ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಹೊಸ ವಾಹನ ಉತ್ಪಾದನೆ ಮತ್ತು ಸುರಕ್ಷಾ ಫೀಚರ್ಸ್‌ಗಳ ಅಳವಡಿಕೆಯ ವಿಧಾನವು ಕಳೆದ ಒಂದು ದಶಕದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಹೊಸ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಹೊಸ ಸುರಕ್ಷಾ ಕ್ರಮಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸುರಕ್ಷಾ ಫೀಚರ್ಸ್‌ಗಳಿಗೆ ಗ್ರಾಹಕರು ಒತ್ತು ನೀಡುತ್ತಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಹೆಸರಿನಲ್ಲಿ ಕಳೆಪೆ ಗುಣಮಟ್ಟದ ವಾಹನಗಳ ಮಾರಾಟ ಮಾಡುತ್ತಿರುವುದು ಅಪಘಾತಗಳಲ್ಲಿ ಹೆಚ್ಚಿನ ಮಟ್ಟದ ಪ್ರಾಣಹಾನಿಗೆ ಪ್ರಮುಖ ಕಾರಣವಾಗಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಕಳೆಪೆ ಗುಣಮಟ್ಟಕ್ಕೆ ಬ್ರೇಕ್ ಹಾಕಿ ಪ್ರಯಾಣಿಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಒದಗಿಸುವ ಕುರಿತಂತೆ ಹೊಸ ನಿಯಮ ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ಏಪ್ರಿಲ್ 1ರಿಂದಲೇ ಹೊಸದಾಗಿ ಉತ್ಪಾದನೆಗೊಳ್ಳುವ ಪ್ರತಿ ಕಾರಿನಲ್ಲೂ ಕನಿಷ್ಠ ಎರಡು ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಕೇಂದ್ರ ಸರ್ಕಾರದ ಸೂಚನೆಗೆ ಆಟೋ ಕಂಪನಿಗಳು ಕೂಡಾ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಹೊಸ ನಿಯಮದಿಂದಾಗಿ ಇನ್ಮುಂದೆ ಎಂಟ್ರಿ ಲೆವಲ್ ಕಾರು ಮಾದರಿಯಲ್ಲೂ ಕಡ್ಡಾಯವಾಗಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಅಳವಡಿಕೆಯನ್ನು ಹೊಂದಿರಲಿವೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಹೊಸ ನಿಯಮದನ್ವಯ ಮುಂಭಾಗದಲ್ಲಿ ಚಾಲಕ ಮತ್ತು ಸಹ ಪ್ರಯಾಣಿಕನಿಗೆ ಏರ್‌ಬ್ಯಾಗ್ ಸುರಕ್ಷತೆಯು ಕಡ್ಡಾಯವಾಗಿ ಅಳವಡಿಕೆಯಾಗಲಿದ್ದು, ಹೊಸ ಸೌಲಭ್ಯದ ನಂತರ ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ತುಸು ಏರಿಕೆಯಾಗುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದ ಬಹುತೇಕ ಕಾರುಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಎಂಟ್ರಿ ಲೆವಲ್ ಕಾರುಗಳ ಸುರಕ್ಷತೆ ಹೆಚ್ಚಿಸುವ ಸಂಬಂಧ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಅಧಿಕ ಗುಣಮಟ್ಟದ ಹೆಚ್ಚು ಸುರಕ್ಷತೆ ಹೊಂದಿರುವ ಕಾರುಗಳ ಖರೀದಿಯು ಮಧ್ಯಮ ವರ್ಗದ ಗ್ರಾಹಕರಿಗೆ ಕಷ್ಟಸಾಧ್ಯ. ಇದೇ ಕಾರಣಕ್ಕೆ ಬಹುತೇಕ ಗ್ರಾಹಕರು ಬಜೆಟ್ ಬೆಲೆಯಲ್ಲಿ ಕಾರು ಖರೀದಿಯ ಕನಸನ್ನು ನನಸಾಗಿಸಿಕೊಳ್ಳುವವರ ಸಂಖ್ಯೆಯು ಹೆಚ್ಚಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಗ್ರಾಹಕರು ಸುರಕ್ಷತೆಯತ್ತ ಗಮನಹರಿಸಿದರೂ ಕೂಡಾ ಬೆಲೆ ಹೆಚ್ಚಳವಾಗುವ ಸಂಬಂಧ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಸುರಕ್ಷತೆಯಿಲ್ಲದ ಕಾರು ಖರೀದಿಯು ಅಪಘಾತಗಳ ಸಂದರ್ಭದಲ್ಲಿ ದೊಡ್ಡಮಟ್ಟದ ಹಾನಿ ಉಂಟು ಮಾಡುತ್ತಿದ್ದು, ಪ್ರಾಣಹಾನಿಯು ಸಾಧ್ಯತೆ ಕೂಡಾ ಹೆಚ್ಚುತ್ತಿರುತ್ತದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಅದೇ ಸುರಕ್ಷಿತ ವಾಹನ ಮಾದರಿಯಾಗಿದ್ದಲ್ಲಿ ಆಗಬಹುದಾದ ಹಾನಿಯ ತೀವ್ರತೆ ಕಡಿಮೆಗೊಳಿಸಬಹುದಾಗಿದ್ದು, ಈ ಹಿನ್ನಲೆಯಲ್ಲಿ ಬಜೆಟ್ ಕಾರುಗಳಲ್ಲೂ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವು ಪ್ರಯಾಣಿಕರಿಗೆ ಉತ್ತಮ ಸುರಕ್ಷತೆ ನೀಡಿಲಿದ್ದು, ಏರ್‌ಬ್ಯಾಗ್ ಗುಣಮಟ್ಟವನ್ನು ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಿಸಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಇನ್ನು ಭಾರತದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರದಿಂದ 1 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಅಪಘಾತದಲ್ಲಿ ಜೀವಕಳೆದುಕೊಳ್ಳುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಹೊಸ ವಾಹನಗಳ ಸಂಖ್ಯೆ ಹೆಚ್ಚಿದಂತೆ ಅಪಘಾತಗಳ ಸಂಖ್ಯೆ ಹೆಚ್ಚಿದರೂ ಕೂಡಾ ವಾಹನಗಳ ಸುರಕ್ಷತೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಅಪಘಾತದಲ್ಲಿ ಪ್ರಾಣಕಳೆದುಕೊಳ್ಳುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.

MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಏಪ್ರಿಲ್ 1ರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯಯಲ್ ಏರ್‌ಬ್ಯಾಗ್ ಸೇಫ್ಟಿ ಫೀಚರ್ಸ್ ಕಡ್ಡಾಯ

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಿಯಮಗಳ ಕಡ್ಡಾಯದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಹೊಸ ವಾಹನಗಳ ಗುಣಮಟ್ಟವನ್ನು ಸಾಕಷ್ಟು ಸುಧಾರಣೆಗೊಳಿಸುವಲ್ಲಿ ಸಹಕಾರಿಯಾಗಿದೆ.

Article Published On: Saturday, March 6, 2021, 12:11 [IST]
English summary
Dual Front Airbags Mandatory On All Cars From 1 April. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+