Just In
- 14 min ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 2 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 14 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 15 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಖರೀದಿಸಿದ ಬಾಲಿವುಡ್ ನಟ ರಣವೀರ್ ಸಿಂಗ್
ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಹೊಸ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಖರೀದಿಸಿದ್ದಾರೆ. ಈ ಹೊಸ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.43 ಕೋಟಿಯಾಗಿದೆ. ನಟ ರಣವೀರ್ ಸಿಂಗ್ ಅವರು 2019ರ ಕೊನೆಯಲ್ಲಿ ಕೆಂಪು ಬಣ್ಣದ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದರು. ಈ ಲ್ಯಾಂಬೊರ್ಗಿನಿ ಉರುಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.
ನಟ ರಣವೀರ್ ಸಿಂಗ್ ಅವರ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಹೊರಭಾಗವು ಅರಾನ್ಸಿಯೋ ಬೋರಿಯಾಲಿಸ್ ಶೇಡ್ ಪಿನಿಶಿಂಗ್ ನಿಂದ ಕೂಡಿದೆ. ಈ ಕಾರು 22 ಇಂಚಿನ ನಾಥ್ ವ್ಹೀಲ್ ಗಳನ್ನು ಪಡೆಯುತ್ತದೆ.
MOST
READ:
ಐಷಾರಾಮಿ
ಬಿಎಂಡಬ್ಲ್ಯು
ಎಕ್ಸ್7
ಕಾರು
ಚಾಲನೆ
ವೇಳೆ
ಕಾಣಿಸಿಕೊಂಡ
ಬಾಲಿವುಡ್
ಸ್ಟಾರ್
ರಣವೀರ್ ಅವರ ಸೂಪರ್ ಎಸ್ಯುವಿ ಡ್ಯೂಯಲ್ ಟೋನ್ ಬಣ್ಣವನ್ನು ಹೊಂದಿದೆ. ಇದು ಆರೇಂಜ್ ಬಣ್ಣದೊಂದಿಗೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ಹೊಂದಿದೆ. ಇದರ ಶೈನಿ ಬ್ಲ್ಯಾಕ್ ಥೀಮ್ ಬಂಪರ್, ರಾಕರ್ ಕವರ್ಗಳು, ಹಿಂಭಾಗದ ಡಿಫ್ಯೂಸರ್ ಮತ್ತು ಸ್ಪಾಯ್ಲರ್ ಲಿಪ್ ಮತ್ತು ಟೈಲ್ಗೇಟ್ ರಿಮ್ಗಳಿಗೆ ವಿಸ್ತರಿಸುತ್ತದೆ.
ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಲ್ಯಾಂಬೊರ್ಗಿನಿ ಅವರು ನಟನ ಮುಂಬೈ ನಿವಾಸಕ್ಕೆ ತಲುಪಿಸಿದ್ದಾರೆ. ರಣವೀರ್ ಮತ್ತು ಅವರ ಪತ್ನಿ ನಟಿ ದೀಪಿಕಾ ಪಡುಕೋಣೆ ಭಾನುವಾರ ರಾತ್ರಿ ಬೆಂಗಳೂರಿನಿಂದ ಮುಂಬೈಗೆ ಮರಳಿದ್ದಾರೆ.
ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಕಾರಿನಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 650 ಬಿಹೆಚ್ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
ಈ ಐಷಾರಾಮಿ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ನಟ ಕಾರ್ತಿಕ್ ಆರ್ಯನ್, ನಟ ಜೂನಿಯರ್ ಎನ್ಟಿಆರ್ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್ವ್ಯಾಗನ್ ಗ್ರೂಪ್ನ ಎಂಎಲ್ಬಿ ಇವೊ ಪ್ಲಾಟ್ಫಾರಂ ಅನ್ನು ಆಧರಿಸಿದೆ. ಲ್ಯಾಂಬೊರ್ಗಿನಿ ಉರುಸ್ ಸ್ಲಿಮ್ ಆಗಿರುವ ಎಲ್ಇಡಿ ಹೆಡ್ಲೈಟ್ ಹಾಗೂ ಟೇಲ್ ಲೈಟ್ಗಳನ್ನು ಹೊಂದಿದೆ.
ಉರುಸ್ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರ್ ನಿಂದ ಸ್ಫೂರ್ತಿ ಪಡೆದಿದೆ. ಈ ಎಸ್ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.
Image Courtesy: Supercars India/Instagram