ಎಸ್‌ಯುವಿ ಮತ್ತು ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಹತ್ತಾರು ಬಗೆಯ ವಾಹನಗಳು ಖರೀದಿಗೆ ಲಭ್ಯವಿದ್ದರೂ ಕೆಲವೇ ಕೆಲವು ವಾಹನಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳಲು ಹತ್ತಾರು ಕಾರಣಗಳಿವೆ. ಕಾರು ಬೇಡಿಕೆಗೆ ಮರು ಮಾರಾಟದ ಮೌಲ್ಯ ಕೂಡಾ ಪ್ರಮುಖ ಅಂಶವಾಗಿದ್ದು, ಎಸ್‌ಯುವಿ ಮತ್ತು ಸೆಡಾನ್ ವಿಭಾಗದಲ್ಲಿ ಸದ್ಯ ಅತಿ ಹೆಚ್ಚು ಮೌಲ್ಯ ಹೊಂದಿರುವ ಕಾರುಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಹೊಸ ವಾಹನಗಳನ್ನು ಖರೀದಿಸುವಾಗ ಹತ್ತಾರು ಬಾರಿ ವಿಚಾರಿಸಿದ ನಂತರವೇ ಖರೀದಿ ಪ್ರಕ್ರಿಯೆಗೆ ಮುಂದಾಗುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿದ ವಾಹನಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ಯಾಕೆಂದರೆ ಮರು ಮಾರಾಟ ಮೌಲ್ಯವಿಲ್ಲದ ವಾಹನಗಳನ್ನು ಖರೀದಿಯು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳು ಎದುರಾಗಬಹುದಾಗಿದ್ದು, ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ವಿಭಾಗದಲ್ಲಿ ಅತಿ ಹೆಚ್ಚು ಮರು ಮಾರಾಟ ಮೌಲ್ಯದ ಕುರಿತು ಇತ್ತೀಚೆಗೆ ಹೊಸ ಸಮೀಕ್ಷಾ ವರದಿಯೊಂದು ಪ್ರಕಟಗೊಂಡಿದೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಅತ್ಯುತ್ತಮ ಮರು ಮಾರಾಟ ಮೌಲ್ಯವು ವಾಹನ ಮಾದರಿಗಳು ಮತ್ತು ಬ್ರಾಂಡ್ ಮೇಲೆ ನಿರ್ಧಾರವಾಗಲಿದ್ದು, ಜೊತೆಗೆ ವಾಹನ ನಿರ್ವಹಣೆಯು ಆಧಾರದ ಮೇಲೂ ಮರು ಮಾರಾಟದ ಮೌಲ್ಯವು ಏರಿತವಾಗುತ್ತದೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಈ ನಿಟ್ಟಿನಲ್ಲಿ ಉತ್ತಮ ನಿರ್ವಹಣೆಯಲ್ಲಿರುವ ಮತ್ತು ಗ್ರಾಹಕರ ಬಳಕೆಗೆ ಅತ್ಯುತ್ತಮ ಎನ್ನಿಸುವ ಸೆಡಾನ್ ಮತ್ತು ಎಸ್‌ಯುವಿ ವಿಭಾಗದಲ್ಲಿ ಹೊಸ ಸಮೀಕ್ಷಾ ವರದಿ ಪ್ರಕಟಿಸಿರುವ ಡ್ರೂಮ್ ಸಂಸ್ಥೆಯು ಆರೆಂಜ್ ಬುಕ್ ವ್ಯಾಲ್ಯೂ ಹೆಸರಿನಲ್ಲಿ ಮರು ಮಾರಾಟ ಮೌಲ್ಯದ ವರದಿ ಸಿದ್ದಪಡಿಸಿದ್ದು, ಮೊದಲ ಹಂತದಲ್ಲಿ ಎಸ್‌ಯುವಿ ಮತ್ತು ಸೆಡಾನ್ ವಿಭಾಗದ ಕಾರುಗಳನ್ನು ಮರು ಮಾರಾಟ ಮೌಲ್ಯವನ್ನು ಸಿದ್ದಪಡಿಸಿದೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಹೊಸ ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಎಂಜಿ ಹೆಕ್ಟರ್ ಮತ್ತು ಮಾರುತಿ ಸುಜುಕಿಯ ಸಿಯಾಜ್ ಕಾರುಗಳು ಹೆಚ್ಚಿನ ಮಟ್ಟದ ಮರುಮಾರಾಟದ ಕಾರುಗಳಾಗಿದ್ದು, ಎಸ್‌ಯುವಿ ವಿಭಾಗದಲ್ಲಿ ಎಂಜಿ ಹೆಕ್ಟರ್ ಮತ್ತು ಸೆಡಾನ್ ಕಾರುಗಳು ವಿಭಾಗದಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರುಗಳು ಉತ್ತಮ ಮರು ಮಾರಾಟ ಮೌಲ್ಯವನ್ನು ಪಡೆದುಕೊಂಡಿವೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಉತ್ತಮ ಮರು ಮಾರಾಟ ಮೌಲ್ಯವನ್ನು ಹೊಂದಿರಲು ಹೊಸ ಕಾರು ಖರೀದಿಸಿದ ಮೂರು ವರ್ಷಗಳ ನಂತರದಲ್ಲೂ ಕನಿಷ್ಠ ಶೇ.75ರಷ್ಟು ಮೌಲ್ಯವನ್ನು ಉಳಿಸಿಕೊಂಡಲ್ಲಿ ಉತ್ತಮ ಮರು ಮಾರಾಟ ಮೌಲ್ಯ ಎನ್ನಬಹುದಾಗಿದ್ದು, ಎಂಜಿ ಹೆಕ್ಟರ್ ಮತ್ತು ಮಾರುತಿ ಸುಜುಕಿಯ ಸಿಯಾಜ್ ಕಾರುಗಳು ಆಯಾ ಸೆಗ್ಮೆಂಟ್‌ಗಳಲ್ಲಿ ಶೇ.90 ರಷ್ಟು ಮರು ಮಾರಾಟ ಮೌಲ್ಯ ಕಾಯ್ದುಕೊಂಡಿವೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಸಿ ಸೆಗ್ಮೆಂಟ್ ಸೆಡಾನ್ ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ಸಿಯಾಜ್ ನಂತರ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಸ್ಕೋಡಾ ರ‍್ಯಾಪಿಡ್ ಕಾರುಗಳು ಉತ್ತಮ ಮರು ಮಾರಾಟ ಮೌಲ್ಯವನ್ನು ಹೊಂದಿದ್ದು, ಸೆಡಾನ್ ಕಾರುಗಳಲ್ಲೇ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವುದೇ ಸಿಯಾಜ್ ಕಾರಿನ ಮೌಲ್ಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಇನ್ನು ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ಎಂಜಿ ಹೆಕ್ಟರ್ ನಂತರ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಕಾರುಗಳು ಸಹ ಉತ್ತಮ ಮರುಮಾರಾಟ ಮೌಲ್ಯವನ್ನು ಹೊಂದಿದ್ದು, ವಾಹನಗಳ ನಿರ್ವಹಣೆಯು ಮರು ಮಾರಾಟ ಮೌಲ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಎಸ್‌ಯುವಿ ವಿಭಾಗದಲ್ಲಿನ ಎಂಜಿ ಹೆಕ್ಟರ್ ಕಾರು ಮಾದರಿಗೆ ಕಂಪನಿಯು ಬೈ ಬ್ಯಾಕ್ ಆಯ್ಕೆ ನೀಡಿರುವುದು ಕಾರಿನ ಮೌಲ್ಯವನ್ನು ಹೆಚ್ಚಿಸಿದ್ದು, ಹೆಕ್ಟರ್ ಮಾದರಿಯಿಂದ ಹೆಕ್ಟರ್ ಪ್ಲಸ್ ಕಾರಿಗೆ ಅಪ್‌ಗ್ರೆಡ್ ಮಾಡುವಾಗ ಕೆಲವು ಗ್ರಾಹಕರು ಶೇ. 95ರಷ್ಟು ಮರು ಮಾರಾಟ ಮೌಲ್ಯವನ್ನು ಪಡೆದುಕೊಂಡಿದ್ದಾರೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಅತಿ ಹೆಚ್ಚು ರೀ ಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು..!

ಸದ್ಯ ಡ್ರೂಮ್ ಸಂಸ್ಥೆಯು ಎಸ್‌ಯುವಿ ಮತ್ತು ಸೆಡಾನ್ ಕಾರುಗಳು ಮರು ಮಾರಾಟ ಮೌಲ್ಯದ ಪಟ್ಟಿಯನ್ನು ಮಾತ್ರ ಪ್ರಕಟಿಸಿದ್ದು, ಶೀಘ್ರದಲ್ಲೇ ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ಕಾರುಗಳ ಮರು ಮೌಲ್ಯದ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಯಾವುದೇ ಕಾರು ಮಾದರಿಯಾದರೂ ಸರಿ ಮಾಲೀಕರ ನಿರ್ವಹಣೆಯು ಮರು ಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಗಮನಿಸಬೇಕು.

Most Read Articles

Kannada
English summary
Droom's Orange Book Value Survey Reveals Highest Resale Value Cars. Read in Kannada.
Story first published: Tuesday, February 2, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X