ಲಾಭಾಂಶ ಕಂಡುಕೊಳ್ಳುತ್ತಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಾರುತಿ ಸುಜುಕಿಯು ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಯನ್ನು, ಮಹೀಂದ್ರಾ ಕಂಪನಿಯು ಫಸ್ಟ್ ಚಾಯ್ಸ್, ಫೋಕ್ಸ್‌ವ್ಯಾಗನ್ ಕಂಪನಿಯು ದಾಸ್ ವೆಲ್ಟ್ ಆಟೋ ಸೇರಿದಂತೆ ವಿವಿಧ ಕಾರು ಕಂಪನಿಗಳು ಹೊಸ ಕಾರುಗಳ ಜೊತೆಯಲ್ಲೇ ಬಳಕೆ ಮಾಡಿದ ವಾಹನಗಳ ವ್ಯವಹಾರವನ್ನು ಕೂಡಾ ನಿರ್ವಹಿಸುತ್ತಿವೆ.

ಲಾಕ್‌ಡೌನ್‌ಗೂ ಮೊದಲು ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದು, ವೈರಸ್ ಭೀತಿ ಪರಿಣಾಮ ಹೊಸ ವಾಹನಗಳ ಮಾರಾಟ ಪ್ರಮಾಣಕ್ಕಿಂತಲೂ ಹೆಚ್ಚು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮರು ಮಾರಾಟ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಜೊತೆಗೆ ಹೊಸ ಕಾರು ಮಾರಾಟ ಮಾದರಿಯಲ್ಲೇ ಬಳಕೆ ಮಾಡಿದ ಕಾರುಗಳಿಗೂ ವಾರಂಟಿ, ಬ್ಯಾಂಕ್ ಸಾಲ ಸೌಲಭ್ಯ, ಎಕ್ಸ್‌ಚೆಂಜ್ ಆಫರ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಒದಗಿಸುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಮೋಸವಾಗದಂತೆ ನುರಿತ ಉದ್ಯೋಗಿಗಳನ್ನು ಒಳಗೊಂಡ ತಂಡದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ.