ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಹೊಸ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು ಸ್ಥಾಪಿಸಲು ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra)ಕಂಪನಿಯು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯು ತನ್ನ ಸೆರೋ ಉಪ-ವಿಭಾಗದ ಅಡಿಯಲ್ಲಿ ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿದೆ. ಇದರ ಅಡಿಯಲ್ಲಿ, ಕಂಪನಿಯು ಮುಂಬೈ, ನಾಸಿಕ್, ಔರಂಗಾಬಾದ್ ಹಾಗೂ ನಾಗ್ಪುರದಲ್ಲಿ ಸ್ಕ್ರ್ಯಾಪಿಂಗ್ ಸೌಲಭ್ಯಗಳನ್ನು ತೆರೆಯಲಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ಘಟಕಗಳು ವರ್ಷಕ್ಕೆ 40,000 ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ದೇಶದಲ್ಲಿ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ವಹಿವಾಟು ಹೆಚ್ಚುತ್ತಿದೆ. ಈ ವಹಿವಾಟಿಗೆ ದೊಡ್ಡ ವಾಹನ ತಯಾರಕ ಕಂಪನಿಗಳು ಪ್ರವೇಶಿಸುತ್ತಿವೆ. ಮುಂಬೈನಲ್ಲಿ ಇತ್ತೀಚಿಗೆ ಹೆದ್ದಾರಿ, ಸಾರಿಗೆ ಹಾಗೂ ಲಾಜಿಸ್ಟಿಕ್ಸ್‌ನಲ್ಲಿ ಹೂಡಿಕೆ ಮಾಡುವ ಕುರಿತು ಮಹೀಂದ್ರಾ ಕಂಪನಿಯು ಇತ್ತೀಚೆಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ಸೌಲಭ್ಯಗಳಲ್ಲಿ ದ್ವಿಚಕ್ರ ವಾಹನ, ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳನ್ನು ಮರುಬಳಕೆ ಮಾಡಲಾಗುವುದು. ಈ ಸೌಲಭ್ಯಗಳಲ್ಲಿ ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ಎಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತದೆ. ಸೆರೋ, ಸದ್ಯಕ್ಕೆ ಪುಣೆಯಲ್ಲಿ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು ನಡೆಸುತ್ತಿದೆ. ಸೆರೋ, ಮಹೀಂದ್ರಾ ಎಕ್ಸೆಲ್ಲೊ ಹಾಗೂ ಎಂಎಸ್‌ಟಿ‌ಸಿ ನಡುವಿನ ಜಂಟಿ ಉದ್ಯಮವಾಗಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ಕಂಪನಿಯು ಬೆಂಗಳೂರು, ಚೆನ್ನೈ, ಪುಣೆ, ಗ್ರೇಟರ್ ನೋಯ್ಡಾ, ಅಹಮದಾಬಾದ್, ಮುಂಬೈ, ಇಂದೋರ್, ಹೈದರಾಬಾದ್, ಜೈಪುರ, ಚಂಡೀಗಢ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರು 1800-267-6000 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದು ಅಥವಾ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಇತ್ತೀಚೆಗೆ ಟಾಟಾ ಮೋಟಾರ್ಸ್ ಕಂಪನಿಯು ಸಹ ಸ್ಕ್ರ್ಯಾಪಿಂಗ್ ಸೌಲಭ್ಯಕ್ಕಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿತ್ತು. ಕೇಂದ್ರ ಸರ್ಕಾರವು ಕೆಲವು ತಿಂಗಳ ಹಿಂದಷ್ಟೇ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೊಳಿಸಿತ್ತು. ಈ ನೀತಿಯಲ್ಲಿ ವಾಹನಗಳ ಮರುಬಳಕೆ ಕೆಲಸಗಳನ್ನು ಮಾಡಲಾಗುವುದು. ಈ ನೀತಿಯಿಂದ ಆಟೋಮೊಬೈಲ್ ಉದ್ಯಮದಲ್ಲಿ ರೂ. 10 ಸಾವಿರ ಕೋಟಿ ಹೂಡಿಕೆಯಾಗುವ ನಿರೀಕ್ಷೆಗಳಿವೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಸ್ಕ್ರ್ಯಾಪ್ ವ್ಯವಹಾರದೊಂದಿಗೆ ಸಂಬಂಧ ಹೊಂದಿರುವ ಸಣ್ಣ ಉದ್ಯಮಿಗಳು ಈ ನೀತಿಯಿಂದ ದೊಡ್ಡ ಲಾಭವನ್ನು ಪಡೆಯುತ್ತಾರೆ. ಜೊತೆಗೆ ಆಟೋ ಉದ್ಯಮವೂ ಸಹ ದೊಡ್ಡ ಲಾಭವನ್ನು ಪಡೆಯಲಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರ ಪ್ರಕಾರ, ಸ್ಕ್ರಾಪಿಂಗ್ ನೀತಿಯು ಹೊಸ ವಾಹನಗಳನ್ನು 40% ವರೆಗೆ ಅಗ್ಗವಾಗಿಸುತ್ತದೆ. ಹಳೆಯ ವಾಹನಗಳಿಂದ 99% ಲೋಹವನ್ನು ಸ್ಕ್ರ್ಯಾಪ್‌ನಿಂದ ಮರುಪಡೆಯಬಹುದು ಎಂಬುದು ಇದರ ಹಿಂದಿರುವ ಕಾರಣ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಇದರಿಂದ ವಾಹನಗಳ ಬೆಲೆ ಕಡಿಮೆಯಾಗುತ್ತದೆ. ಇದೇ ವೇಳೆ ತಾಮ್ರ, ಎಲೆಕ್ಟ್ರಿಕ್ ಸಾಮಗ್ರಿ ಹಾಗೂ ಲಿಥಿಯಂನಂತಹ ಕಚ್ಚಾ ವಸ್ತುಗಳು ಸಹ ಈ ಸ್ಕ್ರ್ಯಾಪಿಂಗ್‌ನಿಂದ ಲಭ್ಯವಾಗುತ್ತವೆ. ಇದರಿಂದ ಅಂತಿಮ ಉತ್ಪನ್ನವೂ ಅಗ್ಗವಾಗುತ್ತದೆ. ವಾಹನ ಸ್ಕ್ರ್ಯಾಪಿಂಗ್ ನೀತಿಯಿಂದ ಆಟೋಮೊಬೈಲ್ ಕಂಪನಿಗಳು, ಅದರ ಸಂಬಂಧಿತ ಉದ್ಯಮಿಗಳು, ವಾಹನ ಗ್ರಾಹಕರು ಹಾಗೂ ಪರಿಸರಕ್ಕೆ ಉಪಯೋಗವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ನೀತಿಯೊಂದಿಗೆ, ಭಾರತದಲ್ಲಿ ತಯಾರಾಗುವ ಹೊಸ ವಾಹನಗಳ ವೆಚ್ಚವು 40% ವರೆಗೆ ಕಡಿಮೆಯಾಗುತ್ತದೆ, ಜೊತೆಗೆ ಇಂಧನ ಹಾಗೂ ನಿರ್ವಹಣಾ ವೆಚ್ಚದಲ್ಲಿಉಳಿತಾಯವಾಗುತ್ತದೆ. ಸ್ಕ್ರಾಪಿಂಗ್ ಉದ್ಯಮಕ್ಕೆ ಉತ್ತೇಜನ ನೀಡಿದರೆ ಉದ್ಯೋಗವೂ ಸೃಷ್ಟಿಯಾಗುತ್ತದೆ. ಜೊತೆಗೆ ಉದ್ಯೋಗಗಳು ಹೆಚ್ಚುತ್ತವೆ. ಇದಲ್ಲದೇ ಹೊಸ ವಾಹನಗಳ ಮಾರಾಟದಿಂದ ಸರ್ಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ರೂ. 30 ರಿಂದ 40 ಸಾವಿರ ಕೋಟಿ ಆದಾಯ ಬರಲಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಇದರ ಜೊತೆಗೆ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಗ್ರಾಹಕರು, ಹೊಸ ಕಾರು ಖರೀದಿಯ ಮೇಲೆ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಹಲವು ಸಣ್ಣ ಕಂಪನಿಗಳ ಜೊತೆಗೆ ದೊಡ್ಡ ಕಂಪನಿಗಳೂ ಈ ಕ್ಷೇತ್ರಕ್ಕೆ ಕಾಲಿಡುತ್ತಿವೆ. ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ 2021ರ ನವೆಂಬರ್ ತಿಂಗಳ ಉತ್ಪಾದನಾ ಅಂಕಿ ಅಂಶಗಳು ಬಿಡುಗಡೆಯಾಗಿವೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ಅಂಕಿ ಅಂಶಗಳ ಪ್ರಕಾರ, ಕಂಪನಿಯು ಕಳೆದ ತಿಂಗಳು 18,261 ಯುನಿಟ್ ವಾಹನಗಳನ್ನು ಉತ್ಪಾದಿಸಿದೆ. 2021ರ ಅಕ್ಟೋಬರ್ ತಿಂಗಳಿನಲ್ಲಿ 19,286 ಯುನಿಟ್‌ಗಳನ್ನು ಉತ್ಪಾದಿಸಲಾಗಿತ್ತು. ನವೆಂಬರ್ ತಿಂಗಳ ಉತ್ಪಾದನಾ ಪ್ರಮಾಣವು ಅಕ್ಟೋಬರ್ ತಿಂಗಳಿಗಿಂತ 5.3% ನಷ್ಟು ಕಡಿಮೆಯಾಗಿದೆ. ಎಸ್‌ಯುವಿ ಉತ್ಪಾದನೆ ಹೆಚ್ಚಿದ್ದರೂ, ಚಿಪ್ ಕೊರತೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಮಹೀಂದ್ರಾ ಕಂಪನಿಯು 32,000 ಯುನಿಟ್‌ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಪ್ರಪಂಚದಾದ್ಯಂತ ಚಿಪ್‌ಗಳಿಗೆ ಕೊರತೆ ಎದುರಾಗಿದೆ. ಚಿಪ್ ಕೊರತೆಯು ಎಲ್ಲಾ ಕಂಪನಿಗಳಂತೆ ಮಹೀಂದ್ರಾ ಕಂಪನಿಯ ಉತ್ಪಾದನೆ ಮೇಲೂ ಸಹ ಪರಿಣಾಮ ಬೀರಿದೆ. ಇದರಿಂದಾಗಿ ಕಂಪನಿಯ ಉತ್ಪಾದನೆಯು ನಿರಂತರವಾಗಿ ಕಡಿಮೆಯಾಗುತ್ತಿದೆ. ತ್ರೈಮಾಸಿಕ ಹಾಗೂ ಎಲ್‌ಸಿವಿ ವಿಭಾಗದಲ್ಲಿ ನವೆಂಬರ್‌ ತಿಂಗಳ ಉತ್ಪಾದನೆಯು 89.6% ನಷ್ಟು ಕುಸಿತ ದಾಖಲಿಸಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಈ ವಿಭಾಗದ ಉತ್ಪಾದನೆಯು ಕಳೆದ ವರ್ಷ ನವೆಂಬರ್‌ನಲ್ಲಿ 4,046 ಯುನಿಟ್‌ಗಳಾಗಿದ್ದರೆ, ಕಳೆದ ತಿಂಗಳ ಉತ್ಪಾದನೆ 420 ಯುನಿಟ್‌ಗಳಾಗಿತ್ತು. ಕಂಪನಿಯ ಉತ್ಪಾದನೆ ಎಲ್‌ಸಿವಿ ವಿಭಾಗದಲ್ಲಿ 21.4%ನಷ್ಟು ಇಳಿಕೆಯಾಗಿದೆ.

ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈಗ ತನ್ನ ಉಪ ವಿಭಾಗದ ಕಂಪನಿಯ ಸಹಭಾಗಿತ್ವದಲ್ಲಿ ವಾಹನಗಳ ಸ್ಕ್ರ್ಯಾಪ್ ಉದ್ಯಮಕ್ಕೆ ಕಾಲಿಟ್ಟಿದೆ. ಈ ಮೂಲಕ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ವಾಹನಗಳ ತಯಾರಿಕೆಯಿಂದ ಹಿಡಿದು ಸ್ಕ್ರ್ಯಾಪ್ ಮಾಡುವವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಲು ಮುಂದಾಗುತ್ತಿವೆ.

Most Read Articles

Kannada
English summary
Mahindra company to setup vehicles scrapping facilities in maharashtra details
Story first published: Tuesday, December 21, 2021, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X