ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹಲವು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಘೋಷಿಸಿವೆ. ಹರಿಯಾಣ ರಾಜ್ಯದಲ್ಲಿಯೂ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಇತ್ತೀಚಿನ ಮಾಹಿತಿಗಳ ಪ್ರಕಾರ, ಚಂಡೀಗಢದಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕ್ಯಾರೋಲಿನ್ ರೋವೆಟ್'ರವರು ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾರವರನ್ನು ಶುಕ್ರವಾರ ಭೇಟಿಯಾಗಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಈ ಭೇಟಿಯ ಸಂದರ್ಭದಲ್ಲಿ ಕ್ಯಾರೋಲಿನ್ ರೋವೆಟ್'ರವರು ಹರಿಯಾಣದಲ್ಲಿ ಎಲೆಕ್ಟ್ರಿಕ್ ವಾಹನ, ನಾಗರಿಕ ವಿಮಾನಯಾನ ಹಾಗೂ ಅಗ್ರಿಟೆಕ್ ಅನ್ನು ಉತ್ತೇಜಿಸಲು ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಮಾತನಾಡಿದ್ದಾರೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವ ಹರಿಯಾಣ ಸರ್ಕಾರದ ಉದ್ದೇಶದ ಬಗ್ಗೆ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾರವರು ಕ್ಯಾರೋಲಿನ್ ರೋವೆಟ್‌ರವರಿಗೆ ವಿವರಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ರಾಜ್ಯ ಸರ್ಕಾರವು ಬೆಳವಣಿಗೆ ಹಾಗೂ ಅಭಿವೃದ್ಧಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದೇ ವೇಳೆ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ರೂಪಿಸಲು ಹಾಗೂ ಏರೋಸ್ಪೇಸ್ ಅನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ ಎಂದು ಚೌತಾಲಾರವರು ಕ್ಯಾರೋಲಿನ್'ರವರಿಗೆ ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಕರಡು ನೀತಿಗಳಲ್ಲಿ ಅತ್ಯಾಕರ್ಷಕ ಸಾಧ್ಯತೆಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಭೂಮಿ ಹಾಗೂ ಮೂಲಸೌಕರ್ಯ ಸಬ್ಸಿಡಿ ಸವಲತ್ತು, ಪೂರ್ವ ಹಾಗೂ ನಂತರದ ಅನುಮೋದನೆ, ವಿದ್ಯುತ್, ಆಸ್ತಿ, ತೆರಿಗೆ ಹಾಗೂ ಇತರ ಆರ್ಥಿಕ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ನಾವು ಈಗಾಗಲೇ ವಾಹನ ಕ್ಷೇತ್ರದ ಪ್ರಮುಖ ತಯಾರಕರಲ್ಲಿ ಒಬ್ಬರಾಗಿದ್ದು, ಈಗ ಈ ಪ್ರಗತಿಪರ ನೀತಿಗಳ ಮೂಲಕ ಇತರ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತೇವೆ ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಕ್ಯಾರೋಲಿನ್ ರೋವೆಟ್ ಮುಂಬರುವ ಯೋಜನೆಗಳಿಗೆ ಹರಿಯಾಣ ಸರ್ಕಾರಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಎಲೆಕ್ಟ್ರಿಕ್ ವಾಹನ ನೀತಿಗೆ ಹೆಚ್ಚಿನ ಬೆಂಬಲ ನೀಡುವ ಬಗ್ಗೆ ಕ್ಯಾರೋಲಿನ್ ಭರವಸೆ ನೀಡಿದ್ದು ಗಮನಿಸಬೇಕಾದ ಸಂಗತಿಯಾಗಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಬೆಂಬಲ ಸೂಚಿಸಿದ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್

ಅಂತಿಮ ನೀತಿ ರೂಪಿಸುವ ಮೊದಲು ಇನ್ ಪುಟ್'ಗಳನ್ನು ಹಂಚಿಕೊಳ್ಳಲಾಗುತ್ತದೆ. ಹರಿಯಾಣ ಸರ್ಕಾರದ ಕರಡು ನೀತಿಗಳನ್ನು ಮೆಚ್ಚಿರುವ ಅವರು ಹರಿಯಾಣ ಸರ್ಕಾರದ ಭವಿಷ್ಯದ ವಿಧಾನವು ಪ್ರಭಾವಶಾಲಿಯಾಗಿದೆ ಎಂದು ಹೇಳಿದ್ದಾರೆ.

Most Read Articles

Kannada
English summary
British Deputy High Commissioner supports Haryana government's e vehicle policy. Read in Kannada.
Story first published: Saturday, July 3, 2021, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X