ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

2021ರ ಏಪ್ರಿಲ್ ಅವಧಿಯಲ್ಲಿನ ಮಹೀಂದ್ರಾ ಕಂಪನಿಯ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆಯಾಗಿದ್ದು, ಕೋವಿಡ್ ಎರಡನೇ ಅಲೆಯ ಅಬ್ಬರದ ನಡುವೆಯೂ ಮಹೀಂದ್ರಾ ಕಂಪನಿಯ ಪ್ರಮುಖ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಕೋವಿಡ್ ಪರಿಣಾಮ 2020ರ ಅವಧಿಯಲ್ಲೂ ಸಾಕಷ್ಟು ನಷ್ಟ ಅನುಭವಿಸಿದ್ದ ಕಾರು ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಆದರೆ ಏಪ್ರಿಲ್ ಆರಂಭದಲ್ಲಿ ಹೆಚ್ಚಳವಾದ ಕೋವಿಡ್ 2ನೇ ಅಲೆಗೆ ಆಟೋ ಉದ್ಯಮವು ಮತ್ತೆ ನಷ್ಟ ಭೀತಿಯಲ್ಲಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ತೀವ್ರ ಕುಸಿತ ಕಾಣುತ್ತಿವೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಯುಗಾದಿ ಪ್ರಯಕ್ತ ಕಳೆದ ತಿಂಗಳ ಮೊದಲ ಎರಡು ವಾರಗಳ ಕಾಲ ಹೆಚ್ಚಿನ ಮಟ್ಟದ ವಾಹನ ಮಾರಾಟಗೊಂಡಿದ್ದು, ತದನಂತರದಲ್ಲಿ ವಾಹನ ಖರೀದಿ ಪ್ರಕ್ರಿಯೆ ಸಾಕಷ್ಟು ಇಳಿಕೆಯಾಗಿದೆ. ಮಹೀಂದ್ರಾ ಕಂಪನಿಯು ಏಪ್ರಿಲ್ ಮೊದಲಾರ್ಧದಲ್ಲಿ ಸುಮಾರು 18,186 ಕಾರುಗಳನ್ನು ಮಾರಾಟ ಮಾಡಿದೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಎಕ್ಸ್‌ಯುವಿ300, ಸ್ಕಾರ್ಪಿಯೋ ಮತ್ತು ಥಾರ್ ಕಾರುಗಳು ಅಗ್ರಸ್ಥಾನದಲ್ಲಿದ್ದು, ತಿಂಗಳ ಕಾರು ಮಾರಾಟ ಪ್ರಮಾಣದಲ್ಲಿ ಮಹೀಂದ್ರಾ ಕಂಪನಿ ಮಾರ್ಚ್ ಅವಧಿಗಿಂತಲೂ ಏಪ್ರಿಲ್‌ನಲ್ಲಿ ಶೇ.9ರಷ್ಟು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಬೊಲೆರೊ, ಎಕ್ಸ್‌ಯುವಿ300, ಸ್ಕಾರ್ಪಿಯೋ ಮತ್ತು ಥಾರ್ ಕಾರುಗಳ ನಂತರ ಎಕ್ಸ್‌ಯುವಿ500, ಮರಾಜೋ, ಅಲ್ಟುರಾಸ್ ಜಿ4 ಮತ್ತು ಕೆಯುವಿ100 ನೆಕ್ಸ್ಟ್ ಕಾರುಗಳು ಸ್ಥಾನಪಡೆದುಕೊಂಡಿದ್ದು, ನ್ಯೂ ಜನರೇಷನ್ ಥಾರ್ ಕಾರು ಇದೇ ಮೊದಲ ಬಾರಿಗೆ ಪ್ರತಿ ತಿಂಗಳ ವಾಹನ ಮಾರಾಟದಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಮಾಹಿತಿಗಳ ಪ್ರಕಾರ, ಮಹೀಂದ್ರಾ ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಮಹೀಂದ್ರಾ ಕಾರುಗಳ ಮೇಲೆಯೇ ಹೆಚ್ಚಿನ ಪರಿಣಾಮ ಉಂಟುಮಾಡುತ್ತಿರುವ ಕಾರಿನ ವಿತರಣೆ ಅವಧಿಯು ಹೆಚ್ಚಳವಾಗುತ್ತಲೇ ಇದೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವು ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು. ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದೆ.

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಕಳೆದ ಕೆಲ ತಿಂಗಳಿಂದ ಆಟೋಮೊಬೈಲ್ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಆಟೋಮೊಬೈಲ್ ವಲಯಕ್ಕೆ ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಎಲೆಕ್ಟ್ರಾನಿಕ್ ಸಾಧನೆಗಳಿಗೆ ಹೆಚ್ಚಿನ ಮಟ್ಟದ ಚಿಪ್ ಪೂರೈಕೆ ಮಾಡುತ್ತಿರುವುದು ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಬೊಲೆರೊ, ಥಾರ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಪ್ರಮುಖ ದೇಶಗಳಲ್ಲಿನ ವಾಹನ ಉತ್ಪಾದನೆಯು ಮೇಲೂ ಪರಿಣಾಮ ಉಂಟುಮಾಡುತ್ತಿದ್ದು, ಇದೀಗ ಕೋವಿಡ್ 2ನೇ ಅಲೆಯು ಮತ್ತಷ್ಟು ಪರಿಣಾಮ ಉಂಟುಮಾಡಲಿದೆ ಎನ್ನಲಾಗಿದೆ.

Most Read Articles

Kannada
English summary
Mahindra Sales Report For April 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X