ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಕರೋನಾ ವೈರಸ್ ಎರಡನೇ ಅಲೆ ಯುವಕರು, ವಯಸ್ಕರು ಸೇರಿದಂತೆ ಎಲ್ಲಾ ವಯಸ್ಸಿನವರಿಗೆ ಹರಡುತ್ತಿದೆ. ಈ ಮಹಾಮಾರಿ ವೈರಸ್'ಗೆ ಬಲಿಯಾಗುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಈ ಪರಿಸ್ಥಿತಿಯಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ರೈತರಿಗಾಗಿ ಹೊಸ ಯೋಜನೆಯನ್ನು ಘೋಷಿಸಿದೆ. ಕಳೆದ ಭಾನುವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಹೊಸ ಟ್ರಾಕ್ಟರುಗಳನ್ನು ಖರೀದಿಸುವ ಗ್ರಾಹಕರಿಗೆ ಉಚಿತ ವಿಮಾ ಯೋಜನೆಯನ್ನು ನೀಡುವುದಾಗಿ ಕಂಪನಿ ತಿಳಿಸಿದೆ.

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಕರೋನಾ ವೈರಸ್ ಮೊದಲ ಅಲೆಯ ವೇಳೆ ಕಂಪನಿಯು ಈ ರೀತಿಯ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಿತ್ತು. ಈಗ ಮತ್ತೊಮ್ಮೆ ಈ ಯೋಜನೆಯನ್ನು ಪರಿಚಯಿಸಿದೆ. ಕರೋನಾ ವೈರಸ್'ನಿಂದ ಪರಿಸ್ಥಿತಿ ಹದಗೆಡುತ್ತಿರುವ ಸಂದರ್ಭದಲ್ಲಿ ಈ ಯೋಜನೆಯನ್ನು ಮತ್ತೆ ಪರಿಚಯಿಸಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಕಂಪನಿಯು ಈ ವಿಮಾ ಯೋಜನೆಯನ್ನು ಎಂ ಪ್ರೊಟೆಕ್ಟ್ ಕೋವಿಡ್ ಪ್ಲಾನ್ ಹೆಸರಿನಲ್ಲಿ ಆರಂಭಿಸಿದೆ. ಈ ಯೋಜನೆಯ ಮೂಲಕ ರೈತರು ಸುಮಾರು ರೂ.1 ಲಕ್ಷಗಳವರೆಗೆ ಪ್ರಯೋಜನವನ್ನು ಪಡೆಯಬಹುದು.

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ರೈತರು ಈ ಯೋಜನೆಯ ಮೂಲಕ ಈ ಸಂಕಷ್ಟದ ಸಂದರ್ಭದಲ್ಲಿ ಪ್ರಯೋಜನ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದೆ. ಈ ಯೋಜನೆ ರೈತರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ನೆರವು ನೀಡಲಿದೆ ಎಂಬುದು ಗಮನಾರ್ಹ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಯಾವುದೇ ಕಾರಣದಿಂದ ಸಾಲಗಾರನು ಸತ್ತರೆ ಆತನ ವಾಹನದ ಮೇಲಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯು ಇದನ್ನು ಮಹೀಂದ್ರಾ ಕ್ರೆಡಿಟ್ ಸುರಕ್ಷಾ ಯೋಜನೆಯ ಮೂಲಕ ಮಾಡಲು ನಿರ್ಧರಿಸಿದೆ.

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಕರೋನಾ ವೈರಸ್ ವೇಗವಾಗಿ ಹರಡುತ್ತಿರುವುದು ವಾಹನ ಉತ್ಪಾದನೆ ಹಾಗೂ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಆಟೋ ಮೊಬೈಲ್ ಕಂಪನಿಗಳು ನೆರವಿನ ಹಸ್ತ ಚಾಚುತ್ತಿವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ರೈತರಿಗಾಗಿ ವಿಶಿಷ್ಟ ಯೋಜನೆ ಘೋಷಿಸಿದ ಮಹೀಂದ್ರಾ

ಆಟೋ ಮೊಬೈಲ್ ಕಂಪನಿಗಳು ಧನಸಹಾಯ, ವೈದ್ಯಕೀಯ ಸಲಕರಣೆ ಒದಗಿಸುವುದು ಹಾಗೂ ಆಕ್ಸಿಜನ್ ಉತ್ಪಾದನೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಿವೆ. ಇದರ ಜೊತೆಗೆ ಹಲವು ವಾಹನ ತಯಾರಕ ಕಂಪನಿಗಳು ಸರ್ಕಾರದ ಜೊತೆ ಕೈ ಜೋಡಿಸಿವೆ.

Most Read Articles

Kannada
English summary
Mahindra announces special plan for farmers. Read in Kannada.
Story first published: Tuesday, May 18, 2021, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X