Just In
- 8 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 10 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 12 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 22 hrs ago
ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ಎಬಿಡಿಗೂ ಮುನ್ನ ಮ್ಯಾಕ್ಸ್ವೆಲ್ ಬ್ಯಾಟಿಂಗ್ಗೆ ಇಳಿದಿದ್ದೇಕೆ ಎಂದು ಬಹಿರಂಗಪಡಿಸಿದ ಕೊಹ್ಲಿ
- News
ಕರ್ನಾಟಕಕ್ಕೆ ಆಘಾತ: 24 ಗಂಟೆಗಳಲ್ಲಿ 10250 ಮಂದಿಗೆ ಕೊರೊನಾವೈರಸ್!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಕಾರು ಮಾರಾಟ: ಅಗ್ರಸ್ಥಾನದಲ್ಲಿ ಬೊಲೆರೊ ಮತ್ತು ಸ್ಕಾರ್ಪಿಯೋ..
2021ರ ಮಾರ್ಚ್ ಅವಧಿಯಲ್ಲಿನ ಮಹೀಂದ್ರಾ ಕಂಪನಿಯ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆಯಾಗಿದ್ದು, ಮಹೀಂದ್ರಾ ಕಂಪನಿಯು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಭಾರೀ ಮುನ್ನಡೆ ಕಾಯ್ದುಕೊಂಡಿದೆ.

ಕಳೆದ ತಿಂಗಳು ಮಾರ್ಚ್ ಅವಧಿಯಲ್ಲಿ 16,700 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ.427 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು 2020ರ ಮಾರ್ಚ್ ಅವಧಿಯಲ್ಲಿ 3,171 ಯನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿ ಕರೋನಾ ವೈರಸ್ ಪರಿಣಾಮ ವಿಧಿಸಲಾಗಿದ್ದ ಲಾಕ್‌ಡೌನ್ ಪರಿಣಾಮ ಅತಿ ಕಡಿಮೆ ವಾಹನ ಮಾರಾಟ ಮಾಡಿದ್ದ ಆಟೋ ಕಂಪನಿಗಳು ಇದೀಗ ಹೆಚ್ಚಿನ ಮಟ್ಟದ ಮಾರಾಟ ಬೆಳವಣಿಗೆ ಸಾಧಿಸಿವೆ.

ಪ್ರತಿ ತಿಂಗಳ ವಾಹನ ಮಾರಾಟದಲ್ಲಿ ಮಹೀಂದ್ರಾ ಕಂಪನಿಯು ಫೆಬ್ರವರಿ ತಿಂಗಳಿಗಿಂತಲೂ ಮಾರ್ಚ್ ಅವಧಿಯಲ್ಲಿ ಶೇ. 9ರಷ್ಟು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಮಹೀಂದ್ರಾ ಕಾರುಗಳ ಮಾರಾಟ ಪಟ್ಟಿಯಲ್ಲಿ ಸದ್ಯ ಬೊಲೆರೊ ಹಾಗೂ ಸ್ಕಾರ್ಪಿಯೋ ಕಾರು ಮಾದರಿಗಳು ಅಗ್ರಸ್ಥಾನದಲ್ಲಿದ್ದು, ತದನಂತರದ ಸ್ಥಾನದಲ್ಲಿ ಎಕ್ಸ್‌ಯುವಿ300, ಥಾರ್, ಎಕ್ಸ್‌ಯುವಿ 500, ಮರಾಜೋ, ಅಲ್ಟುರಾಸ್ ಜಿ4 ಮತ್ತು ಕೆಯುವಿ100 ನೆಕ್ಸ್ಟ್ ಕಾರುಗಳು ಸ್ಥಾನಪಡೆದುಕೊಂಡಿವೆ.
ಕಾರು ಮಾದರಿಗಳು | ಮಾರ್ಚ್ 2021 | ಮಾರ್ಚ್ 2020 | ಶೇಕಡಾವಾರು ಬೆಳವಣಿಗೆ | |
1 | ಬೊಲೊರೊ | 8,905 | 2,080 | 328 |
2 | ಸ್ಕಾರ್ಪಿಯೋ | 2,331 | 40 | 5728 |
3 | ಎಕ್ಸ್‌ಯುವಿ300 | 2,587 | 814 | 218 |
4 | ಥಾರ್ | 1,912 | 0 | - |
5 | ಎಕ್ಸ್‌ಯುವಿ500 | 603 | 9 | 6600 |
6 | ಮರಾಜೋ | 255 | 23 | 1009 |
7 | ಅಲ್ಟುರಾಸ್ ಜಿ4 | 49 | 0 | - |
8 | ಕೆಯುವಿ100 | 1 | 31 | -97 |
9 | ವೆರಿಟೋ | 0 | 60 | -100 |
10 | ಜೈಲೊ | - | 6 | - |
11 | ಟಿಯುವಿ300 | 0 | 108 | -100 |

