ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಭಾರತವು ಅತಿ ಹೆಚ್ಚು ಉಷ್ಣತೆ ಇರುವ ದೇಶಗಳಲ್ಲಿ ಒಂದಾಗಿದೆ. ದೇಶದಲ್ಲಿ ಬೇಸಿಗೆಯ ಬಿಸಿ ಆರಂಭವಾಗಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ವಿಧಾನಗಳನ್ನು ಅನುಸುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಮಾಡಿರುವ ವಿಶಿಷ್ಟ ಕ್ರಮವು ಎಲ್ಲರ ಗಮನ ಸೆಳೆಯುತ್ತಿದೆ.

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಅವರು ತಮ್ಮ ಕಾರನ್ನು ಹಸು ಸಗಣಿಯಿಂದ ಲೇಪಿಸಿದ್ದಾರೆ. ತಮ್ಮ ಕಾರ್ ಅನ್ನು ತಂಪಾಗಿಡಲು ಅವರು ಈ ರೀತಿ ಮಾಡಿದ್ದಾರೆ. ಅವರ ಈ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮ ಕಾರ್ ಅನ್ನು ಸಗಣಿಯಿಂದ ಲೇಪಿಸಿರುವವರು ಕರ್ನಾಟಕದವರು ಎಂಬುದು ವಿಶೇಷ.

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಅವರು ತಿರುಮಲೈ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದಾಗ ಅವರ ಕಾರನ್ನು ಹಸುವಿನ ಸಗಣಿಯಿಂದ ಲೇಪಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ್ದ ಇತರ ಭಕ್ತರು ಕಾರನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಹಸುವಿನ ಸಗಣಿಯನ್ನು ಕಾರಿಗೆ ಲೇಪನ ಮಾಡುವುದರಿಂದ ಕಾರನ್ನು ತಂಪಾಗಿಡಬಹುದು. ಬೇಸಿಗೆಯ ಬಿಸಿಲನ್ನು ಎದುರಿಸಲು ಇದು ನೆರವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಹ್ಯುಂಡೈ ಕಾರನ್ನು ಹಸುವಿನ ಸಗಣಿಯಿಂದ ಲೇಪನ ಮಾಡಲಾಗಿದೆ.

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ದೇವಸ್ಥಾನಕ್ಕೆ ಆಗಮಿಸಿದ್ದವರು ಕಾರಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇನ್ನೂ ಕೆಲವರು ಕಾರಿನ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಸಮಯಂ ಪತ್ರಿಕೆ ಈ ಬಗ್ಗೆ ವರದಿ ಪ್ರಕಟಿಸಿದೆ. ಕಾರುಗಳನ್ನು ಸಗಣಿಯಿಂದ ಲೇಪನ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ.ಭಾರತದಲ್ಲಿ ಈ ಹಿಂದೆಯೂ ಹಲವಾರು ಜನರು ತಮ್ಮ ಕಾರನ್ನು ಈ ರೀತಿ ಸಗಣಿಯಿಂದ ಲೇಪನ ಮಾಡಿದ್ದಾರೆ.

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಈ ಹಿಂದೆ ಅಹಮದಾಬಾದ್‌ನ ಮಹಿಳೆಯೊಬ್ಬರು ತಮ್ಮ ಕಾರನ್ನು ಹಸುವಿನ ಸಗಣಿಯಿಂದ ಲೇಪನ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಅವರು ಕಾರಿಗೆ ಸಗಣಿ ಲೇಪಿಸಿರುವುದರಿಂದ ಎಸಿ ಇಲ್ಲದೆ ಕಾರು ತಂಪಾಗಿದೆ ಎಂದು ಹೇಳಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಮಹಾರಾಷ್ಟ್ರದ ವೈದ್ಯರೊಬ್ಬರು ಸಹ ತಮ್ಮ ಕಾರನ್ನು ಹಸುವಿನ ಸಗಣಿಯಿಂದ ಲೇಪಿಸಿದ್ದರು. ಅವರು ತಮ್ಮ ಮಗಳ ಮದುವೆಯ ಕಾರನ್ನು ಹಸುವಿನ ಸಗಣಿಯಿಂದ ಲೇಪಿಸಿದ್ದರು ಎಂಬುದು ಗಮನಾರ್ಹ. ಸಗಣಿಯಿಂದ ಲೇಪಿತವಾಗಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಮದುವೆಗೆ ಬಂದಿದ್ದ ಸಂಬಂಧಿಕರು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು.

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಸಾಮಾನ್ಯವಾಗಿ ಕಾರ್ ಕ್ಯಾಬಿನ್ ಒಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಸಿ ಇಲ್ಲದೆ ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಕಾರುಗಳ ಮಾಲೀಕರು ಹಸುವಿನ ಸಗಣಿಯನ್ನು ಲೇಪನ ಮಾಡುತ್ತಾರೆ.

Most Read Articles

Kannada
English summary
Hyundai car owner coats his car with cow dung for this reason. Read in Kannada.
Story first published: Monday, April 5, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X