ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಕಾರು ಮಾದರಿಗಳಿಗಾಗಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಹೊಂದಿದ್ದು, ಇದೀಗ ಬೊಲೆರೊ ಕಾರು ಮಾದರಿಗೂ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಹಲವಾರು ಹೊಸ ಮಾದರಿಯ ಸ್ಪೋರ್ಟಿ ಬಿಡಿಭಾಗಗಳು ಕಾರಿನ ವಿನ್ಯಾಸವನ್ನು ಹೆಚ್ಚಿಸಲಿದ್ದು, ಆಸಕ್ತ ಗ್ರಾಹಕರು ಹೆಚ್ಚುವರಿ ದರ ಪಾವತಿಸಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮಹೀಂದ್ರಾ ಕಂಪನಿಯು ಥಾರ್, ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಮಾದರಿಗಳಿಗೆ ಈಗಾಗಲೇ ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಹಲವಾರು ವಿಭಿನ್ನವಾದ ವಿನ್ಯಾಸಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಬೊಲೆರೊ ಕಾರು ಮಾದರಿಗೂ ಆಕರ್ಷಕ ದರಗಳಲ್ಲಿ ಹೊಸ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕಾರ್ ಕೇರ್, ಮ್ಯಾಟಿಂಗ್, ಸ್ಕಫ್ ಪ್ಲೇಟ್, ಕ್ರೋಮ್ ಕಿಟ್, ರೈನ್ ವಿಷರ್, ರಿಯರ್ ಗಾರ್ಡ್, ಫ್ರಂಟ್ ಆಡ್ ಕಿಟ್, ಸ್ಪಾಯ್ಲರ್, ಎಸ್‌ಕೆಐ ರಾಕ್, ಅಲಾಯ್ ವೀಲ್ಹ್ ಮತ್ತು ಲೈವ್ ಟ್ರ್ಯಾಕಿಂಗ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಇದರಲ್ಲಿ ಕಾರ್ ಕೇರ್ ಪ್ಯಾಕೇಜ್ ಕಾರಿನ ತಾಂತ್ರಿಕ ಅಂಶಗಳ ನಿರ್ವಹಣೆಯನ್ನು ಖಾತ್ರಿಪಡಿಸಲು ನೆರವಾಗಲಿದ್ದರೆ ಮ್ಯಾಟಿಂಗ್ ಸೌಲಭ್ಯವು ಪ್ರಯಾಣವನ್ನು ಮತ್ತಷ್ಟು ಅರಾಮದಾಯಕಗೊಳಿಸುತ್ತದೆ. ಸ್ಕಫ್ ಪ್ಲೇಟ್ ಸೌಲಭ್ಯವು ಕಾರಿನ ಮುಂಭಾಗಕ್ಕೆ ಮತ್ತಷ್ಟು ಬಲಿಷ್ಠತೆ ಒದಗಿಸಲಿದ್ದು,ಕ್ರೋಮ್ ಕಿಟ್‌ನಿಂದ ಕಾರಿನ ಹೊಸ ವಿನ್ಯಾಸದ ಅನುಭವ ನೀಡುತ್ತದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ರೈನ್ ವಿಷರ್ ಸೌಲಭ್ಯವು ಡೋರ್‌ಗಳ ಮೇಲ್ಬಾಗದಲ್ಲಿ ಜೋಡಣೆಯಾಗಿರಲಿದ್ದು, ಇದು ಮಳೆ ನೀರನ್ನು ಡೋರ್‌ಗಳಲ್ಲಿ ಸೋರುವಿಕೆಯ ಸಮಸ್ಯೆಯನ್ನು ತಡೆಯುವುದರ ಜೊತೆಗೆ ಸೈಡ್ ಪ್ರೊಫೈಲ್‌ಗೆ ಮತ್ತಷ್ಟು ಮೆರಗು ನೀಡುತ್ತದೆ. ಇನ್ನುಳಿದ ರಿಯರ್ ಗಾರ್ಡ, ಫ್ರಂಟ್ ಆಡ್ ಕಿಟ್, ಲೈಲ್ ಟ್ರ್ಯಾಕಿಂಗ್ ಸೌಲಭ್ಯಗಳು ಕಾರಿನ ಸುರಕ್ಷತೆಗಾಗಿ ಸಹಕಾರಿಯಾಗಿದ್ದು, ಎಸ್‌ಕೆಐ ರಾಕ್, ಅಲಾಯ್ ವೀಲ್ಹ್ ಮತ್ತು ಸ್ಪಾಯ್ಲರ್ ಸೌಲಭ್ಯವು ಕಾರಿನ ಬಲಿಷ್ಠ ವಿನ್ಯಾಸಕ್ಕೆ ಪೂರಕವಾಗಿರಲಿವೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಆಕ್ಸೆಸರಿಸ್‌ಗಳು ಬಿಡಿಭಾಗಗಳಿಗೆ ಅನುಗುಣವಾಗಿ ರೂ. 1,500ರಿಂದ ರೂ. 36 ಸಾವಿರ ತನಕ ಬೆಲೆ ಹೊಂದಿದ್ದು, ಆಕ್ಸೆಸರಿಸ್‌ ಪ್ಯಾಕೇಜ್‌ನಲ್ಲಿರುವ ಪೂರ್ಣ ಪ್ರಮಾಣದ ಬಿಡಿಭಾಗಗಳನ್ನು ಜೋಡಣೆ ಮಾಡಲು ಸುಮಾರು ರೂ. 1,04,800 ದರ ನಿಗದಿ ಮಾಡಿದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಮ್ಯಾನುವಲ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬೊಲೆರೊ ಕಾರು ಮಾದರಿಯ ಆರಂಭಿಕವಾಗಿ ರೂ.8.17 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.14 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಶೀಘ್ರದಲ್ಲೇ ಹೊಸ ತಲೆಮಾರಿನ ಆವೃತ್ತಿಯು ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ನ್ಯೂ ಜನರೇಷನ್ ಕಾರು ಮಾದರಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ವಿವಿಧ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿರುವ ನ್ಯೂ ಜನರೇಷನ್ ಬೊಲೆರೊ ಕಾರು ಮಾದರಿಯು ಪ್ರಸ್ತುತ ಮಾದರಿಗಿಂತ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ನ್ಯೂ ಜನರೇಷನ್ ಮಾದರಿಯಲ್ಲಿ ಪೆಟ್ರೋಲ್ ಮಾದರಿಯು ಉತ್ತಮ ಆಯ್ಕೆಯಾಗಲಿದ್ದು, ಹೊಸ ತಲೆಮಾರಿನ ಆವೃತ್ತಿಯು ಈ ವರ್ಷಾಂತ್ಯಕ್ಕೆ ಇಲ್ಲವೇ 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

Image Courtesy: CarDirector

Most Read Articles

Kannada
English summary
Mahindra Bolero accessories package launched details. Read in Kannada.
Story first published: Monday, April 19, 2021, 8:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X