ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಫ್ರೆಂಚ್ ಕಾರು ಉತ್ಪಾದನಾ ಕಂಪನಿ ಸಿಟ್ರನ್ ತನ್ನ ಬಹುನೀರಿಕ್ಷಿತ ಕಾರು ಮಾದರಿಯಾದ ಸಿ5 ಏರ್‌ಕ್ರಾಸ್ ಎಸ್‌ಯುವಿಯ ಉತ್ಪಾದನಾ ಆವೃತ್ತಿಯನ್ನು ಭಾರತದಲ್ಲಿ ಅನಾವರಣಗೊಳಿಸುವ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಮೊದಲ ಹಂತವಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹಲವು ಕಾರು ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟಗೊಂದಿಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಆಟೋ ಉತ್ಪಾದನೆಯಲ್ಲಿ ಸುಮಾರು 100 ವರ್ಷಗಳ ಅನುಭವ ಹೊಂದಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಆಟೋ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಇದೀಗ ಸಿಟ್ರನ್ ಕಂಪನಿಯು ತನ್ನ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ವಿವಿಧ ಮಾದರಿಯ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ಕಾರುಗಳನ್ನು ಮಾರಾಟ ಮಾಡಲಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಸಿಟ್ರನ್ ಕಂಪನಿಯು ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವು ಯೋಜನೆ ಹೊಂದಿದೆ. ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರು ಮಾದರಿಯು ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಹಲವು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ದೇಶಿಯ ಮಾರುಕಟ್ಟೆಯಲ್ಲಿನ ಇತರೆ ಕಾರುಗಳಿಂತಲೂ ವಿಭಿನ್ನವಾದ ಶೈಲಿ ಹೊಂದಿರುವ ಸಿಟ್ರನ್ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯವಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಹಾಗೆಯೇ ಹೊಸ ಕಾರಿನಲ್ಲಿ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಹೊಸ ಕಾರಿನಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಸ್ಪೀಟ್ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.

MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 1,969 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಾಗಲಿದೆ.

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಎಂಜಿನ್ ಮತ್ತು ಪರ್ಫಾಮೆನ್ಸ್

ಸಿ5 ಏರ್‌ಕ್ರಾಸ್ ಕಾರಿನಲ್ಲಿ ಸಿಟ್ರನ್ ಕಂಪನಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಎಂಜಿನ್ ಮಾದರಿಯು 8 ಸ್ಟೀಡ್ ಆಟೋಮ್ಯಾಟಿಕ್ ಸ್ಟ್ಯಾಂಡರ್ಡ್ ಗೇರ್‌ಬಾಕ್ಸ್‌ನೊಂದಿಗೆ 175-ಬಿಎಚ್‌ಪಿ ಮತ್ತು 400 ಎನ್ಎಂ ಉತ್ಪಾದಿಸುವ ಮೂಲಕ ಪ್ರತಿ ಲೀಟರ್‌ಗೆ 18.06 ಕಿಮೀ ಮೈಲೇಜ್ ಹಿಂದಿರುಗಿಸುವುದಾಗಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬಹುನೀರಿಕ್ಷಿತ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ ಸಿಟ್ರನ್

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಾದ ಹ್ಯುಂಡೈ ಟ್ಯುಸಾನ್, ಸ್ಕೋಡಾ ಕರೋಕ್, ಫೋಕ್ಸ್‌ವ್ಯಾಗನ್ ಟಿ ರಾಕ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23 ಲಕ್ಷದಿಂದ ರೂ. 27 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

More from DriveSpark

Article Published On: Monday, February 1, 2021, 20:58 [IST]
English summary
Citroen C5 Aircross SUV Unveiled In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+