ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ದುಬಾರಿ ಬೆಲೆಯ ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ನಟ ಅರ್ಜುನ್ ಕಪೂರ್ ಇತ್ತೀಚೆಗೆ ತನ್ನ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್‌ಗಳಲ್ಲೇ ಮೊದಲ ಬಾರಿಗೆ ಬಹು ದುಬಾರಿ ಮಸೆರಾಟಿ ಲೆವಾಂಟೆ ಎಸ್‌ಯುವಿಯನ್ನು ಕೊಂಡುಕೊಂಡ ಮೊದಲ ಭಾರತೀಯ ನಟ ಎನ್ನುವ ಹೆಗ್ಗಳಿಕೆ ಅರ್ಜುನ್‌ ಕಪೂರ್ ಅವರಿಗೆ ಸಲ್ಲುತ್ತದೆ. ಇನ್ನು ಅವರು ಐಷಾರಾಮಿ ಆಡಿ ಕ್ಯೂ5 ಎಸ್‍ಯುವಿಯನ್ನು ಕೂಡ ಹೊಂದಿದ್ದಾರೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ನಟ ಅರ್ಜುನ್ ಕಪೂರ್ ಹೆಚ್ಚಾಗಿ ಎಸ್‍ಯುವಿಗಳನ್ನು ಇಷ್ಟಪಡುತ್ತಾರೆ, ಅವರು ಇತ್ತೀಚೆಗೆ ಖರೀದಿಸಿದ ಲ್ಯಾಂಡ್ ರೋವರ್ ಡಿಫೆಂಡರ್ ಉತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಎಸ್‍ಯುವಿಯಾಗಿದೆ. ಪಾಣಿಪತ್ ಮತ್ತು 2 ಸ್ಟೇಟ್ಸ್ ನಂತಹ ಹಿಟ್ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಅರ್ಜುನ್ ಕಪೂರ್ ಅವರು ಖರೀದಿಸಿರುವುದು ಲ್ಯಾಂಡ್ ರೋವರ್ ಡಿಫೆಂಡರ್ 110 ಆವೃತ್ತಿಯಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಐಕಾನಿಕ್ ಆಫ್-ರೋಡ್ ಎಸ್‍ಯುವಿಯಾಗಿದೆ. ಈ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಲ್ಯಾಂಡ್ ರೋವರ್ ಕಂಪನಿಯು ತನ್ನ ಡಿಫೆಂಡರ್ ಎಸ್‍ಯುವಿ ಆಪ್-ರೋಡ್ ಗಾಗಿ ಅಕ್ಸೆಸರೀಸ್ ಗಳು ಕೂಡ ಲಭ್ಯವಿದೆ. ಡಿಫೆಂಡರ್ ಎಸ್‍ಯುವಿಗೆ ಎಕ್ಸ್‌ಪೆಡಿಶನ್ ಪ್ಯಾಕ್, ಕಂಟ್ರಿ ಪ್ಯಾಕ್, ಅರ್ಬನ್ ಪ್ಯಾಕ್ ಮತ್ತು ಅಡ್ವೆಂಚರ್ ಪ್ಯಾಕ್ ಎಂಬ ನಾಲ್ಕು ಆಫ್-ರೋಡ್ ಅಕ್ಸೆಸರೀಸ್ ಪ್ಯಾಕೇಜ್‌ಗಳ ಆಯ್ಕೆಯನ್ನು ಹೊಂದಿದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಹೊಸ ಡಿಫೆಂಡರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಆಗಿ ತರಲಾಗಿದೆ. ಇದು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. 3-ಡೋರಿನ ಮಾದರಿಯನ್ನು ಡಿಫೆಂಡರ್ 90 ಆದರೆ 5-ಡೋರಿನ ಮಾದರಿಯು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ 5,018 ಎಂಎಂ ಉದ್ದ, 2,105 ಎಂಎಂ ಅಗಲ ಮತ್ತು 1,967 ಎಂಎಂ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಡಿಸಿ 100 ಡಿಫೆಂಡರ್ ಕಾನ್ಸೆಪ್ಟ್ ನಿಂದ ಹೆಚ್ಚು ಪ್ರೇರಿತವಾಗಿದೆ ಮೂಲ ಆವೃತ್ತಿಯಿಂದ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಇಂಡಿಯಾ-ಸ್ಪೆಕ್ ಡಿಫೆಂಡರ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 292 ಬಿಹೆಚ್‌ಪಿ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಹೊಸ ಡಿಫೆಂಡರ್ ಲ್ಯಾಂಡ್ ರೋವರ್‌ನ ಟೆರೈನ್ ರೆಸ್ಪಾನ್ಸ್ 2 ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಇನ್ನು ಇದರೊಂದಿಗೆ ಡಿಫೆಂಡರ್ ಎಸ್‍ಯುವಿಯ 3.0-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 296 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಇದರ ಟ್ಯಾಕ್ಷನ್ ಅತ್ಯುತ್ತಮವಾಗಿಸಲು ಕಾನ್ಫಿಗರ್ ಮಾಡಬಹುದು ಮತ್ತು ಆಫ್-ರೋಡ್ಗೆ ಹೋಗುವಾಗ ಆಟೋಮ್ಯಾಟಿಕ್ 145 ಎಂಎಂ ನ್ಯೂಮ್ಯಾಟಿಕ್ ಸಸ್ಪೆಂಕ್ಷನ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ 50 ಎಂಎಂ ವರಗೆ ಹೆಚ್ಚಾಗುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯಲ್ಲಿ ಟಾರ್ಕ್ ವೆಕ್ಟರಿಂಗ್, ಕ್ರೂಸ್ ಕಂಟ್ರೋಲ್, ಆಲ್ ವ್ಹೀಲ್ ಡ್ರೈವ್, ಹಿಲ್ ಲಾಂಚ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್, ಅಡಾಪ್ಟಿವ್ ಡೈನಾಮಿಕ್ಸ್, ಟ್ವಿನ್-ಸ್ಪೀಡ್ ಟ್ರಾನ್ಸ್ಫರ್ ಬಾಕ್ಸ್ ಮತ್ತು ಹೆಚ್ಚಿನ ಎಲೆಕ್ಟ್ರಾನಿಕ್ ಫೀಚರ್ ಗಳನ್ನು ಒಳಗೊಂಡಿದೆ. ಡಿಫೆಂಡರ್‌ನ ನ್ಯೂಮ್ಯಾಟಿಕ್ ಸಸ್ಪೆಂಕ್ಷನ್ ಹೊಂದಿದ ರೂಪಾಂತರವು ಗರಿಷ್ಠ 291 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ನಟ ಅರ್ಜುನ್ ಕಪೂರ್

ಈ ಎಸ್‍ಯುವಿಯನ್ನು ಸಕ್ರಿಯಗೊಳಿಸಲು ಎರಡು ಸಿಮ್ ಕಾರ್ಡ್‌ಗಳನ್ನು ಸಹ ಹೊಂದಿರುತ್ತದೆ. ಓವರ್-ದಿ-ಏರ್ (ಒಟಿಎ) ನವೀಕರಣಗಳು. ವಿಭಿನ್ನ ಡೇಟಾವನ್ನು ಪ್ರದರ್ಶಿಸಲು ಕಾನ್ಫಿಗರ್ ಮಾಡಬಹುದಾದ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.

Article Published On: Wednesday, April 14, 2021, 9:59 [IST]
English summary
Actor Arjun Kapoor Brings Home A Brand New Land Rover Defender. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+