ಕೋವಿಡ್ ಕಾರಣಕ್ಕೆ ಹೊಸ ಕಾರುಗಳನ್ನು ಹೋಂ ಡೆಲಿವರಿ ಆರಂಭಿಸಿದ ಸಿಟ್ರನ್
ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ಕಾರಣಕ್ಕಾಗಿ ಗರಿಷ್ಠ ಪ್ರಮಾಣದ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಮಾರಾಟಕ್ಕೆ ಉತ್ತೇಜನ ನೀಡುತ್ತಿವೆ.

ಸೋಂಕು ಭೀತಿಯಿಂದಾಗಿ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೂ ವರವಾಗುತ್ತಿದೆ. ಕೋವಿಡ್‌ನಿಂದಾಗಿ ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ವಿವಿಧ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಸಹ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದ್ದು, ಸಿಟ್ರನ್ ಇಂಡಿಯಾ ಕಂಪನಿಯು ಸಹ ಆನ್‌ಲೈನ್ ಪ್ಲ್ಯಾಟ್ ಬಳಕೆಗೆ ಆದ್ಯತೆ ನೀಡುವುದರ ಜೊತೆಗೆ ಹೋಂ ಡೆಲಿವರಿ ಸೇವೆಗಳನ್ನು ಆರಂಭಿಸಿದೆ.

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ವರ್ಚುವಲ್ ಶೋರೂಂ ಮೂಲಕ ವಾಹನ ಕುರಿತಾದ ಮಾಹಿತಿಯನ್ನು ಅತಿ ಸುಲಭವಾಗಿ ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕವೇ ವಾಹನಗಳಲ್ಲಿನ ತಾಂತ್ರಿಕ ಅಂಶಗಳ ಆಯ್ಕೆಯ ಮೂಲಕ ನಾವು ಖರೀದಿ ಮಾಡುವ ವಾಹನವು ಹೀಗೆ ಇರಬೇಕು ಎಂಬುವುದನ್ನು ನಿರ್ಧರಿಸಬಹುದಾಗಿದೆ.

ಆನ್‌ಲೈನ್ ಮೂಲಕ ಟೆಸ್ಟ್ ಡ್ರೈವ್‌ಗೆ ಬುಕ್ಕಿಂಗ್ ಮಾಡಿದ ನಂತರ ನೀವು ಸೂಚಿಸುವ ಸ್ಥಳಗಳಿಗೆ ಟೆಸ್ಟ್ ಡ್ರೈವ್ ವಾಹನವು ತಲುಪಲಿದ್ದು, ಈ ಸಂದರ್ಭದಲ್ಲೂ ಹಲವು ಸುರಕ್ಷಾ ಮಾರ್ಗಸೂಚಿಯಂತೆ ಸುರಕ್ಷತೆಯನ್ನು ಖಾತ್ರಿ ಪಡಿಸಿದ ನಂತರವೇ ವಾಹನ ಹಸ್ತಾಂತರ ಮಾಡಲಾಗುತ್ತದೆ.

ಟೆಸ್ಟ್ ಡ್ರೈವ್ ವೇಳೆ ನಿಮಗೆ ವಾಹನವು ಇಷ್ಟವಾದಲ್ಲಿ ಮುಂದಿನ ಪ್ರಕ್ರಿಯೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಬಹುದಾಗಿದ್ದು ಖರೀದಿ ಪ್ರಕ್ರಿಯೆಗೆ ಬೇಕಾದ ಎಲ್ಲಾ ಪತ್ರ ವ್ಯವಹಾರಗಳನ್ನು ಸಹ ಅತಿ ಕಡಿಮೆ ಆಯ್ಕೆಗಳೊಂದಿಗೆ ಡಿಜಿಟಲ್ ಮೂಲಕವೇ ಸ್ವಿಕರಿಸಲಾಗುತ್ತದೆ.

ಜೊತೆಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೇ ಗ್ರಾಹಕರಿಗೆ ಹಲವಾರು ಸಾಲ ಸೌಲಭ್ಯಗಳ ಆಯ್ಕೆಗಳನ್ನು ಒದಗಿಸುವ ಆಟೋ ಕಂಪನಿಗಳು ಗ್ರಾಹಕರೊಂದಿಗೆ ನೇರ ಸಂಪರ್ಕ ತಪ್ಪಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಕೊನೆಗೆ ಖರೀದಿ ಪ್ರಕ್ರಿಯೆ ಮುಗಿದ ನಂತರ ಹೊಸ ವಾಹನವನ್ನು ಮನೆ ಬಾಗಿಲಿಗೆ ಸುರಕ್ಷಾ ಕ್ರಮಗಳೊಂದಿಗೆ ವಿತರಣೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಅತಿ ಸುಲಭವಾಗಿರುವುದರಿಂದಲೂ ಗ್ರಾಹಕರು ಕೂಡಾ ಆಟೋ ಕಂಪನಿಗಳ ಹೊಸ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಸಿಟ್ರನ್ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರು ಮಾರಾಟವನ್ನು ಹೆಚ್ಚಿಸುವ ನೀರಿಕ್ಷೆಯಲ್ಲಿದ್ದು, ಸಿಟ್ರನ್ ಕಂಪನಿಯು ಸದ್ಯ ಭಾರತದಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 31.90 ಲಕ್ಷ ಬೆಲೆ ಹೊಂದಿದ್ದು, ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿರುವ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿವೆ.


Click it and Unblock the Notifications








