ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈ ಕಂಪನಿಯು ತನ್ನ 2022ರ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಅನ್ನು ಜಾಗಾತಿಕ ಮಟ್ಟದಲ್ಲಿ ಅನಾವರಣಗೊಳೀಸಿದೆ. ಈ ಹೊಸ ಪಿಕ್‌ಅಪ್ ಟ್ರಕ್ ಆಕರ್ಷಕ ವಿನ್ಯಾಸ, ಪವರ್ ಫುಲ್ ಎಂಜಿನ್ ಆಯ್ಕೆಗಳು, ಅತ್ಯಾಧುನಿಕ ಫೀಚರ್ಸ್ ಮತ್ತು ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಒಳಗೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈನ ಮಾಂಟ್ಗೊಮೆರಿ, ಅಲಬಾಮಾ ಮೂಲದ ಘಟಕದಲ್ಲಿ ಈ ಹೊಸ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಅನ್ನು ಉತ್ಪಾದಿಸಲಿದೆ. ಈ ಮಾದರಿಯನ್ನು ಮೊದಲಿಗೆ ಅಮೆರಿಕದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಸಾಂತಾ ಕ್ರೂಸ್ ರಗಡ್ ಬಾಡಿ, ಹೆಚ್ಚಿನ ಟ್ಯೂಯಿಂಗ್ ಸಾಮರ್ಥ್ಯಗಳು ಮತ್ತು ಅಡ್ವೆಂಚರ್ ದಾರಿಗಳಲ್ಲಿ ಸುಲಭವಾಗಿ ಚಲಿಸಲು ಉತ್ತಮ ಸಸ್ಪಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಮಾದರಿಯು ಟ್ಯೂಸಾನ್ ಎಸ್‍ಯುವಿಯೊಂದಿಗೆ ಸಾಕಷ್ಟು ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುತ್ತದೆ. ಆದರೆ ಪಿಕ್‌ಅಪ್ ಟ್ರಕ್ ಹೆಚ್ಚಿನ ರಗಡ್ ಅಥವಾ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದರಲ್ಲಿ ಕ್ರೀಸ್‌ಗಳನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಇದರಲ್ಲಿ ಎಲ್ಇಡಿ ಲೈಟ್ ಗಳೊಂದಿಗೆ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್, ಪ್ಯಾರಾಮೀಟಿಕ್ ಆಭರಣ ವಿನ್ಯಾಸದೊಂದಿಗೆ ಡಿಆರ್ಎಲ್, ಕೆಳಗಿನ ವಿಭಾಗದಲ್ಲಿ ಸ್ಕಿಡ್ ಪ್ಲೇಟ್, ಪ್ರೊನೌಸಡ್ ಹುಡ್ ಮತ್ತು ಫೆಂಡರ್‌ಗಳನ್ನು ಹೊಂದಿದೆ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಹಿಂಭಾಗದಲ್ಲಿ ಹೊಸ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ನಲ್ಲಿ 'ಟಿ' ಲೈಟಿಂಗ್ ಸಿಗ್ನೇಚರ್, ಲಾಕ್ ಮಾಡಬಹುದಾದ ಇನ್ ಬೆಡ್ ಸ್ಟೋರೆಂಜ್ ಸ್ಪೇಸ್ ಒಳಗೊಂಡಿದೆ. ಇಂಟಿಗ್ರೇಟೆಡ್ ಕಾರ್ನರ್ ಬಂಪರ್ ಸ್ಟೆಪ್‌ಗಳನ್ನು ಹೊಂದಿವೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

2022ರ ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ಹಿಂದಿನ ಸೀಟ್ ಪ್ರಯಾಣಿಕರಿಗೂ ಎಸ್‍ಯುವಿ ಮಾದರಿಯ ಸೌಕರ್ಯವನ್ನು ನೀಡುತ್ತದೆ. ಇನ್ನು ಈ ಪಿಕ್‌ಅಪ್ ಟ್ರಕ್ ಡ್ಯುಯಲ್-ಕಾಕ್‌ಪಿಟ್ ವಿನ್ಯಾಸವನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಪಿಕ್‌ಅಪ್ ಟ್ರಕ್ ನಲ್ಲಿ 10 ಇಂಚಿನ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಸ್ ಪ್ಲೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ, ಬ್ಲೂಲಿಂಕ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಹಲವಾರು ಬ್ರಷ್ಡ್ ಅಲ್ಯೂಮಿನಿಯಂ ವಿವರಗಳು ಮತ್ತು ಸಾಫ್ಟ್ ಟಚ್ ಭಾಗಗಳು ಅದರ ಪ್ರೀಮಿಯಂ ಭಾವನೆ ಮತ್ತು ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಹ್ಯುಂಡೈ ಪಿಕ್‌ಅಪ್ ಟ್ರಕ್ ನಲ್ಲಿ ತ್ರಿಕೋನ ವಿನ್ಯಾಸವನ್ನು ಹೊಂದಿರುವ 20 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ವ್ಹೀಲ್ ಆರ್ಚರ್ ಗಳನ್ನು ಒಳಗೊಂಡಿವೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಈ ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ನಲ್ಲಿ 2.5ಎಲ್, 4-ಸಿಲಿಂಡರ್ ಇನ್-ಲೈನ್ ಡೈರೆಕ್ಟ್ ಇಂಜೆಕ್ಟ್ ಮತ್ತು 2.5 ಎಲ್ ಡೈರೆಕ್ಟ್ ಇಂಜೆಕ್ಟ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ 2.5ಎಲ್ ಎಂಜಿನ್ 190 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ,2.5 ಎಲ್ ಟರ್ಬೋಚಾರ್ಜ್ಡ್ ಎಂಜಿನ್ 275 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್

ಈ ಎಂಜಿನ್ ಗಳೊಂದಿಗೆ 8-ಸ್ಪೀಡ್ ಹೈಡ್ರಾಲಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಟರ್ಬೊ-ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಸ್ಟೀಯರಿಂಗ್ ಮೌಂಟೆಡ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

Most Read Articles

Kannada
English summary
Hyundai Santa Cruz Pickup With SUVish Design Unveiled. Read In Kannada.
Story first published: Friday, April 16, 2021, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X