ಭಾರತದಲ್ಲಿ ಉರುಸ್ ಎಸ್‍ಯುವಿಯ ಹೊಸ ವೆರಿಯೆಂಟ್ ಬಿಡುಗಡೆಗೊಳಿಸಲಿದೆ ಲ್ಯಾಂಬೊರ್ಗಿನಿ
ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಸೂಪರ್-ಫಾಸ್ಟ್ ಉರುಸ್ ಎಸ್‌ಯುವಿಯ ಮತ್ತೊಂದು ಹೊಸ ವೆರಿಯೆಂಟ್ ಅನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ ಇಂಡಿಯಾ ತನ್ನ ಉರುಸ್ ಸೂಪರ್ ಎಸ್‌ಯುವಿಯನ್ನು ಭಾರತದಲ್ಲಿ 2018ರಲ್ಲಿ ಬಿಡುಗಡೆಗೊಳಿಸಿತು.

ಬಿಡುಗಡೆಯಾದ ಒಂದೇ ವರ್ಷದಲ್ಲಿ ಸೂಪರ್-ಫಾಸ್ಟ್ ಉರುಸ್ ಎಸ್‌ಯುವಿಯ 50 ಯುನಿಟ್ ಗಳು ಮಾರಾಟವಾಗಿತ್ತು. ಲ್ಯಾಂಬೊರ್ಗಿನಿ ಕಂಪನಿಯು ಇತ್ತೀಚೆಗೆ ಉರುಸ್ ಪರ್ಲ್ ಕ್ಯಾಪ್ಸುಲ್ ಅನ್ನು ದೇಶಕ್ಕೆ ತಂದಿತು. ಇದೀಗ ಸೂಪರ್-ಫಾಸ್ಟ್ ಉರುಸ್ ಎಸ್‌ಯುವಿಯ ಗ್ರ್ಯಾಫೈಟ್ ಕ್ಯಾಪ್ಸುಲ್ ಆಗಿರುವ ಮತ್ತೊಂದು ವೆರಿಯೆಂಟ್ ಅನ್ನು ಭಾರತಕ್ಕೆ ತರಲು ಸಜ್ಜಾಗುತ್ತಿದೆ. ಹೊಸ ರೂಪಾಂತರವು ಹೊರಭಾಗದೊಂದಿಗೆ ಒಳಭಾಗದಲ್ಲಿಯು ಹೊಸ ಬಣ್ಣದಿಂದ ಕೂಡಿರುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಲಗೇಜ್ ಇಟ್ಟು ಕೊಳ್ಳಲು ಈ ಎಸ್‌ಯುವಿಯಲ್ಲಿ ಸಾಕಷ್ಟು ಸ್ಪೇಸ್ ಅನ್ನು ನೀಡಲಾಗಿದೆ. ಈ ಎಸ್‌ಯುವಿಯು ತನ್ನ ಉತ್ತಮ ಪರ್ಫಾಮೆನ್ಸ್ ನಿಂದ ಹೆಸರುವಾಸಿಯಾಗಿದೆ

ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಈ ಮಾದರಿಯಲ್ಲಿ ಹಲವಾರು ಪೀಚರ್ಸ್ ಗಳನ್ನು ಹೊಂದಿವೆ. ಉರುಸ್ ಎಸ್‌ಯುವಿಯಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 641 ಬಿಹೆಚ್‌ಪಿ ಪವರ್ ಮತ್ತು 850 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿಯಾದ ಎಂಜಿನ್ ಆಗಿದೆ.

ಸೂಪರ್-ಫಾಸ್ಟ್ ಉರುಸ್ ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಹಲವು ಚಿತ್ರ ನಟರು ಹಾಗೂ ಉದ್ಯಮಿಗಳು ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯನ್ನು ಹೊಂದಿದ್ದಾರೆ.

ಈ ಎಸ್‌ಯುವಿಯಯಲ್ಲಿ ಆಫ್-ರೋಡ್ ಗಾಗಿ ವಿಭಿನ್ನ ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂನ ಮೇಲೆ ನಿರ್ಮಾಣವಾಗಿದೆ. ಈ ಪ್ಲಾಟ್‌ಫಾರಂನಲ್ಲಿಯೇ ಆಡಿ ಕ್ಯೂ7 ಹಾಗೂ ಪೋರ್ಷೆ ಕೇನ್ ಎಸ್‍ಯುವಿಗಳನ್ನು ಕೂಡ ನಿರ್ಮಿಸಲಾಗಿದೆ.

ಈ ಉರುಸ್ ಎಸ್‌ಯುವಿಯು ಸ್ಲಿಮ್ ಆದ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಉರುಸ್ ಮಾದರಿಯ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನಿಂದ ಸ್ಫೂರ್ತಿ ಪಡೆದಿದೆ.

ಲ್ಯಾಂಬೊರ್ಗಿನಿ ಉರುಸ್ 21 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್ ಎಸ್‍ಯುವಿಯ ಹೊಸ ವೆರಿಯೆಂಟ್ ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.


Click it and Unblock the Notifications








