ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಕೋವಿಡ್ ಪರಿಣಾಮ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರವಾಗಿ ಏರಿಳಿತ ಉಂಟಾಗುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳ ಕಾರ್ಯನಿರ್ವಹಣೆಗೆ ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಾರು ಕಂಪನಿಗಳಿಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟುಮಾಡುತ್ತಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೊಸ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಸೆಮಿ ಕಂಡಕ್ಟರ್ ಕೊರತೆಯು ಸರಿಯಾದ ಸಮಯಕ್ಕೆ ವಾಹನಗಳಲ್ಲಿ ವಿತರಣೆಯು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಹೊಸ ಎಕ್ಸ್‌ಯುವಿ700 ವಿತರಣೆ ಹೆಚ್ಚಿಸಲು ಪರದಾಟುತ್ತಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಸೆಮಿಕಂಡಕ್ಟರ್ ಕೊರತೆ ಪರಿಣಾಮ ಕಾರು ಉತ್ಪಾದನಾ ಪ್ರಮಾಣವನ್ನು ತಗ್ಗಿಸಿರುವ ಮಹೀಂದ್ರಾ ಕಂಪನಿಯು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಹೆಚ್ಚಿನ ಮಟ್ಟದ ಸೆಮಿಕಂಡಕ್ಟರ್ ಅವಶ್ಯವಿರುವ ಎಕ್ಸ್‌ಯುವಿ700 ಟಾಪ್ ಎಂಡ್ ಆವೃತ್ತಿಗಳಲ್ಲಿ ಕೆಲವು ಪ್ರಮುಖ ತಾಂತ್ರಿಕ ಅಂಶಗಳನ್ನು ಕೈಬಿಟ್ಟು ಉತ್ಪಾದನೆ ಮಾಡಲು ನಿರ್ಧರಿಸಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಗಳಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ತೆಗೆದುಹಾಕುವ ಮೂಲಕ ಕೇವಲ ಅವಶ್ಯವಿರುವ ತಾಂತ್ರಿಕ ಅಂಶಗಳನ್ನು ನೀಡಲು ನಿರ್ಧರಿಸಿದ್ದು, ಈ ಮೂಲಕ ಸೆಮಿಕಂಡಕ್ಟರ್ ಮೇಲಿನ ಅವಲಂಬನೆಯನ್ನು ತಗ್ಗಿಸಲು ಈ ಹೊಸ ಕ್ರಮಕ್ಕೆ ಮುಂದಾಗಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಒಂದು ವೇಳೆ ಟಾಪ್ ಎಂಡ್ ಮಾದರಿಯಲ್ಲಿ ಎಡಿಎಎಸ್ ತಂತ್ರಜ್ಞಾನವನ್ನು ಆಯ್ಕೆ ರೂಪದಲ್ಲಿ ನೀಡುವುದರಿಂದ ಕಾರಿನ ಬೆಲೆಯನ್ನು ಸಾಕಷ್ಟು ಇಳಿಕೆಯಾಗಲಿದ್ದು, ಎಡಿಎಎಸ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ಮಾತ್ರ ಅಳವಡಿಸಲಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಎಕ್ಸ್‌ಯುವಿ700 ಎಎಕ್ಸ್ 7 ರೂಪಾಂತರಗಳಲ್ಲಿ ಎಡಿಎಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿರುವುದರಿಂದ ಕಾರಿನ ಉತ್ಪಾದನೆಯಲ್ಲಿ ವಿಳಂಬವಾಗುತ್ತಿರುವ ಬಗೆಗೆ ಮಾತುಕತೆ ನಡೆಸಿರುವ ಮಹೀಂದ್ರಾ ಆಡಳಿತ ಮಂಡಳಿಯು ಸೆಮಿಕಂಡಕ್ಟರ್ ಪೂರೈಕೆ ಪ್ರಮಾಣವು ಸುಧಾರಿಸುವ ತನಕ ಸೆಮಿ ಕಂಡಕ್ಟರ್ ಆಧರಿಸಿರುವ ತಾಂತ್ರಿಕ ಅಂಶಗಳನ್ನು ಆಯ್ಕೆ ರೂಪದಲ್ಲಿ ನೀಡಲು ನಿರ್ಧರಿಸಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೀಗಾಗಿ ಮುಂಬರುವ ಕೆಲ ತಿಂಗಳ ತನಕ ಎಕ್ಸ್‌ಯುವಿ700 ಮಾದರಿಯಲ್ಲಿ ಪ್ರಮುಖ ತಾಂತ್ರಿಕ ಅಂಶಗಳನ್ನು ಆಯ್ಕೆ ರೂಪದಲ್ಲಿ ನೀಡುವ ಮೂಲಕ ಸೆಮಿಕಂಡಕ್ಟರ್ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಲಿರುವ ಮಹೀಂದ್ರಾ ಕಂಪನಿಯು ಕಾರಿನ ಬೆಲೆ ಇಳಿಕೆಗೆ ಮುಂದಾಗಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೊಸ ಕಾರು ಇದುವರೆಗೆ ಸುಮಾರು 75 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದರೂ ಕಂಪನಿಯು ಇದುವರೆಗೆ ಕೇವಲ 3 ಸಾವಿರದಿಂದ 4 ಸಾವಿರ ಯುನಿಟ್‌ಗಳನ್ನು ಮಾತ್ರ ವಿತರಣೆ ಮಾಡಿದ್ದು, ಮುಂಬರುವ ಜನವರಿ 14ರ ವೇಳೆಗೆ 14 ಸಾವಿರ ಯುನಿಟ್ ವಿತರಣೆ ಗುರಿಯು ತಲಪಲು ಸಾಧ್ಯವಿಲ್ಲ ಎನ್ನಲಾಗಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಸದ್ಯಕ್ಕೆ ದಾಖಲಾಗಿರುವ ಬುಕ್ಕಿಂಗ್ ಪ್ರಮಾಣವನ್ನು ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳಬಹುದಾಗಿದ್ದು, ಬುಕ್ಕಿಂಗ್ ಮಾಡಿರುವ ಹೈ ಎಂಡ್ ಮಾದರಿಗಳು ಅತಿ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಬೆಸ್ ವೆರಿಯೆಂಟ್‌ಗಳ ಖರೀದಿಗೆ ಹೆಚ್ಚಿನ ಸಮಯಾವಕಾಶ ಬೇಕಾಗಬಹುದಾಗಿದೆ.

ಸೆಮಿ ಕಂಡಕ್ಟರ್ ಕೊರತೆ: ಮಹೀಂದ್ರಾ ಎಕ್ಸ್‌ಯುವಿ700 ಬೆಲೆ ಇಳಿಕೆ ಸಾಧ್ಯತೆ?

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Mahindra xuv700 may become more affordable in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X