ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರು ಮಾರಾಟ ಆರಂಭಿಸುವ ಸಿದ್ದತೆಯಲ್ಲಿದ್ದು, ಆರಂಭಿಕವಾಗಿ ದೇಶದ ಪ್ರಮುಖ 10 ನಗರಗಳಲ್ಲಿ ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಸಿಟ್ರನ್ ಕಂಪನಿಯು ಹೊಸ ಶೋರೂಂಗಳ ಜೊತೆಗೆ ಬ್ರಾಂಡ್ ಜನಪ್ರಿಯತೆಗೊಳಿಸಲು ಮೊಬೈಲ್ ಕಾರ್ ಶೋರೂಂಗೆ ಚಾಲನೆ ನೀಡಿದೆ. ಮೊಬೈಲ್ ಕಾರ್ ಶೋರೂಂನಲ್ಲಿ ಸಿಟ್ರನ್ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದು, ಇದು ಕಾರು ಮಾರಾಟ ಹೊಂದಿರುವ ನಗರಗಗಳಲ್ಲಿ ಬ್ರಾಂಡ್ ತಿಳುವಳಿಕೆಯನ್ನು ಪ್ರಸ್ತುತಪಡಿಸಲು ಸಹಕಾರಿಯಾಗಲಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಯುರೋಪ್ ಮಾರುಕಟ್ಟೆಗಳಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸುಮಾರು 100 ವರ್ಷಗಳ ಅನುಭವ ಹೊಂದಿರುವ ಸಿಟ್ರನ್ ಕಂಪನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ಉದ್ಯಮ ಚಟುವಟಿಕೆ ವಿಸ್ತರಿಸುತ್ತಿದ್ದು, ಈಗಾಗಲೇ ಬಿಡುಗಡೆ ಮಾಡಲಿರುವ ಮೊದಲ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಎಸ್‌ಯುವಿ ಕಾರು ಮಾದರಿಯಲ್ಲೇ ವಿಭಿನ್ನವಾದ ಶೈಲಿ ಹೊಂದಿರುವ ಸಿಟ್ರನ್ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯ ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಹೊಸ ಕಾರನ್ನು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಸಿ5 ಏರ್‌ಕ್ರಾಸ್ ಎಸ್‌ಯುವಿಯಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯವಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಹಾಗೆಯೇ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ. ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 1,969 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಾಗಲಿದೆ.

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಎಂಜಿನ್ ಮತ್ತು ಪರ್ಫಾಮೆನ್ಸ್

ಸಿ5 ಏರ್‌ಕ್ರಾಸ್ ಕಾರಿನಲ್ಲಿ ಸಿಟ್ರನ್ ಕಂಪನಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಎಂಜಿನ್ ಮಾದರಿಯು 8 ಸ್ಟೀಡ್ ಆಟೋಮ್ಯಾಟಿಕ್ ಸ್ಟ್ಯಾಂಡರ್ಡ್ ಗೇರ್‌ಬಾಕ್ಸ್‌ನೊಂದಿಗೆ 175-ಬಿಎಚ್‌ಪಿ ಮತ್ತು 400 ಎನ್ಎಂ ಉತ್ಪಾದಿಸುವ ಮೂಲಕ ಪ್ರತಿ ಲೀಟರ್‌ಗೆ 18.06 ಕಿಮೀ ಮೈಲೇಜ್ ಹಿಂದಿರುಗಿಸುವುದಾಗಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಮೊಬೈಲ್ ಶೋರೂಂ ತೆರೆದ ಸಿಟ್ರನ್ ಇಂಡಿಯಾ

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಾದ ಹ್ಯುಂಡೈ ಟ್ಯುಸಾನ್, ಸ್ಕೋಡಾ ಕರೋಕ್, ಫೋಕ್ಸ್‌ವ್ಯಾಗನ್ ಟಿ ರಾಕ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23 ಲಕ್ಷದಿಂದ ರೂ. 27 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

More from DriveSpark

Article Published On: Saturday, February 6, 2021, 11:07 [IST]
English summary
Citroen India Launches Mobile Showrooms. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+