ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಸಿಟ್ರನ್ ಇಂಡಿಯಾ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ತನ್ನ ಮೊದಲ ಕಾರು ಮಾದರಿಯಾಗಿ ಸಿ5 ಏರ್‌ಕ್ರಾಸ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಆಕ್ಸೆಸರಿಸ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಹೊಸ ಕಾರಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಒದಗಿಸಲು ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೊತ್ತದಲ್ಲಿ ಆಕ್ಸೆಸರಿಸ್ ಪ್ಯಾಕೇಜ್ ನೀಡಲಿದೆ. ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬೇಕಿದ್ದು, ಗ್ರಾಹಕರ ಬೇಡಿಕೆಯೆಂತೆ ಆಕ್ಸೆಸರಿಸ್ ಪಟ್ಟಿಯಲ್ಲಿ ಹಲವಾರು ತಾಂತ್ರಿಕ ಅಂಶಗಳು ಒಳಗೊಂಡಿವೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಆಕ್ಸೆಸರಿಸ್ ಪಟ್ಟಿಯಲ್ಲಿ ಕಾರ್ ಕವರ್, ಫ್ರಂಟ್ ಮಡ್ ಫ್ಲಾಪ್ಸ್, ರಿಯರ್ ಮಡ್ ಫ್ಲಾಪ್ಸ್, 18-ಇಂಚಿನ ಅಲ್ಯುನಿಯಂ ವೀಲ್ಹ್ ಸೆಟ್, ಆ್ಯಂಟಿ ಥೆಫ್ಟ್ ಫೀಚರ್ಸ್ ಹೊಂದಿರುವ ಅಲಾಯ್ ವೀಲ್ಹ್, ವಿವಿಧ ಬಣ್ಣಗಳನ್ನು ಹೊಂದಿರುವ ಬ್ರಾಂಡ್ ಲೊಗೊ, ವೀಂಡೋ ಡಿಫ್ಲೆಕ್ಟರ್ ಮತ್ತು ಸೈಡ್ ಸನ್ ಶೆಡ್ ಸೆಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಹೊರಭಾಗದಂತೆ ಒಳಭಾಗದಲ್ಲೂ ಕೆಲವು ಪ್ರಮುಖ ಫೀಚರ್ಸ್‌ಗಳಿಗೆ ಪೂರಕವಾಗಿ ರಿಯರ್ ವೀಂಡೋ ಸನ್ ಶೆಡ್, ವಿವಿಧ ವಿನ್ಯಾಸವುಳ್ಳ ಫ್ಲೊರ್ ಮ್ಯಾಟ್, ಸೀಟ್ ಕವರ್, ಬಂಪರ್ ಪ್ರೊಟೆಕ್ಟರ್, ಟ್ರಂಕ್ ನೆಟ್, ಟ್ರ್ಯಾಂಕ್ ಟ್ರೇ ಸೌಲಭ್ಯಗಳಿದ್ದು, ಎಸ್‌ಯುವಿ ಕಾರು ಮಾದರಿಯಲ್ಲೇ ವಿಭಿನ್ನವಾದ ಶೈಲಿ ಹೊಂದಿರುವ ಸಿಟ್ರನ್ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಸಿ5 ಏರ್‌ಕ್ರಾಸ್ ಎಸ್‌ಯುವಿಯಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯವಿದೆ. ಹಾಗೆಯೇ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 1,969 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಾಗಲಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಎಂಜಿನ್ ಮತ್ತು ಪರ್ಫಾಮೆನ್ಸ್

ಸಿ5 ಏರ್‌ಕ್ರಾಸ್ ಕಾರಿನಲ್ಲಿ ಸಿಟ್ರನ್ ಕಂಪನಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಎಂಜಿನ್ ಮಾದರಿಯು 8 ಸ್ಟೀಡ್ ಆಟೋಮ್ಯಾಟಿಕ್ ಸ್ಟ್ಯಾಂಡರ್ಡ್ ಗೇರ್‌ಬಾಕ್ಸ್‌ನೊಂದಿಗೆ 175-ಬಿಎಚ್‌ಪಿ ಮತ್ತು 400 ಎನ್ಎಂ ಉತ್ಪಾದಿಸುವ ಮೂಲಕ ಪ್ರತಿ ಲೀಟರ್‌ಗೆ 18.06 ಕಿಮೀ ಮೈಲೇಜ್ ಹಿಂದಿರುಗಿಸುವುದಾಗಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರಿನ ಆಕ್ಸೆಸರಿಸ್ ಮಾಹಿತಿ ಹಂಚಿಕೊಂಡ ಸಿಟ್ರನ್

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಾದ ಹ್ಯುಂಡೈ ಟ್ಯುಸಾನ್, ಸ್ಕೋಡಾ ಕರೋಕ್, ಫೋಕ್ಸ್‌ವ್ಯಾಗನ್ ಟಿ ರಾಕ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23 ಲಕ್ಷದಿಂದ ರೂ. 27 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Citroen C5 Aircross Accessories Details Revealed. Read in Kannada.
Story first published: Tuesday, February 9, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X