ದುಬಾರಿ ದುನಿಯಾ: ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ!

ಹೊಸ ವರ್ಷದಿಂದಲೇ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಜನವರಿ 1ರಿಂದಲೇ ಹೊಸ ಕಾರುಗಳ ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಹುತೇಕ ವಾಹನ ಕಂಪನಿಗಳು ತಮ್ಮ ಹೊಸ ವಾಹನಗಳ ದರ ಪರಿಷ್ಕರಣೆ ಮಾಡಲು ನಿರ್ಧರಿಸಿವೆ. ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಜನವರಿ 1ರಿಂದ ಮತ್ತೆ ಪ್ರಮುಖ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಮಾಹಿತಿಗಳ ಪ್ರಕಾರ ಹೊಸ ವಾಹನಗಳು ಜನವರಿ 1ರಿಂದ ಶೇ.2ರಿಂದ ಶೇ. 5 ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದ್ದು, ಹೆಚ್ಚಳವಾದ ಹೊಸ ದರ ಪಟ್ಟಿಯು ಶೀಘ್ರದಲ್ಲೇ ಪ್ರಕಟವಾಗಲಿದೆ.

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರುಗಳ ಬೆಲೆಯು ಬಜೆಟ್ ಮಾದರಿಗಳಲ್ಲಿ ರೂ.5 ಸಾವಿರದಿಂದ ರೂ.30 ಸಾವಿರ ತನಕ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ರೂ.20 ಸಾವಿರದಿಂದ ರೂ.50 ಸಾವಿರದಷ್ಟು ಮತ್ತು ಐಷಾರಾಮಿ ಕಾರುಗಳ ಬೆಲೆಯು ರೂ. 50 ಸಾವಿರದಿಂದ ರೂ.2 ಲಕ್ಷದಷ್ಟು ಹೆಚ್ಚಳವಾಗಬಹುದಾಗಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಹಾಗೆಯೇ ದ್ವಿಚಕ್ರ ವಾಹನಗಳ ಬೆಲೆಯು ಸಹ 100 ಸಿಸಿಯಿಂದ 125 ಸಿಸಿ ಮಾದರಿಗಳ ಬೆಲೆಯಲ್ಲಿ ರೂ. 2 ಸಾವಿರದಿಂದ ರೂ. 4 ಸಾವಿರದ ತನಕ, 125 ಸಿಸಿ ಯಿಂದ 150 ಸಿಸಿ ಮಾದರಿಗಳ ಬೆಲೆಯಲ್ಲಿ ರೂ.3 ಸಾವಿರದಿಂದ ರೂ. 5 ಸಾವಿರ ತನಕ, 150 ಸಿಸಿಯಿಂದ 250 ಸಿಸಿ ತನಕ ಬೈಕ್ ಮಾದರಿಗಳ ಬೆಲೆಯು ರೂ. 4 ಸಾವಿರದಿಂದ ರೂ. 8 ಸಾವಿರ ತನಕ ಮತ್ತು 250 ಸಿಸಿ ಮೇಲ್ಪಟ್ಟ ಪ್ರೀಮಿಯಂ ಬೈಕ್‌ಗಳ ಬೆಲೆಯು ರೂ. 5 ಸಾವಿರದಿಂದ ರೂ. 15 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 40 ಸಾವಿರದಿಂದ ರೂ.1 ಲಕ್ಷದಷ್ಟು ಮತ್ತು ಮಧ್ಯಮ ಕ್ರಮಾಂಕದ ಕಾರುಗಳು ರೂ. 50 ಸಾವಿರದಿಂದ ರೂ. 1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಹಾಗೆಯೇ ಕಳೆದ ವರ್ಷದಲ್ಲಿ ಐಷಾರಾಮಿ ಕಾರುಗಳ ಬೆಲೆಯು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 1.50 ಲಕ್ಷದಿಂದ ರೂ. 4 ಲಕ್ಷದ ತನಕ ದರ ಹೆಚ್ಚಳವಾಗಿದ್ದು, 2022ರಲ್ಲಿ ವಾಹನಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ವಿದೇಶಿ ಮಾರುಕಟ್ಟೆಗಳಿಂದ ಪ್ರಮುಖವಾಗಿ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಜೊತೆಗೆ ಸೆಮಿಕಂಡಕ್ಟರ್ ಕೊರತೆಯೇ ಹೊಸ ವಾಹನ ಬೆಲೆಯಲ್ಲಿ ಹೆಚ್ಚಿನ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಹೊಸ ವಾಹನಗಳಲ್ಲಿ ಹೆಚ್ಚುತ್ತಿರುವ ಕನೆಕ್ಟೆಡ್ ಫೀಚರ್ಸ್‌ಗಳಲ್ಲಿ ಸೆಮಿಕಂಡಕ್ಟರ್ ಅಳವಡಿಕೆಯು ಸಾಕಷ್ಟು ಹೆಚ್ಚುತ್ತಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಹೊಸ ವಾಹನಗಳ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದಲ್ಲದೆ ವಿತರಣೆ ಅವಧಿಯಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಎಲೆಕ್ಟ್ರಾನಿಕ್ ಚಿಪ್(ಸೆಮಿ ಕಂಡಕ್ಟರ್) ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

ಜನವರಿ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ತುಟ್ಟಿ

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವೇ ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಸೆಮಿ ಕಂಡಕ್ಟರ್‌ಗಳಿಗಾಗಿ ಭಾರತೀಯ ಆಟೋ ಉದ್ಯಮವು ಸಂಪೂರ್ಣವಾಗಿ ವಿದೇಶಿ ಕಂಪನಿಗಳನ್ನೇ ಅವಲಂಬಿಸಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

Article Published On: Monday, December 27, 2021, 9:41 [IST]
English summary
Bikes and cars manufacturers increasing price from jan 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+