ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಮೇ ಅವಧಿಗಾಗಿ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ಆಫರ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಗ್ರಾಹಕರು ಗರಿಷ್ಠ ರೂ.35 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಕೋವಿಡ್-19 ಪರಿಣಾಮ ಕಾರು ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ನೆಲಕಚ್ಚಿರುವ ಆರ್ಥಿಕ ಸಂಕಷ್ಟದಿಂದಾಗಿ ಗ್ರಾಹಕರು ವಾಹನ ಖರೀದಿಯ ಯೋಜನೆಯನ್ನು ಮುಂದೂಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರು ಖರೀದಿಯನ್ನು ಉತ್ತೇಜಿಸಲು ಮುಂದಾಗಿರುವ ದಟ್ಸನ್ ಕಂಪನಿಯು ತನ್ನ ಕಾರು ಮಾದರಿಗಳ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ನೆಲಕಚ್ಚುತ್ತಿರುವ ಉದ್ಯಮ ವ್ಯವಹಾರ ಸುಧಾರಿಸಲು ವಿವಿಧ ಆಟೋ ಕಂಪನಿಗಳು ಗರಿಷ್ಠ ಆಫರ್‌ಗಳ ಜೊತೆಗೆ ಸರಳ ಸಾಲ-ಸೌಲಭ್ಯ ನೀಡುತ್ತಿದ್ದು, ದಟ್ಸನ್ ಸಹ ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್ ಘೋಷಿಸಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಹೊಸ ಆಫರ್‌ಗಳು ಈ ತಿಂಗಳ ಕೊನೆಯ ತನಕ ಲಭ್ಯವಿದ್ದು, ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಮಾದರಿಗಳ ಮೇಲೆ ಆಫರ್ ನೀಡಲಾಗುತ್ತಿದೆ. ಹೊಸ ಆಫರ್‌ಗಳಲ್ಲಿ ರೆಡಿ-ಗೊ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ರೂ.35 ಸಾವಿರ ಡಿಸ್ಕೌಂಟ್ ಪಡೆದುಕೊಂಡಿದ್ದು, ಇದರಲ್ಲಿ ರೂ. 20 ಸಾವಿರ ಕ್ಯಾಶ್‌ಬ್ಯಾಕ್, ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆಯಬಹುದಾಗಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಜೊತೆಗೆ ದಟ್ಸನ್ ನಿರ್ಮಾಣದ ಯಾವುದೇ ಕಾರು ಖರೀದಿಸುವ ಗ್ರಾಹಕರಿಗೆ ವಿವಿಧ ಆಫರ್ ಜೊತೆಗೆ ಹೆಚ್ಚುವರಿಯಾಗಿ ರೂ. 7 ಸಾವಿರದಷ್ಟು ಕ್ರೆಡಿಟ್ ಕಾರ್ಡ್‌ನ ಸಿವಿಲ್ ಸ್ಕೋರ್ ಆಧರಿಸಿ ಕ್ಯಾಶ್‌ಬ್ಯಾಕ್ ಲಭ್ಯವಿರಲಿದ್ದು, ರೆಡಿ-ಗೊ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.86 ಲಕ್ಷದಿಂದ ರೂ. 4.82 ಲಕ್ಷ ಬೆಲೆ ಹೊಂದಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಗೊ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.02 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.51 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಇನ್ನು ಗೊ ಪ್ಲಸ್ ಕಾರು ಮಾದರಿಯು ದಟ್ಸನ್ ನಿರ್ಮಾಣದ ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಂಪಿವಿ ಕಾರು ಮಾದರಿಯಾಗಿದ್ದು, ಗೊ ಪ್ಲಸ್ ಕಾರು ಮಾದರಿಯ ಮೇಲೂ ರೂ. 37 ಸಾವಿರ ಡಿಸ್ಕೌಂಟ್ ಲಭ್ಯವಿದೆ. ರೂ. 37 ಸಾವಿರ ಮೌಲ್ಯದ ವಿವಿಧ ಆಫರ್‌ಗಳಲ್ಲಿ ರೂ.15 ಸಾವಿರ ಕ್ಯಾಶ್‌ ಡಿಸ್ಕೌಂಟ್, ರೂ. 15 ಸಾವಿರ ಎಕ್ಸ್‌ಚೆಂಜ್ ಬೋನಸ್‌ನೊಂದಿಗೆ ರೂ. 7 ಸಾವಿರ ಹೆಚ್ಚುವರಿಯಾಗಿ ಕ್ರೆಡಿಟ್ ಕಾರ್ಡ್ ಸಿವಿಲ್ ಸ್ಕೋರ್ ಆಧರಿಸಿ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಗೊ ಪ್ಲಸ್ ಕಾರು ಮಾದರಿಯು ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮೇ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಗೊ ಪ್ಲಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.99 ಲಕ್ಷ ಬೆಲೆ ಹೊಂದಿದ್ದು, ಈ ಹಣಕಾಸು ವರ್ಷದ ಕೊನೆಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ದಟ್ಸನ್ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್‌ಗಳನ್ನು ಪಡೆಯಬಹುದಾಗಿದೆ.

More from DriveSpark

Article Published On: Friday, May 7, 2021, 23:41 [IST]
English summary
Datsun Announced Attractive Discounts And Offer In May 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+