ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು 2021ರ ಜನವರಿ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಹೀಂದ್ರಾ ಕಂಪನಿಯು ಕಳೆದ ವರ್ಷದ ಜನವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಮುನ್ನಡೆ ಕಾಯ್ದುಕೊಂಡಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

2020ರ ಜನವರಿ ಅವಧಿಯಲ್ಲಿ 19,555 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು 2021ರ ಜನವರಿಯಲ್ಲಿ 20,498 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ.5 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ತಿಂಗಳ ವಾಹನ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸಿರುವ ಮಹೀಂದ್ರಾ ಕಂಪನಿಯು ಪ್ರಮುಖ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಸದ್ಯ ಟಾಟಾ ಮೋಟಾರ್ಸ್ ಮತ್ತು ಕಿಯಾ ಮೋಟಾರ್ಸ್‌ನೊಂದಿಗೆ ಉತ್ತಮ ಪೈಪೋಟಿ ಹೊಂದಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 30 ಸಾವಿರದಿಂದ 40 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ಕಾರುಗಳ ಮಾರಾಟ ಪಟ್ಟಿಯಲ್ಲಿ ಸದ್ಯ ಬೊಲೆರೊ ಕಾರು ಮಾದರಿಯು ಅಗ್ರಸ್ಥಾನದಲ್ಲಿದ್ದು, ಬೊಲೆರೊ ಕಾರು ಮಾದರಿಯು 2021ರ ಜನವರಿ ಅವಧಿಯಲ್ಲಿ ಒಟ್ಟು 7,567 ಯುನಿಟ್ ಮಾರಾಟದೊಂದಿಗೆ ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಗ್ರಾಹಕರ ಬೇಡಿಕೆಯೆಂತೆ ಸದ್ಯ ಮಹೀಂದ್ರಾ ಕಂಪನಿಯು ಬೊಲೆರೊ, ಎಕ್ಸ್‌ಯುವಿ300, ಕೆಯುವಿ100 ನೆಕ್ಸ್ಟ್, ಸ್ಕಾರ್ಪಿಯೋ, ಎಕ್ಸ್‌ಯುವಿ 500, ಮರಾಜೋ, ಥಾರ್, ಅಲ್ಟುರಾಸ್ ಜಿ4 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಬೊಲೆರೊ ಕಾರು ಮಾದರಿಯು ಬಿಡುಗಡೆಗೊಂಡು ಹಲವು ವರ್ಷಗಳ ನಂತರವು ಗ್ರಾಹಕರ ಬೇಡಿಕೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಬೊಲೆರೊ ನಂತರದ ಸ್ಥಾನದಲ್ಲಿ ಎಕ್ಸ್‌ಯುವಿ300, ಥಾರ್ ಎಸ್‌ಯುವಿ, ಎಕ್ಸ್‌ಯುವಿ500, ಸ್ಕಾರ್ಪಿಯೋ, ಕೆಯುವಿ100 ನೆಕ್ಸ್ಟ್, ಮರಾಜೋ ಮತ್ತು ಅಲ್ಟಾರಾಸ್ ಜಿ4 ಸ್ಥಾನಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ನ್ಯೂ ಜನರೇಷನ್ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯು ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ದೇಶಾದ್ಯಂತ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ಸರ್ವಿಸ್ ಕ್ಯಾಂಪ್‌ನಲ್ಲಿ ಗ್ರಾಹಕರಿಗೆ ಹಲವಾರು ಆಫರ್‌‌ಗಳನ್ನು ಘೋಷಿಸಿರುವ ಮಹೀಂದ್ರಾ ಕಂಪನಿಯು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ದೇಶಾದ್ಯಂತ ಹರಡಿಕೊಂಡಿರುವ ಮಹೀಂದ್ರಾ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಲಾಗಿದ್ದು, ಈ ತಿಂಗಳು 8ರಿಂದ 18ರ ತನಕ ಸರ್ವಿಸ್ ಕ್ಯಾಂಪ್ ಸೇವೆಗಳು ಲಭ್ಯವಿರಲಿವೆ. ಮಹೀಂದ್ರಾ ಕಾರು ಮಾಲೀಕರು ವಾರಂಟಿ ಅವಧಿಯ ಸೇವೆಗಳನ್ನು ಹೊರತುಪಡಿಸಿ ಹೆಚ್ಚುವರಿ ಸೇವೆಗಳಿಗಾಗಿ ಸರ್ವಿಸ್ ಕ್ಯಾಂಪ್‌ನಲ್ಲಿ ಭಾಗಿಯಾಗಬಹುದಾಗಿದ್ದು, ಒಟ್ಟು 75 ಉಚಿತ ಚೆಕ್ ಪಾಯಿಂಟ್‌ಗಳೊಂದಿಗೆ ಒಂದೇ ಸೂರಿನಡಿ ನುರಿತ ಉದ್ಯೋಗಿಗಳ ತಂಡದೊಂದಿಗೆ ಹೊಸ ಸರ್ವಿಸ್ ಆರಂಭಿಸಿದೆ.

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಉಚಿತ ಚೆಕ್ ಪಾಯಿಂಟ್‌ಗಳೊಂದಿಗೆ ತಾಂತ್ರಿಕ ಅಂಶಗಳ ಸೇವೆಯು ಅವಶ್ಯವಿದ್ದಲ್ಲಿ ಶೇ. 5ರ ವಿನಾಯ್ತಿಯೊಂದಿಗೆ ಬಿಡಿಭಾಗಗಳು ಲಭ್ಯವಾಗಲಿದ್ದರೆ ಶೇ.10ರಷ್ಟು ಲೆಬರ್ ಚಾರ್ಚ್‌ಗಳ ಮೇಲೆ ವಿನಾಯ್ತಿ ಮತ್ತು ಶೇ.25ರಷ್ಟು ಮ್ಯಾಕ್ಸಿ ಕೇರ್ ಸೇವೆಗಳ ಮೇಲೆ ವಿನಾಯ್ತಿ ದೊರೆಯಲಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಜನವರಿ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಸರ್ವಿಸ್ ಕ್ಯಾಂಪ್‌ನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ವಾರಂಟಿ ಸೇವೆಗಳನ್ನು ಹೊರತುಪಡಿಸಿ ಸಾಮಾನ್ಯ ಸೇವೆಗಳು ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ಸುಮಾರು 600 ಸರ್ವಿಸ್ ಸೆಂಟರ್‌ಗಳಲ್ಲಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಲಾಗಿದೆ.

Most Read Articles

Kannada
English summary
Mahindra Model Wise Sales Report 2021 January. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X