ಫೆಬ್ರವರಿ ತಿಂಗಳಿನಲ್ಲಿ ಕುಸಿದ ಐಷಾರಾಮಿ ಕಾರುಗಳ ಮಾರಾಟ
ಫೆಬ್ರವರಿ ತಿಂಗಳಿನಲ್ಲಿ ಲಕ್ಷುರಿ ಕಾರುಗಳ ಸೆಗ್'ಮೆಂಟಿನಲ್ಲಿ 1,779 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಸೆಗ್'ಮೆಂಟಿನ ಮಾರಾಟವು ಕಳೆದ ತಿಂಗಳು 27%ನಷ್ಟು ಕುಸಿದಿದೆ.

ಈ ಸೆಗ್'ಮೆಂಟಿನ ಮಾರಾಟ ಪಟ್ಟಿಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಪ್ರಥಮ ಸ್ಥಾನದಲ್ಲಿದ್ದರೆ, ಬಿಎಂಡಬ್ಲ್ಯು ಕಂಪನಿಯು ಎರಡನೇ ಸ್ಥಾನದಲ್ಲಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ ತಿಂಗಳು 649 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

2020ರ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು 911 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 28%ನಷ್ಟು ಕುಸಿದಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

36%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿಯು ಕಳೆದ ತಿಂಗಳು 0.7%ನಷ್ಟು ಪಾಲನ್ನು ಕಳೆದುಕೊಂಡಿದೆ. ಬಿಎಂಡಬ್ಲ್ಯು ಕಂಪನಿಯು ಮರ್ಸಿಡಿಸ್ ಬೆಂಝ್ ಕಂಪನಿಗಿಂತ 23 ಯುನಿಟ್ ವಾಹನಗಳನ್ನು ಕಡಿಮೆ ಮಾರಾಟ ಮಾಡಿದೆ.

ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 626 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಬಿಎಂಡಬ್ಲ್ಯು ಕಂಪನಿಯು 2020ರ ಫೆಬ್ರವರಿಯಲ್ಲಿ 755 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಂಪನಿಯ ಮಾರಾಟವು ಕಳೆದ ತಿಂಗಳು 17%ನಷ್ಟು ಕುಸಿದಿದೆ. ಬಿಎಂಡಬ್ಲ್ಯು ಕಂಪನಿಯು 35%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ ಮಾರುಕಟ್ಟೆ ಪಾಲು 4%ನಷ್ಟು ಹೆಚ್ಚಾಗಿದೆ.

ಬಿಎಂಡಬ್ಲ್ಯು ಕಂಪನಿಯು ಈ ವರ್ಷ ಹೊಸ ಹಾಗೂ ಫೇಸ್‌ಲಿಫ್ಟ್ ಕಾರು ಸೇರಿದಂತೆ ಒಟ್ಟು 25 ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಹೊಸ ವಾಹನಗಳ ಬಿಡುಗಡೆಯತ್ತ ಗಮನ ಹರಿಸುತ್ತಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜೆಎಲ್‌ಆರ್ ಕಂಪನಿಯು ಕಳೆದ ತಿಂಗಳು 188 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯ ಮಾರಾಟವು ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ 36%ನಷ್ಟು ಕುಸಿದಿದೆ.

ಕಂಪನಿಯು 10%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ ಮಾರುಕಟ್ಟೆ ಪಾಲು 1%ನಷ್ಟು ಕುಸಿತ ದಾಖಲಿಸಿದೆ. ಆಡಿ ಕಂಪನಿಯು ಕಳೆದ ತಿಂಗಳು 187 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಡಿ ಕಂಪನಿಯು 2020ರ ಫೆಬ್ರವರಿ ತಿಂಗಳಿನಲ್ಲಿ 314 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40%ನಷ್ಟು ಕುಸಿದಿದೆ. ಕಂಪನಿಯು 10%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಅದರ ಮಾರುಕಟ್ಟೆ ಪಾಲು 2%ನಷ್ಟು ಹೆಚ್ಚಾಗಿದೆ.

ಇದರ ನಂತರದ ಸ್ಥಾನಗಳಲ್ಲಿರುವ ವೋಲ್ವೋ ಕಂಪನಿಯ 88 ಯುನಿಟ್ ಹಾಗೂ ಪೋರ್ಷೆ ಕಂಪನಿಯ 33 ಯುನಿಟ್'ಗಳು ಮಾರಾಟವಾಗಿವೆ. ವೋಲ್ವೋ ಕಂಪನಿಯ ಮಾರಾಟವು 28%ನಷ್ಟು ಕುಸಿದಿದ್ದರೆ, ಪೋರ್ಷೆ ಕಂಪನಿಯ ಮಾರಾಟವು 17%ನಷ್ಟು ಕುಸಿದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೋರ್ಷೆ ಕಂಪನಿಯ ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಕೊನೆಯ ಸ್ಥಾನದಲ್ಲಿರುವ ರೋಲ್ಸ್ ರಾಯ್ಸ್ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ ಕೇವಲ 1 ಯುನಿಟ್ ಕಾರ್ ಅನ್ನು ಮಾರಾಟ ಮಾಡಿದೆ.

ಕರೋನಾ ವೈರಸ್ ಕಾರಣದಿಂದಾಗಿ ಐಷಾರಾಮಿ ಕಾರುಗಳ ಮಾರಾಟವು ಕುಸಿದಿದೆ. ಮುಂಬರುವ ದಿನಗಳಲ್ಲಿ ಈ ಕಾರುಗಳ ಮಾರಾಟವು ಉತ್ತಮವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮೂಲ: ಆಟೋಪಂಡಿಟ್ಜ್


Click it and Unblock the Notifications