ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಇದರ ನಡುವೆ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೆ ವರವಾಗುತ್ತಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಹೌದು, ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಪ್ರಯೋಜಕಾರಿಯಾಗಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ವಿವಿಧ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಸಹ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಯ್ತು.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿಯು ಕೂಡಾ 2017ರಲ್ಲೇ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದರೂ ಇದೇ ಮೊದಲ ಬಾರಿಗೆ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆ ಹೆಚ್ಚಳಗೊಂಡಿದ್ದು, ಕೋವಿಡ್ ನಂತರವೇ ಕಳೆದ ವರ್ಷ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸುಮಾರು 2 ಲಕ್ಷ ವಾಹನಗಳನ್ನು ಮಾರಾಟಗೊಳಿಸಿತ್ತು.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಮಾರುತಿ ಸುಜುಕಿ ನಂತರ ಹ್ಯುಂಡೈ ಕಂಪನಿಯು ಕಿಕ್ ಟು ಬೈ, ಟಾಟಾ ಮೋಟಾರ್ಸ್‌ನಿಂದ ಕ್ಲಿಕ್ ಟು ಡ್ರೈವ್, ಹೋಂಡಾದಿಂದ ಹೋಂಡಾ ಫ್ರಮ್ ಹೋಂ, ಮಹೀಂದ್ರಾದಿಂದ ವೊನ್ ಆನ್‌ಲೈನ್ ಪ್ಲ್ಯಾಟ್ ಸೇರಿದಂತೆ ವಿವಿಧ ಆಟೋ ಕಂಪನಿಗಳು ಗ್ರಾಹಕರಿಗೆ ಅತಿ ಸರಳವಾಗಿ ಮನೆಯಲ್ಲೇ ಕುಳಿತು ವಾಹನ ಖರೀದಿ ಮಾಡುವ ಅವಕಾಶ ಒದಗಿಸುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಹಲವಾರು ಕಾರು ಕಂಪನಿಗಳ ಮಾರಾಟದಲ್ಲೂ ಹೆಚ್ಚಳವಾಗಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ವರ್ಚುವಲ್ ಶೋರೂಂ ಮೂಲಕ ವಾಹನ ಕುರಿತಾದ ಮಾಹಿತಿಯನ್ನು ಅತಿ ಸುಲಭವಾಗಿ ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕವೇ ವಾಹನಗಳಲ್ಲಿನ ತಾಂತ್ರಿಕ ಅಂಶಗಳ ಆಯ್ಕೆಯ ಮೂಲಕ ನಾವು ಖರೀದಿ ಮಾಡುವ ವಾಹನವು ಹೀಗೆ ಇರಬೇಕು ಎಂಬುವುದನ್ನು ನಿರ್ಧರಿಸಬಹುದಾಗಿದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಆನ್‌ಲೈನ್ ಮೂಲಕ ಟೆಸ್ಟ್ ಡ್ರೈವ್‌ಗೆ ಬುಕ್ಕಿಂಗ್ ಮಾಡಿದ ನಂತರ ನೀವು ಸೂಚಿಸುವ ಸ್ಥಳಗಳಿಗೆ ಟೆಸ್ಟ್ ಡ್ರೈವ್ ವಾಹನವು ತಲುಪಲಿದ್ದು, ಈ ಸಂದರ್ಭದಲ್ಲೂ ಹಲವು ಸುರಕ್ಷಾ ಮಾರ್ಗಸೂಚಿಯಂತೆ ನಂಜು ನೀರೋಧಕಗಳನ್ನು ಸಿಂಪರಣೆ ಮಾಡಿ ಸುರಕ್ಷತೆಯನ್ನು ಖಾತ್ರಿ ಪಡಿಸಿದ ನಂತರವೇ ವಾಹನ ಹಸ್ತಾಂತರ ಮಾಡಲಾಗುತ್ತದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಟೆಸ್ಟ್ ಡ್ರೈವ್ ವೇಳೆ ನಿಮಗೆ ವಾಹನವು ಇಷ್ಟವಾದಲ್ಲಿ ಮುಂದಿನ ಪ್ರಕ್ರಿಯೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಬಹುದಾಗಿದ್ದು ಖರೀದಿ ಪ್ರಕ್ರಿಯೆಗೆ ಬೇಕಾದ ಎಲ್ಲಾ ಪತ್ರ ವ್ಯವಹಾರಗಳನ್ನು ಸಹ ಅತಿ ಕಡಿಮೆ ಆಯ್ಕೆಗಳೊಂದಿಗೆ ಡಿಜಿಟಲ್ ಮೂಲಕವೇ ಸ್ವಿಕರಿಸಲಾಗುತ್ತದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಜೊತೆಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೇ ಗ್ರಾಹಕರಿಗೆ ಹಲವಾರು ಸಾಲ ಸೌಲಭ್ಯಗಳ ಆಯ್ಕೆಗಳನ್ನು ಒದಗಿಸುವ ಆಟೋ ಕಂಪನಿಗಳು ಗ್ರಾಹಕರೊಂದಿಗೆ ನೇರ ಸಂಪರ್ಕ ತಪ್ಪಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಕೊನೆಗೆ ಖರೀದಿ ಪ್ರಕ್ರಿಯೆ ಮುಗಿದ ನಂತರ ಹೊಸ ವಾಹನವನ್ನು ಮನೆ ಬಾಗಿಲಿಗೆ ಸುರಕ್ಷಾ ಕ್ರಮಗಳೊಂದಿಗೆ ವಿತರಣೆ ಮಾಡಲಾಗುತ್ತದೆ.

ಕೋವಿಡ್ ಎಫೆಕ್ಟ್: ಹೆಚ್ಚಳವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆ

ಒಟ್ಟಿನಲ್ಲಿ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಅತಿ ಸುಲಭವಾಗಿರುವುದರಿಂದಲೂ ಗ್ರಾಹಕರು ಕೂಡಾ ಆಟೋ ಕಂಪನಿಗಳ ಹೊಸ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

Article Published On: Tuesday, June 1, 2021, 10:58 [IST]
English summary
Auto companies following digital route to increase sales in lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+