ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಮಹೀಂದ್ರಾ ಕಂಪನಿಯು ತನ್ನ ಹೊಸ ಬೊಲೆರೊ ನಿಯೋ ಕಾರು ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಗಾಗಿ ಸಿಯೆಟ್ ನಿರ್ಮಾಣದ ವಿಶೇಷ ವಿನ್ಯಾಸದ ಟೈರ್ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಜನಪ್ರಿಯ ಟೈರ್ ಉತ್ಪಾದನಾ ಕಂಪನಿಯಾಗಿರುವ ಸಿಯೆಟ್ ಮಹೀಂದ್ರಾ ನಿರ್ಮಾಣದ ಪ್ರಮುಖ ಕಾರು ಮಾದರಿಗಾಗಿ ವಿವಿಧ ವಿನ್ಯಾಸದ ಟೈರ್‌ಗಳನ್ನು ಒದಗಿಸುವ ಯೋಜನೆಗೆ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಹೊಸದಾಗಿ ಬಿಡುಗಡೆ ಮಾಡಲಾಗಿರುವ ಬೊಲೆರೊ ನಿಯೋ ಮಾದರಿಗಾಗಿ ಸಿಸರ್ ಹೆಚ್‌ಪಿ ಟೈರ್ ಒದಗಿಸಲು ಒಪ್ಪಿಗೆ ಸೂಚಿಸಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಸಿಯೆಟ್ ನಿರ್ಮಾಣದ ಸಿಸರ್ ಹೆಚ್‌ಪಿ 217/75 ಆರ್15 ಟೈರ್ ಮಾದರಿಯು ವಿಶೇಷವಾಗಿ ಬೊಲೆರೊ ನಿಯೋ ಮಾದರಿಗಾಗಿ ಸಿದ್ದಗೊಳಿಸಲಾಗಿದ್ದು, ಉತ್ತಮ ಹಿಡಿತ ಮತ್ತು ಇಂಧನ ದಕ್ಷತೆಗೆ ಸಹಕಾರಿಯಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಮಹೀಂದ್ರಾ ಕಂಪನಿಯೊಂದಿಗೆ 2015ರಿಂದಲೂ ವಿವಿಧ ಕಾರು ಮಾದರಿಗಳಿಗಾಗಿ ಹಲವು ಟೈರ್ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಸಿಯೆಟ್ ಕಂಪನಿಯು ಬೊಲೆರೊ ನಿಯೋಯಲ್ಲಿ ಜೋಡಿಸಲಾಗಿರುವ ಹೊಸ ತಂತ್ರಜ್ಞಾನ ಪ್ರೇರಿತ ಟೈರ್ ಉತ್ತಮ ಮೈಲೇಜ್ ನೀಡಬಲ್ಲವು ಎನ್ನುವ ವಿಶ್ವಾಸ ವ್ಯಕ್ತಪಡಿಸಿವೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಇನ್ನು ಹೊಸ ಬೊಲೆರೊ ನಿಯೋ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.48 ಲಕ್ಷ ಬೆಲೆ ಹೊಂದಿದ್ದು, ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ತಾಂತ್ರಿಕ ಅಂಶಗಳಿಗಳಿಗೆ ಅನುಗುಣವಾಗಿ ಬೊಲೆರೊ ನಿಯೋ ಕಾರಿನಲ್ಲಿ ಎನ್4 (ರೂ.8.48 ಲಕ್ಷ), ಎನ್8(ರೂ.9.48 ಲಕ್ಷ) ಮತ್ತು ಎನ್10(ರೂ.9.99 ಲಕ್ಷ) ಬೆಲೆ ಹೊಂದಿದ್ದು, ಹೊಸ ಕಾರಿನ ಎನ್10 ಆಪ್ಷನ್ ಮಾದರಿಯ ಬೆಲೆಯನ್ನು ಕಂಪನಿಯು ಶೀಘ್ರದಲ್ಲೇ ಘೋಷಣೆ ಮಾಡಲಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಹೊಸ ಬೊಲೆರೊ ನಿಯೋ ಕಾರನ್ನು ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಮತ್ತು ಥಾರ್ ಕಾರು ಮಾದರಿಯ ನಿರ್ಮಾಣಕ್ಕಾಗಿ ಬಳಕೆ ಮಾಡಲಾಗುತ್ತಿರುವ ಮ್ಯಾಡೂಲರ್ ಚಾರ್ಸಿ ಸೌಲಭ್ಯದೊಂದಿಗೆ ನಿರ್ಮಾಣ ಮಾಡಿದ್ದು, ಹೊಸ ಕಾರಿನಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಬೊಲೆರೊ ನಿಯೋ ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಹೊಸ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಹಲವಾರು ತಾಂತ್ರಿಕ ಅಂಶಗಳನ್ನು ಅಳವಡಿಸಲಾಗಿದ್ದು, ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆರ್ಮ್ ರೆಸ್ಟ್, ಸ್ಮಾರ್ಟ್‌ಪೋನ್ ಕನೆಕ್ಟಿವಿಟಿ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್ಹ್, ಎಸಿ, ಇಕೋ ಮೋಡ್, ಎರಡನೇ ಸಾಲಿಗೂ ಆರ್ಮ್ ರೆಸ್ಟ್ ಮತ್ತು ಬಿಜ್ ಬಣ್ಣದ ಫ್ರ್ಯಾಬಿಕ್ ಆಸಸಗಳನ್ನು ನೀಡಲಾಗಿದೆ.

ಮಹೀಂದ್ರಾ ಬೊಲೆರೊ ನಿಯೋ ಮಾದರಿಗಾಗಿ ಹೊಸ ವಿನ್ಯಾಸದ ಟೈರ್ ಒದಗಿಸಿಲಿದೆ ಸಿಯೆಟ್

ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಮಹೀಂದ್ರಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

Most Read Articles

Kannada
English summary
CEAT Partners With Mahindra For The Launch Of Bolero Neo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X