ಮಾಹಿತಿಗಳ ಪ್ರಕಾರ, ಮಹೀಂದ್ರಾ ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಮಹೀಂದ್ರಾ ಕಾರುಗಳ ಮೇಲೆಯೇ ಹೆಚ್ಚಿನ ಪರಿಣಾಮ ಉಂಟುಮಾಡುತ್ತಿರುವ ಕಾರಿನ ವಿತರಣೆ ಅವಧಿಯು ಹೆಚ್ಚಳವಾಗುತ್ತಲೇ ಇದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವು ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು. ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದೆ.

ಕಳೆದ ಕೆಲ ತಿಂಗಳಿಂದ ಆಟೋಮೊಬೈಲ್ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಆಟೋಮೊಬೈಲ್ ವಲಯಕ್ಕೆ ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಎಲೆಕ್ಟ್ರಾನಿಕ್ ಸಾಧನೆಗಳಿಗೆ ಹೆಚ್ಚಿನ ಮಟ್ಟದ ಚಿಪ್ ಪೂರೈಕೆ ಮಾಡುತ್ತಿರುವುದು ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಪ್ರಮುಖ ದೇಶಗಳಲ್ಲಿನ ವಾಹನ ಉತ್ಪಾದನೆಯು ಮೇಲೂ ಪರಿಣಾಮ ಉಂಟುಮಾಡುತ್ತಿದ್ದು, ಹೊಸ ಕಾರುಗಳ ಗ್ರಾಹಕರ ಕಾಯುವ ಅವಧಿಯು ಕೂಡಾ ಸಾಕಷ್ಟು ಹೆಚ್ಚಳವಾಗುತ್ತಿದೆ.

ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳ ಸಂಪರ್ಕದಲ್ಲಿ ಪ್ರಮುಖ ಪಾತ್ರವಹಿಸುವ ಸೆಮಿ ಕಂಡಕ್ಟರ್ ಚಿಪ್‌ಗಳನ್ನು ಕಾರಿನ ಡಿಸ್ ಪ್ಲೇ, ಸ್ಪೀಕರ್, ಸ್ಟೆಬಿಲಿಟಿ ಕಂಟ್ರೋಲ್, ಲೈಟಿಂಗ್ ಮುಂತಾದ ಫೀಚರ್ಸ್ ಜೋಡಣೆಯಲ್ಲಿ ಬಳಸಲಾಗುತ್ತದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆದರೆ ಕರೋನಾ ನಂತರ ಮೊದಲ ಬಾರಿಗೆ ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿರುವ ಸಂದರ್ಭದಲ್ಲೇ ಹೊಸ ಚಿಪ್‌ಗಳ ಕೊರೆತೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳ ಜೊತೆಗೆ ಹೊಸ ವಾಹನಗಳ ಬಿಡುಗಡೆಯ ಮೇಲೂ ಪರಿಣಾಮ ಪರಿಣಾಮ ಬೀರುತ್ತಿದ್ದು, ಮಹೀಂದ್ರಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಬೇಕಿದ್ದ ನ್ಯೂ ಜನರೇಷನ್ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಕಾರುಗಳ ಬಿಡುಗಡೆಯನ್ನು ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.