ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಆಧುನಿಕ ಜಗತ್ತಿನಲ್ಲಿ ಬಹುತೇಕ ಗ್ರಾಹಕ ಸೇವೆಗಳು ಅವಶ್ಯಕತೆಗೆ ಅನುಗುಣವಾಗಿ ಬೇಡಿಕೆಯಿರುವ ಸ್ಥಳಗಳಿಗೆ ಪೂರೈಕೆ ಮಾಡುವಂತಹ ಸೌಲಭ್ಯ ಹೊಂದಿದ್ದು, ಇತ್ತೀಚೆಗೆ ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮನೆಬಾಗಿಲಿಗೆ ಇಂಧನ ಪೂರೈಕೆ ಮಾಡುವ ಸೌಲಭ್ಯಗಳನ್ನು ತೆರೆಯುತ್ತಿವೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಇಂಧನ ಪೂರೈಕೆಗೆ ಅಗತ್ಯತೆಗೆ ಅನುಗುಣವಾಗಿ ಹಲವಾರು ಪೆಟ್ರೋಲ್ ಬಂಕ್‌ಗಳು ಲಭ್ಯವಿದ್ದರೂ ಕೂಡಾ ಅನೇಕ ಬಾರಿ ಮಾರ್ಗ ಮಧ್ಯದಲ್ಲಿ ಇಂಧನ ಅಗತ್ಯತೆಯು ವಾಹನ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ಸಂದರ್ಭಗಳು ಎದುರಾಗುತ್ತವೆ. ಇದರಿಂದ ಅಗತ್ಯ ಸ್ಥಳಗಳಿಗೆ ಇಂಧನ ಪೂರೈಕೆ ಮಾಡುವ ಹೊಸ ಕಂಪನಿಗಳಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದ್ದು, ಸ್ಟಾರ್ಟ್ ಅಪ್ ಸಂಸ್ಥೆಯಾದ ಗೊಫ್ಯೂಲ್ ಪ್ರವೈಟ್ ಲಿಮಿಟೆಡ್ ಕೂಡಾ ಇದೀಗ ಹೊಸದಾಗಿ ಇಂಧನ ಪೂರೈಕೆ ಸೇವೆಗಳಿಗೆ ಚಾಲನೆ ನೀಡಿದೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಗ್ರಾಹಕರ ಮನೆ ಬಾಗಿಲಿಗೆ ಹೈ-ಸ್ಪೀಡ್ ಡೀಸೆಲ್ (ಎಚ್‌ಎಸ್‌ಡಿ) ಪೂರೈಸಲಿರುವ ಗೊಫ್ಯೂಲ್ ಪ್ರವೈಟ್ ಲಿಮಿಟೆಡ್ ಕಂಪನಿಯು ವ್ಯಯಕ್ತಿಕ ಬಳಕೆಯ ವಾಹನಗಳ ಜೊತೆಗೆ ಕೈಗಾರಿಕಾ ವಲಯದ ಚಟುವಟಿಕೆಗಳಿಗೂ ಡೀಸೆಲ್ ಪೂರೈಕೆ ಮಾಡುತ್ತಿದೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಸ್ಥಿರ ಗ್ರಾಹಕರಾದ ಕೈಗಾರಿಕಾ ಚಟುವಟಿಕೆಗಳಿಗೆ, ಜನರೇಟರ್ಸ್ ಮತ್ತು ಕೃಷಿ ಅವಂಬಿತ ಕೈಗಾರಿಕಾ ಚಟುವಟಿಕೆಗಳಿಗೆ ನಿಗದಿತ ಸಮಯದಲ್ಲಿ ಇಂಧನ ಪೂರೈಕೆಯು ಸಾಕಷ್ಟು ಅವಶ್ಯತೆಯಿದ್ದು, ಗ್ರಾಹಕರ ಬೇಡಿಕೆಯೆಂತೆ ಗೊಫ್ಯೂಲ್ ಹೈ-ಸ್ಪೀಡ್ ಡೀಸೆಲ್ ಪೂರೈಕೆಗೆ ಚಾಲನೆ ನೀಡಿದೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಗೊಫ್ಯೂಲ್ ಕಂಪನಿಯು ದೇಶದ ಪ್ರಮುಖ ಮೂರು ಇಂಧನ ಪೂರೈಕೆ ಕಂಪನಿಗಳಿಂದ ಮನೆ ಬಾಗಿಲಿಗೆ ಇಂಧನ ಪೂರೈಸಲು ಅಗತ್ಯ ಪರವಾನಿಗೆ ಪಡೆದುಕೊಂಡ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಅವಧಿಯಲ್ಲಿ ಇಂಧನ ಪೂರೈಕೆ ಸೇವೆಗಳನ್ನು ಪೂರೈಕೆ ಮಾಡಲಿದೆ. ಹೊಸ ಸೌಲಭ್ಯವು ಕೈಗಾರಿಕಾ ಕಂಪನಿಗಳು ಮತ್ತು ಜನರೇಟರ್ ನಿರ್ವಹಣೆಗಾಗಿ ಪ್ರತ್ಯೇಕ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿದ್ದು, ದಿನದ 24 ಗಂಟೆ ಮತ್ತು ವಾರದ ಏಳು ದಿನವು ಈ ಸೇವೆ ಲಭ್ಯವಿರುತ್ತದೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಇಂಧನ ಪೂರೈಕೆ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಮತ್ತು ತಂತ್ರಜ್ಞಾನ ಪರಿಹಾರಗಳನ್ನು ಹೊಂದಿರುವ ಗೊಫ್ಯೂಲ್ ಕಂಪನಿಯು ಒಟಿಪಿ ಮೂಲಕವೇ ಇಂಧನ ಪೂರೈಕೆ ಮಾಡಲಿದ್ದು, ಇಲ್ಲಿ ಮೋಸದ ವ್ಯವಹಾರಗಳಿಗೆ ಯಾವುದೇ ಅವಕಾಶವಿಲ್ಲದಂತೆ ಹೊಸ ಸೇವೆಯನ್ನು ತೆರೆಯಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಗೊಫ್ಯೂಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇಂಧನ ಪೂರೈಕೆ ಸೇವೆಗಾಗಿ ಮನವಿ ಮಾಡಿದ ನಂತರ ನಿಗದಿತ ಅವಧಿಯಲ್ಲಿ ಸೇವೆಯು ಲಭ್ಯವಾಗಲಿದ್ದು, ಹಣ ಸಂದಾಯ ಮಾಡಿದ ನಂತರ ಲಭ್ಯವಾಗುವ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ಮೂಲಕ ಮುಂದಿನ ಸೇವಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಐಒಟಿ ಸಂಪರ್ಕದೊಂದಿಗೆ ಐ-ಲಾಕ್ ಕಾರ್ಯವಿಧಾನವು ಗ್ರಾಹಕರ ಬೇಡಿಕೆ ಮೇರೆಗೆ ಒಟಿಪಿ ಆಧಾರಿತ ಪೂರೈಕೆ ಖಾತ್ರಿಗೊಳಿಸುವ ಕಂಪನಿಯು ಇಲ್ಲಿ ಕಂಪನಿಗೆ ಮತ್ತು ಗ್ರಾಹಕರಿಗೆ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ

ಸದ್ಯ ಚೈನ್ನೈ ನಗರದಲ್ಲಿ ಆರಂಭಿಕ ಕಾರ್ಯಚಟುವಟಿಕೆ ಆರಂಭಿಸಿರುವ ಗೊಫ್ಯೂಲ್ ಮುಂದಿನ ಒಂದು ವರ್ಷದಲ್ಲಿ ದೇಶದ ಸುಮಾರು 20 ನಗರಗಳಲ್ಲಿ ಹೊಸ ಸೇವೆ ಆರಂಭಿಸುವ ಗುರಿಹೊಂದಿದ್ದು, ಕೈಗಾರಿಕೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು, ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಬ್ಯಾಂಕ್‌ಗಳು ಮತ್ತು ಗೋದಾಮು ನಿರ್ವಹಣೆ ಮಾಡುವ ಗ್ರಾಹಕರಿಂದ ಆರಂಭಿಕ ಬೇಡಿಕೆಯನ್ನು ನಿರೀಕ್ಷಿಸಲಾಗಿದೆ.

Article Published On: Monday, January 18, 2021, 19:56 [IST]
English summary
GoFuel To Deliver High-Speed Diesel At Your Doorstep. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+