ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಸಿಟ್ರನ್ ಇಂಡಿಯಾ ಕಂಪನಿಯು ಸಿ5 ಏರ್‌ಕ್ರಾಸ್ ಐಷಾರಾಮಿ ಎಸ್‌ಯುವಿ ಬಿಡುಗಡೆ ನಂತರ ಎರಡನೇ ಕಾರು ಮಾದರಿಯಾಗಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರು ವಿನೂತನ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಸಿ5 ಏರ್‌ಕ್ರಾಸ್ ಏಸ್‌ಯುವಿ ಕಾರು ಮಾದರಿಯು ಐಷಾರಾಮಿ ಸೌಲಭ್ಯಗಳೊಂದಿಗೆ ತುಸು ದುಬಾರಿಯಾಗಿದ್ದರೂ ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಭಿವೃದ್ದಿಗೊಳಿಸಲಾಗುತ್ತಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಸಿಟ್ರನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಎಸ್‌ಯುವಿ ಬಿಡುಗಡೆಯ ನಂತರ ಇದೀಗ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸುತ್ತಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಭಾರತದಲ್ಲಿ ಹೊಸ ಸಬ್ ಫೋರ್ ಮೀಟರ್(4 ಮೀಟರ್ ಉದ್ದಳತೆಗಿಂತಲೂ ಕಡಿಮೆ) ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಸಿ21 ಕೋಡ್ ನೆಮ್ ಆಧರಿಸಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಸಿಟ್ರನ್ ಕಂಪನಿಯು ಬಿಡುಗಡೆ ಮಾಡುತ್ತಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಹೊಸ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಕುರಿತಾಗಿ ಮೊದಲ ಬಾರಿಗೆ ಅಧಿಕೃತ ಡಿಸೈನ್ ಕುರಿತಾದ ವಿನ್ಯಾಸವು ಬಹಿರಂಗವಾಗಿದೆ. ರೋಡ್ ಟೆಸ್ಟಿಂಗ್ ಮಾದರಿಯಲ್ಲಿನ ಬಹುತೇಕ ವಿನ್ಯಾಸವನ್ನು ಉತ್ಪಾದನಾ ಮಾದರಿಯಲ್ಲೂ ಪಡೆದುಕೊಂಡಿದ್ದು, ಹೊಸ ಕಾರು ಮುಂಬರುವ ಅಗಸ್ಟ್ ಅಥವಾ ಸೆಪ್ಟೆಂಬರ್ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಸದ್ಯ ಸಿ5 ಏರ್‌ಕ್ರಾಸ್ ಬಿಡುಗಡೆಯೊಂದಿಗೆ ಭಾರತದಲ್ಲಿ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸಿಟ್ರನ್ ಕಂಪನಿಯು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಹೊಸ ಶೋರೂಂ ತೆರೆಯುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳ ಅಭಿವೃದ್ದಿಗೆ ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆ ಮಾಡುವ ಗುರಿಹೊಂದಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಸಿ5 ಏರ್‌ಕ್ರಾಸ್ ಕಾರು ಮಾದರಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡಿರುವ ಸಿಟ್ರನ್ ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಪ್ರಮುಖ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮಾತ್ರವೇ ಬಿಡುಗಡೆ ಮಾಡುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಪೂರ್ವ ನಿಗದಿಯೆಂತೆ ಸಿ5 ಏರ್‌ಕ್ರಾಸ್ ಮಾದರಿಗಾಗಿ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದ ಸಿಟ್ರನ್ ಕಂಪನಿಯು ಮುಂಬರುವ ಕಾರುಗಳಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ.

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಹೀಗಾಗಿ ಮುಂಬರುವ ಸಿ3 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಗೇರ್‌ಬಾಕ್ಸ್ ಆಯ್ಕೆಗಳಿರಲಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೀಗಿರಲಿದೆ ಬಿಡುಗಡೆಯಾಗಲಿರುವ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಡಿಸೈನ್

ಈ ಮೂಲಕ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದ್ದು, ಹೊಸ ಕಾರು ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಉತ್ತಮ ಪೈಟೋಟಿ ನೀಡಲಿದೆ.

Article Published On: Thursday, May 20, 2021, 13:09 [IST]
English summary
Citroen C3 Design Leaked Via Scale Model Ahead Of India Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+