ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ವಿಶ್ವದ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾದ ಆ್ಯಪಲ್ ಹಾಗೂ ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಈಗ ಒಟ್ಟಾಗಿ ಕೆಲಸ ಮಾಡಲು ಮುಂದಾಗಿವೆ. ಮಾಹಿತಿಗಳ ಪ್ರಕಾರ ಹ್ಯುಂಡೈ ಹಾಗೂ ಆ್ಯಪಲ್ ಒಟ್ಟಾಗಿ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಲಿವೆ.

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುವ ಬಗ್ಗೆ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಹಾಗೂ ಮೊಬೈಲ್ ತಯಾರಕ ಕಂಪನಿಯಾದ ಆ್ಯಪಲ್ ನಡುವೆ ಮಾತುಕತೆಯು ಆರಂಭಿಕ ಹಂತದಲ್ಲಿದೆ. ಶೀಘ್ರದಲ್ಲೇ ಈ ಮಾತುಕತೆಯು ಅಂತಿಮ ರೂಪ ಪಡೆಯಲಿದೆ ಎಂದು ಹ್ಯುಂಡೈ ಮೋಟಾರ್ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಎರಡೂ ಕಂಪನಿಗಳ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಾದರೂ, ಈ ಎಲೆಕ್ಟ್ರಿಕ್ ಕಾರ್ ಅನ್ನು ಶೀಘ್ರದಲ್ಲೇ ಅಭಿವೃದ್ದಿಪಡಿಸಲಾಗುವುದು. 2027ರ ವೇಳೆಗೆ ಈ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಮಾಧ್ಯಮ ವರದಿಗಳ ಪ್ರಕಾರ ಆ್ಯಪಲ್ ಹಾಗೂ ಹ್ಯುಂಡೈ ಎರಡೂ ಕಂಪನಿಗಳು ಬ್ಯಾಟರಿ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬ ಮಾಹಿತಿಯೂ ಹೊರಬಂದಿದೆ. ಈ ಮಾಹಿತಿ ಹೊರ ಬಂದ ನಂತರ ಹ್ಯುಂಡೈ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಮಾಹಿತಿಯ ಪ್ರಕಾರ ದಕ್ಷಿಣ ಕೊರಿಯಾದ ಷೇರು ವಿನಿಮಯ ಕೇಂದ್ರದಲ್ಲಿ ಹ್ಯುಂಡೈ ಷೇರುಗಳು 19.42% ಹೆಚ್ಚಾಗಿದೆ. ಹ್ಯುಂಡೈ ವಯಾ, ಹ್ಯುಂಡೈ ಮೊಬಿಸ್ ಹಾಗೂ ಹ್ಯುಂಡೈ ಗ್ಲೋವಿಸ್ ಷೇರುಗಳು ಕ್ರಮವಾಗಿ 21.33%, 18.06% ಹಾಗೂ 0.75%ರಷ್ಟು ಏರಿಕೆಯಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಇದರ ಜೊತೆಗೆ ಹ್ಯುಂಡೈ ಕಂಪನಿಯ ಮತ್ತೊಂದು ಸಹವರ್ತಿ ಕಂಪನಿಯಾದ ಕಿಯಾ ಮೋಟಾರ್ಸ್ ಷೇರುಗಳು ಸಹ 8.41%ನಷ್ಟು ಏರಿಕೆಯಾಗಿವೆ. ಗಮನಿಸಬೇಕಾದ ಸಂಗತಿಯೆಂದರೆ ಆ್ಯಪಲ್ ಕಂಪನಿಯ ಕಾರಿನ ಬಗ್ಗೆ ಸುದ್ದಿ ಹೊರಬರುವುದು ಇದೇ ಮೊದಲ ಸಲವಲ್ಲ.

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಕಳೆದ ವರ್ಷದ ಕೊನೆಯಲ್ಲಿ ಈ ಬಗ್ಗೆ ಮಾಹಿತಿ ಹೊರ ಬಂದಿತ್ತು. ಆ್ಯಪಲ್ ಕಂಪನಿ 2024ರಲ್ಲಿ ಕಾರನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಯೋಜನೆಗೆ ಟೈಟಾನ್ ಎಂಬ ಹೆಸರನ್ನಿಟ್ಟಿದೆ. ಈ ವಿಭಾಗದ ನೇತೃತ್ವವನ್ನು ಮಿಷಿನ್ ಲರ್ನಿಂಗ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಜಾನ್ ಜಿಯಾಂಡ್ರಿಯಾ ವಹಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಈ ವಾಹನಗಳ ಬ್ಯಾಟರಿಗಳು ಹೆಚ್ಚು ಬೆಲೆಯನ್ನು ಹೊಂದಿದ್ದರೂ ಸಹ ಹೆಚ್ಚಿನ ದೂರ ಚಲಿಸುತ್ತವೆ. ಸದ್ಯಕ್ಕೆ ಈ ಕಾರಿನ ಬ್ಯಾಟರಿಯ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ. ಆದರೆ ಆ್ಯಪಲ್ ಹಾಗೂ ಅದರ ಆಪ್ಟಿಮೈಸೇಶನ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಇತ್ತೀಚೆಗೆ 2020ರ ಡಿಸೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಡಿಸೆಂಬರ್ ತಿಂಗಳಿನಲ್ಲಿ ವೆನ್ಯೂ ಕಾರಿನ 12,313 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾಹಿತಿಯ ಪ್ರಕಾರ ಈ ಕಾರು ಮಾರಾಟದಲ್ಲಿ 29%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆ್ಯಪಲ್ ಕಂಪನಿಯ ಜತೆಗೂಡಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಹ್ಯುಂಡೈ

ಹ್ಯುಂಡೈ ಕ್ರೆಟಾ ಕಾರಿನ 10,592 ಯುನಿಟ್‌ಗಳನ್ನು ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. ಈ ಕಾರಿನ ಮಾರಾಟವು ಡಿಸೆಂಬರ್ ತಿಂಗಳಿನಲ್ಲಿ 58%ನಷ್ಟು ಏರಿಕೆಯಾಗಿದೆ. ಕಂಪನಿಯು ಕಳೆದ ವರ್ಷ ಇದೇ ಅವಧಿಯಲ್ಲಿ 6,713 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಬಗ್ಗೆ ಸಿಎನ್‌ಬಿಸಿ ವರದಿ ಮಾಡಿದೆ.

Most Read Articles

Kannada
English summary
Hyundai Apple companies to develop electric car soon. Read in Kannada.
Story first published: Monday, January 11, 2021, 20:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X