ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಭಾರತದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ನೌಕರರು ಮತ್ತು ಏರ್‌ಪೋರ್ಟ್ ಪ್ರಯಾಣಿಕರಿಗೆ ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಮೇರು ಕ್ಯಾಬ್ ಕಂಪನಿಯಲ್ಲಿ ಹೊಸ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಪೂರ್ಣ ಪ್ರಮಾಣದ ಷೇರು ಖರೀದಿಸಿದೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಮೇರು ಕ್ಯಾಬ್ ಕಂಪನಿಯಲ್ಲಿ ಈ ಹಿಂದೆ ಶೇ.43.20 ಷೇರು ಪ್ರಮಾಣವನ್ನು ಹೊಂದಿದ್ದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಇದೀಗ ಶೇ. 100ರಷ್ಟು ಷೇರು ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಕ್ಯಾಬ್ ಸೇವೆಗಳಲ್ಲಿ ಮತ್ತಷ್ಟು ಹೊಸ ಬದಲಾವಣೆ ತರುವ ನೀರಿಕ್ಷೆಯಲ್ಲಿದೆ. 2006ರಲ್ಲಿ ಮೊದಲ ಬಾರಿಗೆ ಕಾರ್ಯನಿರ್ವಹಣೆ ಆರಂಭಿಸಿದ್ದ ಮೇರು ಟ್ರಾವೆಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಏರ್‌ಪೋರ್ಟ್ ಟ್ಸಾಕ್ಸಿ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆಯನ್ನು ಹೊಂದಿದೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ದೇಶಾದ್ಯಂತ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ನೌಕರರಿಗೆ ಮತ್ತು ಏರ್‌ಪೋರ್ಟ್ ಪ್ರಯಾಣಿಕರಿಗೆ ಬೇಡಿಕೆ ಆಧಾರದ ಸಾರಿಗೆ ಸೇವೆಗಳನ್ನು ಒದಗಿಸುತ್ತಿರುವ ಮೇರು ಕ್ಯಾಬ್ ಕಂಪನಿಯು ವಿ-ಲಿಂಕ್ ಆಟೋಮೋಟಿವ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿ-ಲಿಂಕ್ ಫ್ಲೀಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಕಾರ್ಯನಿರ್ವಹಣೆ ಕೈಗೊಳ್ಳುತ್ತಿದೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಸದ್ಯ ಲಾಭದಾಯಕ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಮೇರು ಕಂಪನಿಯಲ್ಲಿ ಮಹೀಂದ್ರಾ ಕಂಪನಿಯು ಕಳೆದ ಕೆಲ ವರ್ಷಗಳಿಂದ ಹಂತ-ಹಂತವಾಗಿ ಹೂಡಿಕೆ ಮಾಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಷೇರು ಪ್ರಮಾಣವು ಶೇ.43.20 ರಿಂದ ಶೇ.100 ಕ್ಕೆ ಹೆಚ್ಚಳ ಮಾಡಿದೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಈ ಹಿಂದೆ ಶೇ.43.20 ರಷ್ಟು ಷೇರು ಪ್ರಮಾಣವನ್ನು ಶೇ.100ಕ್ಕೆ ಏರಿಕೆ ಮಾಡಲು ಶ್ರೀ ನೀರಜ್ ಗುಪ್ತಾ ಮತ್ತು ಶ್ರೀಮತಿ ಫರ್ಹತ್ ಗುಪ್ತಾ ಅವರಿಂದ ರೂ. 97.65 ಕೋಟಿ ಮೌಲ್ಯದ ಶೇ.56.69 ರಷ್ಟು ಷೇರು ಖರೀದಿಸಿದ್ದು, ಹೊಸ ಹೂಡಿಕೆಯೊಂದಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಮೇರು ಟ್ರಾವೆಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪೂರ್ಣ ಪ್ರಮಾಣದ ಮಾಲೀಕತ್ವವನ್ನು ತನ್ನದಾಗಿಸಿಕೊಂಡಿದೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಹೊಸ ಹೂಡಿಕೆಯೊಂದಿಗೆ ಮೇರು ಮಾಲೀಕತ್ವ ತನ್ನದಾಸಿಕೊಂಡಿರುವ ಮಹೀಂದ್ರಾ ಕಂಪನಿಯು0 ಉದ್ಯಮ ವ್ಯವಹಾರಗಳನ್ನು ನಿರ್ವಹಿಸಲು ಕ್ಯಾಬ್ ಸೇವಾ ವಲಯದಲ್ಲಿ ಅನುಭವಿಯಾಗಿರುವ ಪ್ರವೀಣ್ ಶಾ ಅವರನ್ನು ಮೇರು ಮತ್ತು ಅದರ ಅಂಗಸಂಸ್ಥೆಗಳ ಸಿಇಒ ಆಗಿ ನೇಮಕಗೊಳಿಸಲಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಪ್ರವೀಣ್ ಶಾ ಅವರು 2017ರ ತನಕ ಮಹೀಂದ್ರಾ ಅಂಡ್ ಮಹೀಂದ್ರಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಮತ್ತೆ ಹೊಸ ಉದ್ಯಮ ವ್ಯವಹಾರಕ್ಕಾಗಿ ಮಹೀಂದ್ರಾ ತಂಡಕ್ಕೆ ಮರಳಿ ಬರುವ ಮೂಲಕ ಹೊಸ ಸವಾಲು ಎದುರಿಸಲು ಸಿದ್ದರಾಗಿದ್ದಾರೆ.

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಮೇ.1ರಿಂದ ಪ್ರವೀಣ್ ಷಾ ಅವರು ಮೇರು ಮತ್ತು ಅದರ ಅಂಗಸಂಸ್ಥೆಗಳ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದು, 2021ರ ಜೂನ್ 30 ರವರೆಗೆ ಮೇರು ಸಹಭಾಗಿತ್ವ ಕಂಪನಿಗಳಾದ ವಿ-ಲಿಂಕ್ ಆಟೋಮೋಟಿವ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿ-ಲಿಂಕ್ ಫ್ಲೀಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ ಕೇವಲ ಉದ್ಯೋಗಿಯಾಗಿ ಕಾರ್ಯನಿರ್ವಹಿಸಲಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಹೂಡಿಕೆಯೊಂದಿಗೆ ಮೇರು ಕ್ಯಾಬ್ ಕಂಪನಿಯ ಶೇ.100 ರಷ್ಟು ಷೇರು ಖರೀದಿಸಿದ ಮಹೀಂದ್ರಾ

ಮೇರು ಕಂಪನಿಯ ಸ್ವಾಧೀನದ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಡಾ. ಅನೀಶ್ ಶಾ ಅವರು ಭಾರತದಲ್ಲಿನ ಶೇರ್ ಮೊಬಿಲಿಟಿಯಲ್ಲಿ ಹೊಸ ಕ್ರಾಂತಿ ಮಾಡಿರುವ ಮೇರು ಕಂಪನಿಯಲ್ಲಿ ಹೊಸ ನೀರಿಕ್ಷೆಯೊಂದಿಗೆ ಹೂಡಿಕೆ ಮಾಡುತ್ತಿದ್ದು, ವ್ಯವಹಾರ ತಂತ್ರಗಳನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.

Most Read Articles

Kannada
English summary
M&M to Enhance its Ownership to 100 per cent in Meru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X