ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಆಟೋ ಬಿಡಿಭಾಗಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ಕೂಡಾ ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು ಬೆಲೆ ಏರಿಕೆ ಮಾಡಿದ್ದ ಪ್ರಮುಖ ಕಾರು ಕಂಪನಿಗಳು ಇದೀಗ ಮತ್ತೊಮ್ಮೆ ಹೊಸ ವಾಹನಗಳ ಬೆಲೆ ಪರಿಷ್ಕರಣೆಗೆ ಮುಂದಾಗಿವೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವುದಾಗಿ ಸುಳಿವು ನೀಡಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಹೊಸ ವಾಹನಗಳ ದರದಲ್ಲಿ0 ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಂಪನಿಯು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯು ಸರಾಸರಿಯಾಗಿ ರೂ. 50 ಸಾವಿರದಿಂದ ರೂ.1.20 ಲಕ್ಷದಷ್ಟು ದುಬಾರಿಯಾಗಿವೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದಷ್ಟು ಬೆಲೆ ಹೆಚ್ಚಳವಾಗಿದ್ದು, ಐಷಾರಾಮಿ ಕಾರುಗಳ ಬೆಲೆಯು ಎಕ್ಸ್‌ಶೋರೂಂ ದರದಲ್ಲಿ ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 2 ಲಕ್ಷದಿಂದ ರೂ. 5 ಲಕ್ಷದ ತನಕ ದುಬಾರಿಯಾಗಿವೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳ ಮತ್ತು ಕೊರತೆಯ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಪ್ರಮುಖ ಕಾರುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಮತ್ತೊಮ್ಮೆ ದರ ಹೆಚ್ಚಿಸುತ್ತಿದೆ. ಜನವರಿ 1ರಿಂದ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆಗೆ ಸಿದ್ದವಾಗಿದ್ದು, ವಿವಿಧ ವಾಹನಗಳ ಬೆಲೆಯಲ್ಲಿ ಶೇ.1 ರಿಂದ ಶೇ.2.50 ರಷ್ಟು ಬೆಲೆ ಹೆಚ್ಚಳವಾಗಬಹುದಾಗಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದಲ್ಲದೆ ವಿತರಣೆ ಅವಧಿಯಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಎಲೆಕ್ಟ್ರಾನಿಕ್ ಚಿಪ್(ಸೆಮಿ ಕಂಡಕ್ಟರ್) ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಸಮಸ್ಯೆಯೇ ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಸೆಮಿ ಕಂಡಕ್ಟರ್‌ಗಳಿಗಾಗಿ ಭಾರತೀಯ ಆಟೋ ಉದ್ಯಮವು ಸಂಪೂರ್ಣವಾಗಿ ವಿದೇಶಿ ಕಂಪನಿಗಳನ್ನೇ ಅವಲಂಬಿಸಿವೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಕೋವಿಡ್ ಪರಿಸ್ಥಿತಿ ಸುಧಾರಿಸಿರುವುದರಿಂದ ಆಟೋಮೊಬೈಲ್ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಆಟೋಮೊಬೈಲ್ ವಲಯಕ್ಕೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದ್ದ ಸೆಮಿ ಕಂಡಕ್ಟರ್ ಪೂರೈಕೆಯು ಎಲೆಕ್ಟ್ರಾನಿಕ್ ಸಾಧನ ಉತ್ಪಾದನಾ ಕಂಪನಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಆಧುನಿಕ ಫೀಚರ್ಸ್‌ಗಳನ್ನು ಹೊಂದಿರುವ ಹೊಸ ಕಾರುಗಳಲ್ಲಿ ಸದ್ಯ ಪ್ರತಿ ಕಾರು ಮಾದರಿಯಲ್ಲಿ 20ರಿಂದ 25 ಸೆಮಿಕಂಡಕ್ಟರ್‌ಗಳ ಅವಶ್ಯಕತೆಯಿದ್ದು, ಇದು ಐಷಾರಾಮಿ ಕಾರುಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಚಿಪ್ ಅವಶ್ಯವಿರುತ್ತದೆ. ಆದರೆ ಚಿಪ್ ಪೂರೈಕೆಯಿಲ್ಲದಿರುವುದು ಕಾರು ಉತ್ಪಾದನೆಗೆ ಹೊಡೆತ ನೀಡುತ್ತಿದ್ದು, ಸೆಮಿಕಂಡಕ್ಟರ್ ಸಮಸ್ಯೆ ಬಗೆಹರಿಯಲು ಇನ್ನು ಕೆಲವು ತಿಂಗಳುಗಳೇ ಬೇಕಾಗಬಹುದಾಗಿದೆ.

ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ಮತ್ತಷ್ಟು ದುಬಾರಿಯಾಗಲಿವೆ ಹೊಸ ಕಾರುಗಳ ಬೆಲೆ!

ಹೀಗಾಗಿ ಸೆಮಿ ಕಂಡಕ್ಟರ್ ಪೂರೈಕೆ ತಗ್ಗಿರುವುದಿಂದ ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕೇವಲ ಭಾರತದಲ್ಲಿ ಮಾತ್ರವಲ್ಲ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಪ್ರಮುಖ ದೇಶಗಳಲ್ಲಿನ ವಾಹನ ಉತ್ಪಾದನೆಯು ಮೇಲೂ ಪರಿಣಾಮ ಉಂಟುಮಾಡುತ್ತಿದೆ.

Article Published On: Tuesday, December 7, 2021, 11:14 [IST]
English summary
Carmakers announce price hikes from january 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+