ಬಿಡುಗಡೆಗೆ ಸಿದ್ದವಾದ ಹೊಸ ಲೊಗೊ ಪ್ರೇರಿತ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ
ಭಾರತದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಲೊಗೊ ಮಾದರಿಯನ್ನು ಮೊದಲ ಹಂತವಾಗಿ 2021ರ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳಲ್ಲಿ ಜೋಡಣೆ ಮಾಡಲು ನಿರ್ಧರಿಸಿದ್ದು, ಹೊಸ ಲೊಗೊ ಪ್ರೇರಿತ ಸೆಲ್ಟೊಸ್ ಮತ್ತು ಸೊನೆಟ್ ಕಾರು ಮಾದರಿಗಳು ಈಗಾಗಲೇ ಡೀಲರ್ಸ್ ಯಾರ್ಡ್‌ನಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ಕಿಯಾ ಮೋಟಾರ್ಸ್ ಕಾರು ಮಾರಾಟ ಮಳಿಗೆಗಳನ್ನು ಸದ್ಯಕ್ಕೆ ಹೊಸ ಲೊಗೊ ವಿನ್ಯಾಸದೊಂದಿಗೆ ಬ್ರಾಂಡ್ ಬೋರ್ಡ್‌ಗಳನ್ನು ಬದಲಾಯಿಸಲಾಗುತ್ತಿದ್ದು, ಹೊಸ ಲೊಗೊ ಪ್ರೇರಿತ ಸೆಲ್ಟೊಸ್ ಫೇಸ್‌ಲಿಫ್ಟ್ ಮತ್ತು 2021ರ ಸೊನೆಟ್ ಮಾದರಿಯು ಇದೇ ತಿಂಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕಿಯಾ ಮೋಟಾರ್ಸ್ ಕಂಪನಿಯು ಸೊನೆಟ್ ಕಾರು ಮಾದರಿಯಲ್ಲಿ ಸದ್ಯ ವಿವಿಧ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳಿಗೆ ಅನುಗುಣವಾಗಿ 24 ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದೆ.

ಹೊಸ ಆವೃತ್ತಿಗಳಲ್ಲಿ ಹೊಸ ವಿನ್ಯಾಸದ ಲೊಗೊ ಜೊತೆಗೆ ಕೆಲವು ಬೇಡಿಕೆಯಿಲ್ಲದ ವೆರಿಯೆಂಟ್‌ಗಳನ್ನು ವೀಲಿನಗೊಳಿಸಿ ಹೊಸ ವೆರಿಯೆಂಟ್‌ಗಳೊಂದಿಗೆ ಗ್ರಾಹಕರ ಆಯ್ಕೆಯನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ. ಹೆಚ್ಚುವರಿ ವೆರಿಯೆಂಟ್‌ಗಳಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ಗೊಂದಲ ಉಂಟಾಗುತ್ತಿದ್ದು, ಹೊಸ ವೆರಿಯೆಂಟ್‌ಗಳು ಸೊನೆಟ್ ಕಾರಿನ ಬೇಡಿಕೆ ಹೆಚ್ಚಿಸುವ ನೀರಿಕ್ಷೆಯಲ್ಲಿವೆ.

ಹೊಸ ಮಾದರಿಗಳಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸುವ ಸಿದ್ದತೆಯಲ್ಲಿದ್ದು, 2021ರ ಮಾದರಿಯಲ್ಲಿ ಹೆಚ್‌ಟಿಎಕ್ಸ್ ಡಿಸಿಟಿ ಪೆಟ್ರೋಲ್ ಮತ್ತು ಹೆಚ್‌ಟಿಎಕ್ಸ್ ಡೀಸೆಲ್ ಮಾದರಿಯು ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಸೊನೆಟ್ ಕಾರು ಮಾದರಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮ ಫೀಚರ್ಸ್ ಹೊಂದಿದೆ.

ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಮಾದರಿಯ ಪೆಟ್ರೋಲ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.20 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಹೊಸ ಕಾರು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದು, ಶೀಘ್ರದಲ್ಲೇ ಹೊಸ ಕಾರು ವಿನೂತನ ಲೊಗೊ ಸೌಲಭ್ಯದೊಂದಿಗೆ 2021ರ ಮಾದರಿಯೊಂದಿಗೆ ಮಾರಾಟಗೊಳ್ಳುವ ಸಿದ್ದತೆಯಲ್ಲಿದೆ.


Click it and Unblock the Notifications








