ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‌ಯುವಿ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯೊಂದಿಗೆ ಭಾರತದಲ್ಲಿ ಕಾರು ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡುತ್ತಿದ್ದು, ಸಿಟ್ರನ್ ಕಂಪನಿಯು ಶೀಘ್ರದಲ್ಲೇ ಹೊಸ ಕಾರು ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.

ಸಿ5 ಏರ್‌ಕ್ರಾಸ್ ಕಾರು ಮಾದರಿಯನ್ನು ಭಾರತದಲ್ಲಿ ಈಗಾಗಲೇ ಅನಾವರಣಗೊಳಿಸಿ ರೂ.50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿರುವ ಸಿಟ್ರನ್ ಕಂಪನಿಯು ಮುಂದಿನ ಕೆಲವೇ ದಿನಗಗಳಲ್ಲಿ ಹೊಸ ಕಾರು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ದೇಶದ ಪ್ರಮುಖ ನಗರಗಳಲ್ಲಿ ಕಾರು ಮಾರಾಟ ಮಳಿಗೆಗಳ ಆರಂಭಕ್ಕೆ ಚಾಲನೆ ನೀಡುತ್ತಿದೆ. ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಕಂಪನಿಯು ಹಲವಾರು ಆಫರ್ ನೀಡಿದ್ದು, ಹೊಸ ಕಾರನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹೊಸ ಕಾರು ಖರೀದಿಗಾಗಿ ಏಪ್ರಿಲ್ 6ರ ಒಳಗಾಗಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿಯಾಗಿ 50 ಸಾವಿರ ಕಿ.ಮೀ ಅಥವಾ 5 ವರ್ಷಗಳ ಹೆಚ್ಚುವರಿ ವಾರಂಟಿಯನ್ನು ಉಚಿತವಾಗಿ ನೀಡುತ್ತಿದೆ.

ನಿಗದಿತ ಅವಧಿ ನಂತರ ಬುಕ್ಕಿಂಗ್ ಮಾಡಲಾಗುವ ಗ್ರಾಹಕರಿಗೆ ಸ್ಟ್ಯಾಂಡರ್ಡ್ ವಾರಂಟಿ ಸೌಲಭ್ಯಗಳು ಎಂದಿನಂತೆ ಅನ್ವಯವಾಗಲಿದ್ದು, ಆರಂಭದಲ್ಲಿ ಗ್ರಾಹರಕನ್ನು ಆಕರ್ಷಿಸಲು ಹೆಚ್ಚುವರಿ ವಾರಂಟಿ ಪ್ಯಾಕೇಜ್ ನೀಡಲಾಗುತ್ತಿದೆ.

ಇನ್ನು ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಫೀಲ್ ಮತ್ತು ಶೈನ್ ಎನ್ನುವ ಪ್ರಮುಖ ವೆರಿಯೆಂಟ್‌ಗಳೊಂದಿಗೆ ಖರೀದಿ ಲಭ್ಯವಾಗಲಿರುವ ಹೊಸ ಕಾರಿನಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯವಿದೆ.

ಹಾಗೆಯೇ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ.

ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ.
MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 2,099 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದೆ. ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 25 ಲಕ್ಷದಿಂದ ರೂ. 28 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.


Click it and Unblock the Notifications








