ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಕಾರು ಸುರಕ್ಷತೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿ ಪ್ರಸ್ತುತ ಮಾರಾಟದಲ್ಲಿ ಲಭ್ಯವಿರುವ ಯಾವುದೇ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಎಕ್ಸ್‌ಯುವಿ 300 ಅನ್ನು ಮೀರಿಸುವಲ್ಲಿ ಯಶಸ್ವಿಯಾಗಲಿಲ್ಲ.

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಯು ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಈ ಎಕ್ಸ್‌ಯುವಿ300 ಆಫ್-ರೋಡ್ ಎಸ್‍ಯುವಿ ಅಲ್ಲದಿದ್ದರೂ ಹಲವು ಜನ ಇದರಲ್ಲಿ ಆಫ್-ರೋಡ್ ಮಾಡಲು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಆಲ್ ಇನ್ ಒನ್ ಎಂಟರ್‌ಟೈನ್‌ಮೆಂಟ್ ಅಪ್‌ಲೋಡ್ ಮಾಡಿದ ಮಹೀಂದ್ರಾ ಎಕ್ಸ್‌ಯುವಿ300 ರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ನದಿಯನ್ನು ದಾಟಿರುವುದನ್ನು ತೋರಿಸಲಾಗಿದೆ.

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಸರಾಗವಾಗಿ ದಾಟಿದೆ. ಇದು ಚಾಲಕನ ಅದೃಷ್ಟ ಎಂದು ಹೇಳಬಹುದು. ಏಕೆಂದರೆ ವೇಗವಾಗಿ ಹರಿಯುವ ನೀರಿನಲ್ಲಿ ಕಾರಿನ ಕಂಟ್ರೋಲ್ ತಪ್ಪುವ ಸಾಧ್ಯತೆಗಳಿದೆ. ಅನೇಕ ಬಾರಿ ವೇಗವಾಗಿ ಹರಿಯುವ ನದಿಯಲ್ಲಿ ಕಾರು ಕೂಡ ಕೊಚ್ಚಿಹೋಗುವುದನ್ನು ನೋಡುತ್ತೀವೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಇಲ್ಲಿ ನದಿಯಲ್ಲಿ ಒಬ್ಬ ವ್ಯಕ್ತಿ ನಿಂತಿದ್ದಾನೆ ಎಂದು ನಾವು ವೀಡಿಯೊದಲ್ಲಿ ನೋಡಬಹುದು, ಅದು ಚಾಲಕನಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ. ಅದೃಷ್ಟವಶಾತ್ ನದಿ ತುಂಬಾ ಆಳವಾಗಿರಲಿಲ್ಲ ಆದ್ದರಿಂದ ಏರ್ ಡ್ಯಾಮ್ ತನಕ ಮಾತ್ರ ನೀರು ಹರಿಯುತ್ತಿತ್ತು.

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಫ್ರಂಟ್-ವ್ಹೀಲ್-ಡ್ರೈವ್ ವಾಹನವಾಗಿದ್ದರೂ, ಎಕ್ಸ್‌ಯುವಿ 300 ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿತು. ವೇಗವಾಗಿ ಹರಿಯುವ ನೀರಿನಲ್ಲಿ ಅದರ ಕಂಟ್ರೋಲ್ ಅನ್ನು ಕಳೆದುಕೊಂಡಿಲ್ಲ. ಕಾಂಪ್ಯಾಕ್ಟ್ ಎಸ್‌ಯುವಿ ನದಿಯನ್ನು ದಾಟುತ್ತಿರುವುದು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂದ ಇದೇ ತರಹದ ವಿಡಿಯೋಗಳು ವೈರಲ್ ಆಗಿತ್ತು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಆದರೆ ಈ ರೀತಿ ಮಾಡಬಾರದು. ಯಾಕೆಂದರೆ ಎಲ್ಲಾ ವಾಹನಗಳು ಆಫ್-ರೋಡ್ ವಾಹನವಲ್ಲ. ಅದೃಷ್ಟಕ್ಕೆ ಕೆಲವೊಮ್ಮೆ ಯಶಸ್ವಿಯಾಗುತ್ತಾರೆ. ಆದರೆ ಕೆಲವು ಬಾರಿ ನೀರಿನಲ್ಲಿ ಎಂಜಿನ್ ಆಫ್ ಆಗಿ ನೀರಿನ ವೇಗವು ಹೆಚ್ಚಾದಗ ಅದು ಅನಾಹುತಕ್ಕೆ ಕಾರಣವಾಗಬಹುದು.

