ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ಗಳ ಹೊಸ ಟೀಸರ್ ಬಿಡುಗಡೆ

ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ತನ್ನ ಬಹುನೀರಿಕ್ಷಿತ ಗೂರ್ಖಾ(Gurkha) ಆಫ್-ರೋಡ್ ಎಸ್‌ಯುವಿ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಗೂರ್ಖಾ ಹೊಸ ಕಾರಿನ ಪ್ರೀಮಿಯಂ ಫೀಚರ್ಸ್‌ಗಳ ಹೊಸ ಟೀಸರ್ ಹಂಚಿಕೊಂಡಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಹೊಸ ಗೂರ್ಖಾ ಎಸ್‌ಯುವಿ ಮಾದರಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ನವೀಕೃತ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್-ರೋಡ್ ಕೌಶಲ್ಯತೆಗೆ ಪೂರಕವಾದ ಹಲವು ಹೊಸ ತಾಂತ್ರಿಕ ಅಂಶಗಳಿವೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಹೊಸ ಎಮಿಷನ್ ನಿಯಮದಿಂದಾಗಿ ಕಾರಿನ ಎಂಜಿನ್‌ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದೆ.

ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ಗಳ ಹೊಸ ಟೀಸರ್ ಬಿಡುಗಡೆ

ಫೋರ್ಸ್ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲೂ ಗೂರ್ಖಾ ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರೀಯರನ್ನು ಸೆಳೆಯುತ್ತಿದ್ದು, ಎಲ್ಇಡಿ ಟೆಲ್‌ಲೈಟ್, ರಿಪ್ಲೆಕ್ಟಕ್ ಹೊಂದಿರುವ Gurkha ಬ್ಯಾಡ್ಜ್ ಮತ್ತು ಆಫ್ ರೋಡ್ ಎಕ್ಸಾಸ್ಟ್ ಗಮನಸೆಳೆಯುತ್ತಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಈ ಮೂಲಕ ಹೊಸ ಕಾರಿನ ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಗಮನಸೆಳೆಯಲಿದೆ.

ಪರ್ಫಾಮೆನ್ಸ್‌ಗೆ ಪೂರಕವಾದ ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಖದರ್‌ಗೆ ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಹೊಸ ಕಾರನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದ ಫೋರ್ಸ್ ಕಂಪನಿಯು ಹೊಸ ಆವೃತ್ತಿಯನ್ನು ಕಳೆದ ವರ್ಷವೇ ಬಿಡುಗಡೆ ಮಾಡಬೇಕಿತ್ತು. ಆದರೆ ಕೋವಿಡ್ ಪರಿಣಾಮ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಬಹುದಿನಗಳ ನಂತರ ಮರುಚಾಲನೆ ನೀಡಿದ್ದರಿಂದ ಹೊಸ ಕಾರಿನ ಬಿಡುಗಡೆಯಲ್ಲಿ ವಿಳಂಬವಾಗಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಪ್ರಬಲ ಪೈಪೋಟಿಯಾಗಿ ಅಭಿವೃದ್ದಿಗೊಂಡಿದ್ದು, ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

ಹೊಸ ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ ಗಳ ಹೊಸ ಟೀಸರ್ ಬಿಡುಗಡೆ

ಫೋರ್ಸ್ ಗೂರ್ಖಾ ಮಾದರಿಯ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಯು ಹೊಸ ಕಾರಿನ ಬೇಡಿಕೆಯನ್ನು ನಿರ್ಧರಿಸಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಬಿಎಸ್-6 Force Gurkha ಎಸ್‌ಯುವಿಯ ಪ್ರೀಮಿಯಂ ಫೀಚರ್ಸ್‌ಗಳ ಹೊಸ ಟೀಸರ್ ಬಿಡುಗಡೆ

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ ಫೋರ್ಸ್ ಮೋಟಾರ್ಸ್ ಕಂಪನಿಯಯು ಸ್ಟ್ಯಾಂಡರ್ಡ್ ಆಗಿ 3 ಡೋರ್ ಜೊತೆಗೆ 5 ಡೋರ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಆರಂಭಿಕವಾಗಿ 3 ಡೋರ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿರುವ ಕಂಪನಿಯು ಕೆಲ ತಿಂಗಳ ನಂತರ 5 ಡೋರ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

More from DriveSpark

Article Published On: Tuesday, September 7, 2021, 8:45 [IST]
English summary
Force Gurkha Teased Again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+