ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ Citroen ಶೀಘ್ರದಲ್ಲೇ ತನ್ನ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಇದೇ ತಿಂಗಳು 16ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುವ ಸಾಧ್ಯತೆಗಳಿವೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಕಂಪ್ಯಾಕ್ಟ್ ಎಸ್‌ಯುವಿಯು ವಿಭಾಗವು ಭಾರತದಲ್ಲಿ ಸದ್ಯ ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, Citroen ಕಂಪನಿಯು ಕೂಡಾ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

Citroen ಹೊಸ ಕಾರಿನ ಅಧಿಕೃತ ಹೆಸರು ಇನ್ನು ಕೂಡಾ ಅಂತಿಮವಾಗಿಲ್ಲವಾದರೂ ಹೊಸ ಕಾರು ವಿದೇಶಿ ಮಾರುಕಟ್ಟೆಯಲ್ಲಿರುವ C3 ಮಾದರಿಯನ್ನು ಆಧರಿಸಿದ್ದು, C21 ಕೋಡ್‌ನೆಮ್ ಮೂಲಕ ಭಾರತದಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

Citroren ಕಂಪನಿಯು ಹೊಸ ಕಾರಿನಲ್ಲಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ಆಯ್ಕೆ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದ್ದು, ಫ್ಲೆಕ್ಸ್ ಎಂಜಿನ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ವಿಶ್ವಾದ್ಯಂತ ಇಂಧನಗಳ ಬೆಲೆ ಏರಿಕೆಯಾಗುತ್ತಿರುವ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾದ ಇಂಧನಗಳ ಮೇಲೆ ಕಾರ್ಯನಿರ್ವಹಿಸುವ ಹೊಸ ವಾಹನಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಫ್ಲೆಕ್ಸ್ ಫ್ಯೂಲ್ ವಾಹನಗಳು ಹೊಸ ಭರವಸೆಯನ್ನು ಮೂಡಿಸುತ್ತಿವೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇಂಧನ ಬಳಕೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದ್ದರೂ ಪರ್ಯಾಯ ಇಂಧನಗಳ ಚಾಲಿತ ವಾಹನಗಳ ಆವಿಷ್ಕಾರ ಕೂಡಾ ಜೋರಾಗಿದ್ದು, Citroen ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ತನ್ನ ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ಸೇರ್ಪಡೆಗೆ ಮುಂದಾಗಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸುವಷ್ಟು ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಕಾರುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಿಣ ಪ್ರಮಾಣವನ್ನು ನಿಧಾನವಾಗಿ ಹೆಚ್ಚಳ ಮಾಡಲಾಗುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಎಥೆನಾಲ್ ಪ್ರಮಾಣವನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಇದೇ ತಂತ್ರಜ್ಞಾನದ ಮೇಲೆ Citroen ಕಂಪನಿಯು ತನ್ನ ಹೊಸ ಕಾರನ್ನು ಪೆಟ್ರೋಲ್ ಮತ್ತು ಎಥೆನಾಲ್ ಎರಡರಿಂದಲೂ ಚಾಲನೆ ಮಾಡುವಂತೆ ಅಭಿವೃದ್ದಿಪಡಿಸುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ವಾಹನಗಳು ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದೊಂದಿಗೆ ಚಾಲನೆಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಇದಕ್ಕಾಗಿ ಹಂತ-ಹಂತವಾಗಿ ಎಥೆನಾಲ್ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇದಕ್ಕೆ ಪೂರಕವಾಗಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ Citroen ಕಂಪನಿಯು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಸಂಪೂರ್ಣವಾಗಿ ಎಥೆನಾಲ್ ಇಲ್ಲವೇ ಪೆಟ್ರೋಲ್ ಮೂಲಕ ಸಂಚರಿಸುವಂತೆ ಅಭಿವೃದ್ದಿಪಡಿಸುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

E85 ಗ್ಯಾಸ್ ಮೇಲೆ ಸಂಚರಿಸುವ ಫ್ಲೆಕ್ಸ್ ಫ್ಯೂಲ್ ಕಾರುಗಳು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಕಾರ್ಯಕ್ಷಮತೆ ಜೊತೆಗೆ ಅತಿ ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತವೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹೀಗಾಗಿ ಹೊಸ ತಂತ್ರಜ್ಞಾನ ಪ್ರೇರಿತ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ Citroen ಕಂಪನಿಯು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ C3 ಮಾದರಿಗಾಗಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ಜೋಡಣೆ ಮಾಡುತ್ತಿದ್ದು, ಹೊಸ ಕಾರು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯ ನೀರಿಕ್ಷೆಯಲ್ಲಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗಾಗಿ Citroen ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಿದ್ದು, ಈ ತಿಂಗಳು 16ರಂದು ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರನ್ನು Citroen ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರು 1.2-ಲೀಟರ್ ಪೆಟ್ರೋಲ್( ಫ್ಲೆಕ್ಸ್ ಫ್ಯೂಲ್) ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ

Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದ್ದು, ಹೊಸ ಭಾರತದಲ್ಲಿ ಫ್ಲೆಕ್ಸ್ ಫ್ಯೂಲ್ ಆಯ್ಕೆ ಹೊಂದಿರುವ ಮೊದಲ ಕಾರು ಮಾದರಿಯಾಗಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿದೆ Citroen ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ

Citroen ಕಂಪನಿಯು ಹೊಸ ಕಾರು ಮಾದರಿಯ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್, ರೆನಾಲ್ಟ್ ಕಿಗರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ಯೋಜನೆಯಲ್ಲಿದೆ.

More from DriveSpark

Article Published On: Wednesday, September 1, 2021, 10:57 [IST]
English summary
Citroen c3 compact suv production spec revealed this month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+