14 ದಿನಗಳ ಕಾಲ ಟೈಟ್ ಕರ್ಫ್ಯೂ: ವಾಹನಗಳ ಸಂಚಾರಕ್ಕೆ ಏನೆಲ್ಲಾ ರೂಲ್ಸ್?
ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಕೂಡಾ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಜನ ಸಂಪರ್ಕವನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಒಳಗೊಂಡ ಕಫ್ಯೂ ಜಾರಿಗೆಗೊಳಿಸಿದೆ. ಕಳೆದ ವಾರವಷ್ಟೇ 10 ದಿನಗಳ ಕಾಲ ನೈಟ್ ಕರ್ಫ್ಯೂ ಘೋಷಣೆ ಮಾಡಿದ್ದ ಕರ್ನಾಟಕ ಸರ್ಕಾರವು ಮತ್ತೆ 14 ದಿನಗಳ ಕಾಲ ಕಫ್ಯೂ ಮುಂದುವರೆಸಿದೆ.

ಕರ್ಫ್ಯೂ ವೇಳೆ ಸಾರ್ವಜನಿಕರಿಗೆ ಬೆಳಗಿನ 6ರಿಂದ 10ರ ತನಕ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ನಿಗದಿತ ಅವಧಿ ನಂತರ ಟೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಕರ್ಫ್ಯೂ ಸಂದರ್ಭದಲ್ಲಿ ಸಾಮಾನ್ಯ ವಾಹನಗಳ ಸಂಚಾರವೂ ಕೂಡಾ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಗಳ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ಬಂದ್ ಮಾಡಲಾಗುತ್ತದೆ.

ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳಿಗೆ, ಸರಕುಸಾಗಣೆ ವಾಹನಗಳಿಗೆ, ಆರೋಗ್ಯ ಸೇವೆಯ ವಾಹನಗಳಿಗೆ ಅವಕಾಶ ನೀಡಲಾಗಿದ್ದು, ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಅಗತ್ಯ ಸೇವೆಗಳನ್ನು ವಾಹನಗಳನ್ನು ಹೊರತು ಇನ್ನುಳಿದ ವಾಹನಗಳಿಗೆ ಯಾವುದೇ ರೀತಿಯ ಎಮರ್ಜೆನ್ಸಿ ಪಾಸ್ ವಿತರಿಸುವುದಿಲ್ಲ ಎನ್ನಲಾಗಿದ್ದು, ಉತ್ಪಾದನಾ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಸೂಕ್ತ ದಾಖಲೆಗಳನ್ನು ತೋರಿಸಬೇಕು.

ಹೀಗಾಗಿ ಉತ್ಪಾದನಾ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ನಿಗದಿತ ಅವಧಿಯೊಳಗೆ ಕಚೇರಿ ತಲುಪಬೇಕಿದ್ದು, ಮಧ್ಯಂತರ ಅವಧಿಯಲ್ಲಿ ಹೊರಗೆ ತಿರುಗಾಡುವಂತಿಲ್ಲ.
MOST READ: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಜೊತೆಗೆ ಸಾರ್ವಜನಿಕ ಬಳಕೆಯ ಬಸ್ ಮತ್ತು ಮೆಟ್ರೋ ಸಂಚಾರ ಸಹ ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಖಾಸಗಿ ವಾಹನಗಳ ಓಡಾಟದ ಮೇಲೆ ತೀವ್ರ ನಿಗಾಯಿಡಲಿರುವ ಪೊಲೀಸರು ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ.

ಇದರಿಂದ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಕರ್ಫ್ಯೂ ವೇಳೆ ಅನಗತ್ಯವಾಗಿ ವಾಹನಗಳನ್ನು ಹೊರೆಗೆ ತೆಗೆದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ದಂಡ ತೆತ್ತಬೇಕಾದ ಸಂದರ್ಭ ಎದುರಾಗಬಹುದು.
MOST READ: ರೂ.200 ಟ್ರಾಫಿಕ್ ಉಲ್ಲಂಘನೆ ದಂಡದ ಪ್ರಕರಣವನ್ನು ಗೆಲ್ಲಲು ರೂ.10 ಸಾವಿರ ಖರ್ಚು ಮಾಡಿದ ಬೈಕ್ ಮಾಲೀಕ

ದೇಶಾದ್ಯಂತ ನಿಯಂತ್ರಣ ತಪ್ಪುತ್ತಿರುವ ಕರೋನಾ ವೈರಸ್ ತೀವ್ರತೆಯನ್ನು ತಗ್ಗಿಸಲು ಜನರು ಸರ್ಕಾರದ ಜೊತೆ ಸಹಕಾರ ನೀಡಬೇಕೆಂದಿರುವ ಸಿಎಂ ಯಡಿಯೂರಪ್ಪ ಅವರು ಏಪ್ರಿಲ್ 27ರಿಂದ 14 ದಿನಗಳ ಕಾಲ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.


Click it and Unblock the Notifications








