ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮತ್ತು ಮಾರಾಟವು ತೀವ್ರಗತಿ ಬೆಳವಣಿಗೆ ಸಾಧಿಸುತ್ತಿದ್ದು, ಭಾರತದಲ್ಲೂ ಹಲವು ವಾಹನ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೊಂದಿಗೆ ಹೊಸ ಬದಲಾವಣೆಗೆ ಕಾರಣವಾಗುತ್ತಿವೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಹೊಸ ಎಮಿಷನ್ ನಿಯಮ ಜಾರಿ ಪರಿಣಾಮ ಯುರೋಪ್ ಮತ್ತುಅಮೆರಿಕದಲ್ಲಿ ಡೀಸೆಲ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿರುವುದರ ಜೊತೆಗೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇವಿ ವಾಹನಗಳ ಬಳಕೆ ಹೆಚ್ಚುತ್ತಿದ್ದಂತೆ ವಾಹನ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಅಭಿವೃದ್ದಿಪಡಿಸಿ ಮಾರಾಟ ಮಾಡುತ್ತಿದ್ದು, ಹೊಸ ಇವಿ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್ ಕೂಡಾ ಇದೀಗ ಭಾರತದಲ್ಲಿ ಇವಿ ವಾಹನ ಉತ್ಪಾದನೆಯ ಯೋಜನೆಯಲ್ಲಿವೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಸದ್ಯ ಅಮೆರಿಕ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ತನ್ನದೆ ಆದ ಬೇಡಿಕೆ ಪಡೆದುಕೊಳ್ಳುತ್ತಿರುವ ಫಿಸ್ಕರ್ ಕಂಪನಿಯು ಇದೀಗ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ವ್ಯಾಪ್ತಿ ವಿಸ್ತರಿಸಲು ಸಿದ್ದವಾಗಿದೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಅಮೆರಿಕದಲ್ಲಿ ಸದ್ಯ ಸ್ವತಂತ್ರ ಉದ್ಯಮ ಕಾರ್ಯಾಚರಣೆ ಹೊಂದಿರುವ ಫಿಸ್ಕರ್ ಕಂಪನಿಯು ಹೊಸ ಮಾರುಕಟ್ಟೆಗಳಿಗೆ ಎಲೆಕ್ಟ್ರಿಕ್ ಕಾರು ಮಾರಾಟ ಪರಿಚಯಿಸಲು ಭಾರತದಲ್ಲಿ ಹೊಸ ಇವಿ ವಾಹನ ಉತ್ಪಾದನಾ ಘಟಕ ತೆರೆಯುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

2011ರಿಂದಲೇ ಉದ್ಯಮ ಕಾರ್ಯಾಚರಣೆ ಹೊಂದಿರುವ ಫಿಸ್ಕರ್ ಆಟೋಮೊಟಿವ್ ಕಂಪನಿಯು ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಏಷ್ಯಾ ಮಾರುಕಟ್ಟೆಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳೊಂದಿಗೆ ಅಧಿಕೃತವಾಗಿ ಪ್ರವೇಶಿಸುವ ಸಿದ್ದತೆಯಲ್ಲಿದೆ. ಫಿಸ್ಕರ್ ನಿರ್ಮಾಣದ ಕರ್ಮಾ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಸದ್ಯ ಅತಿ ಹೆಚ್ಚು ಮಾರಾಟಗೊಳ್ಳುವ ಇವಿ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಸ ಯೋಜನೆ ಅಡಿ ಮತ್ತಷ್ಟು ವಿನೂತನ ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಹೊಸ ಯೋಜನೆಗಾಗಿ ವಿಶ್ವದ ಮೂರನೇ ಅತಿ ದೊಡ್ಡ ಎಲೆಕ್ಟ್ರಿಕ್ ಸಾಧನಗಳ ಉತ್ಪಾದನಾ ಕಂಪನಿಯಾಗಿರುವ ಫಾಕ್ಸ್‌ಕಾನ್ ಜೊತೆಗೂಡಿರುವ ಫಿಸ್ಕರ್ ಕಂಪನಿಯು ಏಷ್ಯಾ ರಾಷ್ಟ್ರಗಳಲ್ಲಿ ವಾಹನ ಮಾರಾಟಕ್ಕಾಗಿ ಪ್ರತ್ಯೇಕವಾಗಿ ಭಾರರತದಲ್ಲಿಯೇ ಹೊಸ ವಾಹನ ಉತ್ಪಾದನೆಗೆ ಹೊಸ ಘಟಕ ತೆರೆಯುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಹೊಸ ವಾಹನ ಉತ್ಪಾದನಾ ಘಟಕವನ್ನು ಎಲ್ಲಿ ತೆರೆಯಲಿದೆ ಎನ್ನುವ ಕುರಿತಾಗಿ ಯಾವುದೇ ಮಾಹಿತಿಯಿಲ್ಲವಾದರೂ ಫಿಸ್ಕರ್ ಕಂಪನಿಯು ಹೊಸ ಇವಿ ಉತ್ಪನ್ನಗಳನ್ನು ಸಂಪೂರ್ಣವಾಗಿ ಸಂಪನ್ಮೂಲ ಬಳಕೆ ಮಾಡಲು ಆದ್ಯತೆ ನೀಡುತ್ತಿದ್ದು, 2023ರ ವೇಳೆಗೆ ಹೊಸ ಇವಿ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಫಿಸ್ಕರ್ ಕಂಪನಿಯು ಹೊಸ ವಾಹನಗಳ ಉತ್ಪಾದನೆ ಮತ್ತು ತಂತ್ರಜ್ಞಾನ ಉಸ್ತುವಾರಿಯನ್ನು ಫಾಕ್ಸ್‌ಕಾನ್ ಕಂಪನಿಗೆ ವಹಿಸಿದ್ದು, ವಾಹನಗಳ ಅಭಿವೃದ್ದಿ ಮತ್ತು ಮಾರಾಟವನ್ನು ಫಿಸ್ಕರ್ ಕಂಪನಿಯು ವಹಿಸಿಕೊಳ್ಳಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲಿ ಎಲೆಕ್ಟ್ಕಿಕ್ ವಾಹನ ಉತ್ಪಾದನೆಗಾಗಿ ಫಿಸ್ಕರ್ ಜೊತೆಗೆ ಕೈಜೋಡಿಸಿದ ಫಾಕ್ಸ್‌ಕಾನ್

ಅಮೆರಿಕದಲ್ಲಿ ಸದ್ಯ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.21 ಲಕ್ಷ ಮೇಲ್ಪಟ್ಟ ಇವಿ ಕಾರುಗಳ ಮಾರಾಟವನ್ನು ಹೊಂದಿರುವ ಫಿಸ್ಕರ್ ಕಂಪನಿಯು ಭಾರತೀಯ ಗ್ರಾಹಕರ ಅಭಿರುಚಿಯೆಂತೆ ಆಕರ್ಷಕ ಬೆಲೆಗಳಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

Most Read Articles

Kannada
English summary
Fisker & Foxconn Enter Partnership To Develop Electric Vehicles. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X