ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಇಂಡಿಯಾ ಕಂಪನಿಯು ಹೆಚ್ಚು ಮಾರಾಟವಾಗುವ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್ ಅನ್ನು ಸದ್ದಿಲ್ಲದೆ ನವೀಕರಿಸಿದೆ. ಇತ್ತೀಚೆಗೆ, ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್ ಹೊಸ ಅಲಾಯ್ ವ್ಹೀಲ್ ಗಳೊಂದಿಗೆ ಕಾಣಿಸಿಕೊಂಡಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಟೈಟಾನಿಯಂ ಡೀಸೆಲ್ ವೆರಿಯೆಂಟ್ ನಲ್ಲಿ ಈ ಹಿಂದೆ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿತ್ತು. ಟೈಟಾನಿಯಂ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಬೆಲೆಯು ರೂ,9.99 ಲಕ್ಷಗಳಾಗಿದೆ. ಪೋರ್ಡ್ ಕಂಪನಿಯು ಇಕೋಸ್ಪೋರ್ಟ್ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿಯನ್ನು ನೀಡಲು ಹೊಸ ನವೀಕರಣವನ್ನು ಮುಂದುವರೆಸಿದ್ದಾರೆ. ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಬಿಎಸ್ 6 ಪ್ರೇರಿತ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 149 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ನವೀಕರಿಸಿದ 1.5-ಲೀಟರ್ ಡೀಸೆಲ್ ಎಂಜಿನ್ 99 ಬಿಎಚ್‌ಪಿ ಮತ್ತು 215 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿರುವ ಟೈಟಾನಿಯಂ ಪ್ಲಸ್ ಮಾದರಿಯಲ್ಲಿ ಮಾತ್ರವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಕಂಪನಿಯು ಇಕೊಸ್ಪೋರ್ಟ್ ಎಸ್‍ಯುವಿಯ ಎಸ್ಇ ವೆರಿಯೆಂಟ್ ಅನ್ನು ಪರಿಚಯಿಸಲಾಗಿತ್ತು. ಈ ಹೊಸ ವೆರಿಯೆಂಟ್ ಗ್ರಾಹಕರಿಗೆ ಎರಡು ವಿಭಿನ್ನ ಬಾಡಿ ಶೈಲಿಗಳ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡುತ್ತದೆ. ಎಸ್ ಆವೃತ್ತಿಯಲ್ಲಿ ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್ಹ್ ತೆಗೆದುಹಾಕಿ ಸಾಮಾನ್ಯ ಕಾರುಗಳಲ್ಲಿರುವಂತೆ ಬೂಟ್‌ಸ್ಪೆಸ್‌ನಲ್ಲಿ ಸ್ಪೇರ್ ವೀಲ್ಹ್ ಜೋಡಣೆ ಮಾಡಲಾಗಿದೆ,

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಟೈಟಾನಿಯಂ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳು ಹೊಸ ಮಾದರಿಯಲ್ಲಿರಲಿವೆ. ಫೋರ್ಡ್ ಕಂಪನಿಯು ಇಕೋಸ್ಪೋರ್ಟ್ ಎಸ್‍ಯುವಿ ಆ್ಯಂಬಿಯೆಂಟ್, ಟ್ರೆಂಡ್, ಟೈಟಾನಿಯಂ, ಎಸ್ಇ, ಸ್ಪೋರ್ಟ್, ಟೈನಾನಿಯಂ ಪ್ಲಸ್ ಮತ್ತು ಸ್ಪೋರ್ಟ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿವೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಇಕೋಸ್ಪೋರ್ಟ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್‌ ಡ್ಯುಯಲ್ ಟೋನ್ ಥೀಮ್ ಹೊಂದಿದೆ. ಸೀಟುಗಳು, ಡೋರ್ ಪ್ಯಾನೆಲ್‍‍ಗಳು, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಸೆಂಟರ್ ಆರ್ಮ್‌‍‍ರೆಸ್ಟ್ ಹಾಗೂ ಸೆಂಟರ್ ಕನ್ಸೋಲ್‌ಗಳು ಕಂದು ಬಣ್ಣವನ್ನು ಹೊಂದಿವೆ.

ಹೊಸ ಅಪ್‌ಡೇಟ್ ಪಡೆದುಕೊಂಡ ಪೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪೆಟ್ರೋಲ್ ವೆರಿಯೆಂಟ್

ಫೋರ್ಡ್ ಇಕೋಸ್ಪೋರ್ಟ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಎಸ್‍‍ವೈಎನ್‍ಸಿ 3 ಇನ್ಫೋಟೇನ್‍‍ಮೆಂಟ್ ಸಿಸ್ಟಂ, 8 ಇಂಚಿನ ಟಚ್‍‍ಸ್ಕ್ರೀನ್ ಮತ್ತು ಟಾಪ್ ವೆರಿಯೆಂಟ್‍ ಆದ ಇಕೋಸ್ಪೋರ್ಟ್ ಎಸ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಅಳವಡಿಸಲಾಗಿದೆ. ಇನ್ನು ಸುರಕ್ಷತೆಗಾಗಿ ಈ ಎಸ್‍‍‍ಯುವಿಯಲ್ಲಿ 6 ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

More from DriveSpark

Article Published On: Saturday, July 10, 2021, 19:11 [IST]
English summary
Ford EcoSport Titanium Petrol Gets New Alloys. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+