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಅಲ್ಲದೇ ನೀರಿನಲ್ಲಿ ಶಾರ್ಟ್ ಸರ್ಕ್ಯೂಟ್ ಅಪಾಯವೂ ಇದೆ. ಇನ್ನು ನೀರು ಎಂಜಿನ್ ಪ್ರವೇಶಿಸಿದರೆ ಅದು ಎಂಜಿನ್ ಹಲವು ವಿಧಗಳಲ್ಲಿ ಹಾನಿಗೊಳಿಸುತ್ತದೆ.ಎಂಜಿನ್ ಹಾನಿಗೊಳಗಾಗುವ ಒಂದು ಮಾರ್ಗವೆಂದರೆ ಅದು ಹೈಡ್ರೊಲಾಕ್ ಆಗಬಹುದು. ಇದನ್ನು ಸರಿಪಡಿಸಲು, ಮೆಕ್ಯಾನಿಕ್ ಇಡೀ ಎಂಜಿನ್ ಅನ್ನು ತೆರೆದು ಅದನ್ನು ಪರಿಶೀಲಿಸಬೇಕಾಗುತ್ತದೆ ಇದಕ್ಕೆ ಸಾಕಷ್ಟು ಹಣ ಮತ್ತು ಸಮಯ ವ್ಯರ್ಥವಾಗುತ್ತದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ನೀವು ಆಫ್-ರೋಡಿಂಗ್ ಮಾಡಲು ಬಯಸಿದರೆ 4×4 ಸಿಸ್ಟಂ ಅನ್ನು ಹೊಂದಿರುವ ಎಸ್‍ಯುವಿಯನ್ನು ಆರಿಸಿಕೊಳ್ಳಬೇಕು. ಅದು ಕೂಡ ಅದರ ಸಾಮರ್ಥ್ಯಕ್ಕಿಂತ ಅಧಿಕವಾಗಿ ಹೋಗಬಾರದು. ಆಫ್-ರೋಡ್ ಮಾಡುವಾಗ ಉತ್ತಮ ಆಫ್-ರೋಡ್ ಕೌಶಲ್ಯ ಮತ್ತು ವಾಹನದ ಸಾಮರ್ಥ್ಯದ ಬಗ್ಗೆ ಅರಿವಿರಬೇಕು.

ವೇಗವಾಗಿ ಹರಿಯುತ್ತಿರುವ ನದಿ ನೀರಿನಲ್ಲಿ ಸರಾಗವಾಗಿ ಹೊರ ಬಂದ ಮಹೀಂದ್ರಾ ಎಕ್ಸ್‌ಯುವಿ300

ಇದರಿಂದ ಸಾಮಾನ್ಯ ವಾಹನದಲ್ಲಿ ಆಫ್-ರೋಡ್ ಮಾಡುವ ಸಾಹಸಕ್ಕೆ ಮುಂದಾಗಬೇಡಿ. ನೀರಿನಲ್ಲಿ ವಾಹನವನ್ನು ಇಳಿಸುವುದು ತುಂಬಾ ಅಪಾಯಕಾರಿ ಸಾಹಸವಾಗಿದೆ. ಮಳೆಗಾಲದಲ್ಲಿ ಎಷ್ಟು ಜನರು ಇಂತಹ ಸಾಹಸ ಮಾಡಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

Image Courtesy: All in One Entertainment

Most Read Articles

Kannada
English summary
Watch A Mahindra XUV300 Cross A River Like A Boss. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X